• search

ಮೋದಿಯನ್ನು ಗೆಲ್ಲಿಸಿದ್ದ 'ಆ ವ್ಯಕ್ತಿ' ಈಗ ನಿತೀಶ್ ಪಕ್ಷದ ಅಭ್ಯರ್ಥಿ?

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಪಾಟ್ನಾ, ಸೆಪ್ಟೆಂಬರ್ 10: ಚುನಾವಣಾ ಕಾರ್ಯತಂತ್ರಗಳನ್ನು ಹೆಣೆಯುವ ಕಾರ್ಯಗಳಲ್ಲಿ ಕಳೆದ ಆರು ವರ್ಷಗಳಿಂದ ತೊಡಗಿಸಿಕೊಂಡಿರುವ, ಮುಖ್ಯವಾಗಿ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಪ್ರಚಾರದ ಪ್ರಮುಖ ಮುಖವಾಗಿದ್ದ ಪ್ರಶಾಂತ್ ಕಿಶೋರ್ ಚುನಾವಣಾ ರಾಜಕೀಯಕ್ಕೆ ಇಳಿಯಲು ಸಜ್ಜಾಗಿದ್ದಾರೆ.

  ಯಾವ ಪಕ್ಷವನ್ನು ಸೇರಲು ಬಯಸಿದ್ದಾರೆ ಎನ್ನುವುದನ್ನು ಅವರು ಬಹಿರಂಗಪಡಿಸಿಲ್ಲ. ಆದರೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾ ದಳವನ್ನು ಸೇರುವ ಸೂಚನೆಗಳು ದೊರೆತಿವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆಗಳಿವೆ.

  ಪ್ರಶಾಂತ್ ಕಿಶೋರ್ 'ಐ ಪ್ಯಾಕ್' ಸಮೀಕ್ಷೆಯಲ್ಲಿ ಮೋದಿಗೆ ಜಯ

  2015ರ ಮಹಾಮೈತ್ರಿಕೂಟದ ಚುನಾವಣಾ ಕಾರ್ಯತಂತ್ರವನ್ನು ಹೆಣೆದಿದ್ದ ಪ್ರಶಾಂತ್ ಕಿಶೋರ್, ನಿತೀಶ್ ಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

  ನರೇಂದ್ರ ಮೋದಿಗೆ ಆಪ್ತ

  ನರೇಂದ್ರ ಮೋದಿಗೆ ಆಪ್ತ

  2012ರಲ್ಲಿ ರಾಜಕೀಯ ಕಾರ್ಯತಜ್ಞನಾಗಿ ವೃತ್ತಿ ಆರಂಭಿಸಿದ ಕಿಶೋರ್, ಗುಜರಾತ್‌ನ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರೊಂದಿಗೆ ಸಮೀಪದಿಂದ ಕೆಲಸ ಮಾಡಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರು.

  ಪ್ರಶಾಂತ್ ಕಿಶೋರ್ ವಿರುದ್ಧ ಸೇಡು ತೀರಿಸಿಕೊಂಡ ಅಮಿತ್ ಶಾ

  ಅಮಿತ್ ಶಾ ಜತೆ ಮನಸ್ತಾಪ

  ಅಮಿತ್ ಶಾ ಜತೆ ಮನಸ್ತಾಪ

  ಆದರೆ, ಚುನಾವಣೆ ಬಳಿಕ ಅಮಿತ್ ಶಾ ಮತ್ತು ಕಿಶೋರ್ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಕಿಶೋರ್ ತಮ್ಮ ದಾರಿಯನ್ನು ಬದಲಿಸಿದ್ದರು. ನಂತರದ ವರ್ಷಗಳಲ್ಲಿ ಕಿಶೋರ್, ಬಿಜೆಪಿಯ ರಾಜಕೀಯ ವಿರೋಧಗಳಾದ ನಿತೀಶ್ ಕುಮಾರ್ ಮಾತ್ರವಲ್ಲದೆ, ಕಾಂಗ್ರೆಸ್‌ ಜತೆಗೂ ಕೆಲಸ ಮಾಡಿದ್ದರು.

  ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಬಿಟ್ಟು ಯಾರು ಬೆಸ್ಟ್?

  ಹತ್ತಿರ ಸೇರಿಸದ ತೇಜಸ್ವಿ ಯಾದವ್

  ಹತ್ತಿರ ಸೇರಿಸದ ತೇಜಸ್ವಿ ಯಾದವ್

  ರಾಜಕೀಯ ವಲಯದಲ್ಲಿ ನಿತೀಶ್ ಕುಮಾರ್ ಚಾಣಕ್ಯ ಎಂದೇ ಗುರುತಿಸಿಕೊಂಡಿರುವ ಕಿಶೋರ್, ನಿತೀಶ್ ಅವರು ಬಿಜೆಪಿ ಜತೆ ಮರಳಿ ಸಖ್ಯ ಬೆಳೆಸಿದ ಬಳಿಕವೂ ಅವರ ಜತೆಗೆ ಬಾಂಧವ್ಯ ಮುಂದುವರಿದಿದ್ದರು.

  ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಅವರ ಪಕ್ಷದ ನಡುವೆ ಮೂಡಿದ್ದ ಒಡಕನ್ನು ಸರಿಪಡಿಸುವ ಕಾರ್ಯಕ್ಕೂ ಕಿಶೋರ್ ಅವರನ್ನು ನೇಮಿಸಲಾಗಿತ್ತು. ಆದರೆ, ತಂದೆಯ ಗೈರಿನಲ್ಲಿ ಪಕ್ಷದ ನೇತೃತ್ವ ವಹಿಸಿಕೊಂಡಿರುವ ತೇಜಸ್ವಿ ಯಾದವ್ ಇದಕ್ಕೆ ಒಪ್ಪದ ಕಾರಣ ಅದು ಸಾಧ್ಯವಾಗಿರಲಿಲ್ಲ.

  ಅಮರಿಂದರ್ ಸಿಂಗ್ ಮೆಚ್ಚುಗೆ

  ಅಮರಿಂದರ್ ಸಿಂಗ್ ಮೆಚ್ಚುಗೆ

  ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್‌ ಪಕ್ಷದ ಭರ್ಜರಿ ಗೆಲುವಿಗೆ ಕಿಶೋರ್ ಕಾರಣರಾಗಿದ್ದರು. ಈ ಬಗ್ಗೆ ಅಮರಿಂದರ್ ಸಿಂಗ್ ಅವರ ಪಾತ್ರವನ್ನು ಬಹಿರಂಗವಾಗಿ ಶ್ಲಾಘಿಸಿದ್ದರು.

  ಉತ್ತರ ಪ್ರದೇಶದಲ್ಲಿ ವೈಫಲ್ಯ

  ಉತ್ತರ ಪ್ರದೇಶದಲ್ಲಿ ವೈಫಲ್ಯ

  ಆದರೆ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್-ಸಮಾಜವಾದಿ ಪಕ್ಷಗಳ ಮೈತ್ರಿಯ ಪರವಾಗಿ ಅವರು ನಡೆಸಿದ್ದ ಪ್ರಚಾರ ತಂತ್ರ ಕೈಕೊಟ್ಟಿತ್ತು. ಇದಕ್ಕೆ ದೆಹಲಿಯಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಕಿಶೋರ್ ಅವರ ಯೋಜನೆಯೇ ಕಾರಣ ಎಂದು ರಾಜ್ಯದ ಮುಖಂಡರು ದೂರಿದ್ದರು.

  ಆದರೆ, ಅಖಿಲೇಶ್ ಯಾದವ್ ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಪಕ್ಷದೊಳಗೆ ಒಡಕು ಮೂಡಿಸಿತ್ತು ಎಂದು ಇತರೆ ಮೂಲಗಳು ತಿಳಿಸಿದ್ದವು. ಉತ್ತರಾಖಂಡದಲ್ಲಿಯೂ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪರ ನಡೆಸಿದ್ದ ತಂತ್ರಗಳು ಕೈಕೊಟ್ಟಿದ್ದವು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Election Strategist Prashanth Kishore, who worked for BJP in 2014 Lok sabha elections is ready to join Nithish Kumar's JDU.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more