ಬಿಜೆಪಿ, ಕಾಂಗ್ರೆಸ್ ಗೆ ಚುನಾವಣಾ ಆಯೋಗ ನೊಟೀಸ್
ನವದೆಹಲಿ, ನ. 30: 'ಚುನಾವಣೆಯಲ್ಲಿ ನೀವು ಮಾಡಿದ ಖರ್ಚಿನ ವಿವರವನ್ನು ನಿಗದಿತ ದಿನದೊಳಗೆ ನೀಡಬೇಕು, ಇಲ್ಲವಾದರೆ ಪಕ್ಷದ ಮಾನ್ಯತೆಯನ್ನೇ ರದ್ದು ಮಾಡಬೇಕಾಗುವುದು' ಎಂದು ಕೇಂದ್ರ ಚುನಾವಣಾ ಆಯೋಗ ವಿವಿಧ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದೆ.
ಕೇಂದ್ರದ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್, ಸಮಾಜವಾದಿ, ಆಮ್ ಆದ್ಮಿ ಪಕ್ಷ ಸೇರಿದಂತೆ 20 ರಾಜಕೀಯ ಪಕ್ಷಗಳು ಕೇಂದ್ರ ಚುನಾವಣಾ ಆಯೋಗದಿಂದ ನೊಟೀಸ್ ಪಡೆದುಕೊಂಡಿವೆ.['ಶೂ' ಹೊಡೆತದಿಂದ ನಿತಿನ್ ಗಡ್ಕರಿ ಜಸ್ಟ್ ಮಿಸ್]

ಸದ್ಯ ನಡೆದ ವಿವಿಧ ರಾಜ್ಯಗಳ ವಿಧಾನಸಭೆ ಮತ್ತು 2014 ರ ಲೋಕಸಭಾ ಚುನಾವಣೆಯ ಖರ್ಚು ವೆಚ್ಚದ ವಿವರ ನೀಡುವಂತೆ ತಾಕೀತು ಮಾಡಿದೆ. ನಿಮಗೆ 15 ದಿನ ಕಾಲಾವಕಾಶ ನೀಡುತ್ತಿದ್ದು ಅಷ್ಟರಲ್ಲಿ ಸಮರ್ಪಕ ಲೆಕ್ಕ ಒದಗಿಸಿ, ಇಲ್ಲವಾದರೆ ಮಾನ್ಯತೆ ರದ್ದು ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದೆ.[ಇತಿಹಾಸದ ಅತ್ಯಂತ ದುಬಾರಿ ಲೋಕಸಭಾ ಚುನಾವಣೆ]
ಚುನಾವಣೆ ಮುಗಿದ 75 ದಿನದೊಳಗಾಗಿ ಆಯೋಗಕ್ಕೆ ರಾಜಕೀಯ ಪಕ್ಷಗಳು ಲೆಕ್ಕಾಚಾರ ಒದಗಿಸಬೇಕು. ಅತಿ ಹೆಚ್ಚು ಅಂದರೆ 90 ದಿನಗಳ ಕಾಲಾವಕಾಶ ಪಡೆದುಕೊಳ್ಳಬಹುದು. ಆದರೆ ತಿಂಗಳುಗಳೇ ಉರುಳಿದ್ದರೂ ಪ್ರಮುಖ ರಾಜಕೀಯ ಪಕ್ಷಗಳು ಯಾವ ವಿವರ ನೀಡಿಲ್ಲ ಎಂದು ಆಯೋಗ ತಿಳಿಸಿದೆ. ಈ ಬಗ್ಗೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಯಾವ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications