ಐದು ರಾಜ್ಯ ಚುನಾವಣೆ: 7 ಹಂತಗಳಲ್ಲಿ ಹೇಗಿರಲಿದೆ ಪ್ರಕ್ರಿಯೆ?

ನವದೆಹಲಿ, ಜನವರಿ 8: ಭಾರತದಲ್ಲಿ ಐದು ರಾಜ್ಯ ವಿಧಾನಸಭೆ ಚುನಾವಣಾ ದಿನಾಂಕ ಪ್ರಕಟಗೊಂಡಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ, ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ್ ಮತ್ತು ಮಣಿಪುರ ರಾಜ್ಯಗಳಲ್ಲಿ ಚುನಾವಣೆಗೆ ಅಧಿಸೂಚನೆ ಹೊರಡಿಸಿದ್ದಾರೆ.

ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರ, ಗೋವಾದ 40 ವಿಧಾನಸಭೆ ಕ್ಷೇತ್ರ, ಪಂಜಾಬ್ 117 ವಿಧಾನಸಭೆ ಕ್ಷೇತ್ರ, ಉತ್ತರಾಖಂಡ 70 ವಿಧಾನಸಭೆ ಕ್ಷೇತ್ರ ಮತ್ತು ಮಣಿಪುರದ 60 ವಿಧಾನಸಭೆ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಐದು ರಾಜ್ಯಗಳ ಚುನಾವಣೆಯ ಪೈಕಿ ಯಾವ ಹಂತದಲ್ಲಿ ಯಾವಾಗ ನಾಮಪತ್ರ ಸಲ್ಲಿಸುವುದು, ನಾಮಪತ್ರ ಮರುಪರಿಶೀಲನೆ, ನಾಮಪತ್ರ ವಾಪಸ್, ಮತದಾನ ಹಾಗೂ ಫಲಿತಾಂಶದ ದಿನಾಂಕದ ಕುರಿತು ಮಾಹಿತಿಗಾಗಿ ಮುಂದೆ ಓದಿ.

Election Schedule for Uttar Pradesh, Punjab, Uttarakhand, Manipur and Goa announced

ಪಂಚರಾಜ್ಯಗಳಿಗೆ ಚುನಾವಣೆ ಘೋಷಿಸಿದ ಆಯೋಗ:

* 7 ಹಂತಗಳಲ್ಲಿ ಪಂಚರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಅಂತಿಮ ಫಲಿತಾಂಶ ಹೊರಬೀಳಲಿದೆ.

ಮೊದಲ ಹಂತದ ಚುನಾವಣೆ: ಉತ್ತರ ಪ್ರದೇಶ

ಜನವರಿ 14ರಂದು ಅಧಿಸೂಚನೆ

ಜನವರಿ 21ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

ಜನವರಿ 24ರಂದು ನಾಮಪತ್ರ ಮರುಪರಿಶೀಲನೆ

ಜನವರಿ 27 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ

ಫೆಬ್ರವರಿ 10ರಂದು ಮತದಾನ

ಎರಡನೇ ಹಂತದ ಮತದಾನ: ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ

ಜನವರಿ 21ರಂದು ಅಧಿಸೂಚನೆ

ಜನವರಿ 28ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

ಜನವರಿ 29ರಂದು ನಾಮಪತ್ರ ಮರುಪರಿಶೀಲನೆ

ಜನವರಿ 31 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ

ಫೆಬ್ರವರಿ 14ರಂದು ಮತದಾನ

ಮೂರನೇ ಹಂತದ ಮತದಾನ: ಉತ್ತರ ಪ್ರದೇಶ,

ಜನವರಿ 25ರಂದು ಅಧಿಸೂಚನೆ

ಫೆಬ್ರವರಿ 1ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

ಫೆಬ್ರವರಿ 2ರಂದು ನಾಮಪತ್ರ ಮರುಪರಿಶೀಲನೆ

ಜನವರಿ 4 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ

ಫೆಬ್ರವರಿ 20ರಂದು ಮತದಾನ

ನಾಲ್ಕನೇ ಹಂತದ ಮತದಾನ: ಉತ್ತರ ಪ್ರದೇಶ

ಜನವರಿ 27ರಂದು ಅಧಿಸೂಚನೆ

ಫೆಬ್ರವರಿ 3ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

ಫೆಬ್ರವರಿ 4ರಂದು ನಾಮಪತ್ರ ಮರುಪರಿಶೀಲನೆ

ಜನವರಿ 7 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ

ಫೆಬ್ರವರಿ 23ರಂದು ಮತದಾನ

ಐದನೇ ಹಂತದ ಮತದಾನ: ಉತ್ತರ ಪ್ರದೇಶ

ಫೆಬ್ರವರಿ 1ರಂದು ಅಧಿಸೂಚನೆ

ಫೆಬ್ರವರಿ 8ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

ಫೆಬ್ರವರಿ 9ರಂದು ನಾಮಪತ್ರ ಮರುಪರಿಶೀಲನೆ

ಜನವರಿ 11 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ

ಫೆಬ್ರವರಿ 27ರಂದು ಮತದಾನ

ಆರನೇ ಹಂತದ ಮತದಾನ: ಉತ್ತರ ಪ್ರದೇಶ

ಫೆಬ್ರವರಿ 4ರಂದು ಅಧಿಸೂಚನೆ

ಫೆಬ್ರವರಿ 11ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

ಫೆಬ್ರವರಿ 14ರಂದು ನಾಮಪತ್ರ ಮರುಪರಿಶೀಲನೆ

ಜನವರಿ 16ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ

ಮಾರ್ಚ್ 3ರಂದು ಮತದಾನ

ಏಳನೇ ಹಂತದ ಮತದಾನ: ಉತ್ತರ ಪ್ರದೇಶ

ಫೆಬ್ರವರಿ 10ರಂದು ಅಧಿಸೂಚನೆ

ಫೆಬ್ರವರಿ 17ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

ಫೆಬ್ರವರಿ 18ರಂದು ನಾಮಪತ್ರ ಮರುಪರಿಶೀಲನೆ

ಜನವರಿ 21ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ

ಮಾರ್ಚ್ 7ರಂದು ಮತದಾನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+