ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ರಾಜ್ಯಗಳ ವಿಧಾನಸಭೆ ಚುನಾವಣೆ: ದಿನಾಂಕ ಘೋಷಿಸಿದ ಚು.ಆಯೋಗ

|
Google Oneindia Kannada News

ನವದೆಹಲಿ, ಅಕ್ಟೋಬರ್ 06: 5 ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಇಂದು(ಅ.06) ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ.

ಛತ್ತೀಸ್ ಗಢದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೊದಲ ಹಂತ(18 ವಿಧಾನಸಭಾ ಕ್ಷೇತ್ರ) ನವೆಂಬರ್ 12(ಸೋಮವಾರ) ರಂದು ನಡೆಯಲಿದೆ, ಛತ್ತೀಸ್ ಗಢ ಎರಡನೇ ಹಂತ ನವೆಂಬರ್ 20(ಮಂಗಳವಾರ) ರಂದು ನಡೆಯಲಿದೆ.

ಮಧ್ಯಪ್ರದೇಶ ಮತ್ತು ಮಿಜೋರಾಂಗಳಲ್ಲಿಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ನವೆಂಬರ್ 28 ರಂದು ಮತದಾನ ನಡೆಯಲಿದೆ.

Election Commission announces dates for upcommining assembly elections today

ರಾಜಸ್ಥಾನ ಮತ್ತು ತೆಲಂಗಾಣಗಳಲ್ಲಿ ಒಂದೇ ಹಂತದ ಮತದಾನ ನಡೆಯಲಿದ್ದು ಡಿಸೆಂಬರ್ 7(ಶುಕ್ರವಾರ)ರಂದು ಚುನಾವಣೆ ನಡೆಯಲಿದೆ. ಎಲ್ಲಾ ರಾಜ್ಯಗಳ ಚುನಾವಣಾ ಫಲಿತಾಂಶವೂ ಡಿಸೆಂಬರ್ 11 ಮಂಗಳವಾರದಂದು ಹೊರಬೀಳಲಿದೆ.

Newest FirstOldest First
3:46 PM, 6 Oct

ಕರ್ನಾಟಕದ ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರ ಮತ್ತು ಮಂಡ್ಯ, ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ
3:44 PM, 6 Oct

ಕರ್ನಾಟಕದಲ್ಲಿ ನಡೆಯಲಿರುವ ಮೂರು ಲೋಕಸಭಾ ಕ್ಷೇತ್ರಗಳ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನವೆಮಬರ್ 3 ರಂದು ನಡೆಯಲಿದೆ.
3:37 PM, 6 Oct

ಇವಿಎಂ(Electronic Voting Machine) ಮತ್ತು ವಿವಿಪ್ಯಾಟ್ ಗಳನ್ನು ಬಳಸಲಾಗುತ್ತಿದ್ದು, ಪಾರದರ್ಶಕ ಚುನಾವಣೆಯ ಭರವಸೆಯನ್ನು ಆಯುಕ್ತರು ನೀಡಿದರು.
3:37 PM, 6 Oct

ರಾಜಸ್ಥಾನದಲ್ಲಿ ಒಟ್ಟು 200 ವಿಧಾನಸಭಾ ಕ್ಷೇತ್ರಗಳಿದ್ದರೆ, ಮಧ್ಯಪ್ರದೇಶದಲ್ಲಿ 230, ಛತ್ತೀಸ್ ಗಢದಲ್ಲಿ 90, ಮಿಜೋರಾಂ ನಲ್ಲಿ 40 ವಿಧಾನಸಭಾ ಕ್ಷೇತ್ರಗಳಿವೆ.
3:37 PM, 6 Oct

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ಮಿಜೋರಾಂ ರಾಜ್ಯಗಳಲ್ಲಿ ವಿಧಾನಸಭೆಯ ಕಾಲಾವಧಿ ಡಿಸೆಂಬರ್ -ಜನವರಿಯಲ್ಲಿ ಅಂತ್ಯವಾಗಲಿದೆ.
3:37 PM, 6 Oct

ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಒಪಿ ರಾವತ್, ಚುನಾವಣೆಯ ದಿನಾಂಕವನ್ನು ಘೋಷಿಸಿದರು.
3:33 PM, 6 Oct

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಗೊಳ್ಳಲಿದೆ.
Advertisement
3:32 PM, 6 Oct

ರಾಜಸ್ಥಾನ ಮತ್ತು ತೆಲಂಗಾಣಗಳಲ್ಲಿ ಒಂದೇ ಹಂತದ ಮತದಾನ ನಡೆಯಲಿದ್ದು ಡಿಸೆಂಬರ್ 7(ಶುಕ್ರವಾರ)ರಂದು ಚುನಾವಣೆ ನಡೆಯಲಿದೆ. ಎಲ್ಲಾ ರಾಜ್ಯಗಳ ಚುನಾವಣಾ ಫಲಿತಾಂಶವೂ ಡಿಸೆಂಬರ್ 11 ಮಂಗಳವಾರದಂದು ಹೊರಬೀಳಲಿದೆ.
3:32 PM, 6 Oct

ಮಧ್ಯಪ್ರದೇಶ ಮತ್ತು ಮಿಜೋರಾಂಗಳಲ್ಲಿಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ನವೆಂಬರ್ 28 ರಂದು ಮತದಾನ ನಡೆಯಲಿದೆ.
3:32 PM, 6 Oct

ಛತ್ತೀಸ್ ಗಢದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೊದಲ ಹಂತ(18 ವಿಧಾನಸಭಾ ಕ್ಷೇತ್ರ) ನವೆಂಬರ್ 12(ಸೋಮವಾರ) ರಂದು ನಡೆಯಲಿದೆ, ಛತ್ತೀಸ್ ಗಢ ಎರಡನೇ ಹಂತ ನವೆಂಬರ್ 20(ಮಂಗಳವಾರ) ರಂದು ನಡೆಯಲಿದೆ.

{document1}

English summary
Election Commission to announce dates for assembly elections in Madhya Pradesh, Rajasthan, Chhattisgarh, Mizoram today(Oct 6)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X