ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡಿ ಮೂಲಕ ದೇಶದಲ್ಲಿ ಭಯೋತ್ಪಾದನೆ: ಕಾಂಗ್ರೆಸ್ ಕಿಡಿ

|
Google Oneindia Kannada News

ನವದೆಹಲಿ, ಜುಲೈ. 27: ಸೋನಿಯಾ ಗಾಂಧಿ ಅವರು ಮತ್ತೊಮ್ಮೆ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುತ್ತಿದ್ದಂತೆ, ದೇಶದಲ್ಲಿ ಕೇಂದ್ರ ಸರ್ಕಾರ ಇಡಿಯಿಂದ ಭಯೋತ್ಪಾದನೆ ಸೃಷ್ಟಿಸುತ್ತಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯನ್ನು ಆಯುಧ ಮಾಡಿಕೊಂಡಿದೆ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ದೇಶದಲ್ಲಿ ಇಡಿ ನಾಟಕ ಸೃಷ್ಟಿಸುತ್ತಿದೆ. ಮೊದಲು ರಾಹುಲ್ ಗಾಂಧಿ ಅವರನ್ನು ಕರೆಸಿ ಐದು ದಿನಗಳಲ್ಲಿ ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಯಿತು. ಇಂದು ಮೂರನೇ ಬಾರಿಗೆ ಸೋನಿಯಾ ಗಾಂಧಿಗೆ ಸಮನ್ಸ್ ನೀಡಲಾಗಿದೆ. ಇದು ಎಷ್ಟು ದಿನ ವಿಚಾರಣೆ ಯಾಕೆ ನಡೆಯುತ್ತದೆ ಎಂದು ನಮಗೆ ತಿಳಿದಿಲ್ಲ. ಇಡಿ ಭಯೋತ್ಪಾದನೆಯನ್ನು ಸೃಷ್ಟಿಸಿದೆ. ದೇಶದಲ್ಲಿ ಇಡಿ ಭಯೋತ್ಪಾದನೆ ಬಗ್ಗೆ ಸಕಾಲದಲ್ಲಿ ಸುಪ್ರೀಂ ಕೋರ್ಟ್‌ ನಿರ್ಧಾರ ತೆಗೆದುಕೊಳ್ಳಬೇಕು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಮೋದಿ ಸರ್ಕಾರದಲ್ಲಿ ಅಧಿಕಗೊಂಡ ಇಡಿ ದಾಳಿಗಳು- ಸರ್ಕಾರ ಹೇಳಿದ್ದೇನು? ಮೋದಿ ಸರ್ಕಾರದಲ್ಲಿ ಅಧಿಕಗೊಂಡ ಇಡಿ ದಾಳಿಗಳು- ಸರ್ಕಾರ ಹೇಳಿದ್ದೇನು?

ಗುಲಾಂ ನಬಿ ಆಜಾದ್, ಜೈರಾಮ್ ರಮೇಶ್ ಮತ್ತು ಆನಂದ್ ಶರ್ಮಾ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೆಹ್ಲೋಟ್, ಶೇಕಡಾ 5ಕ್ಕಿಂತ ಕಡಿಮೆ ಯಶಸ್ಸಿನ ಪ್ರಮಾಣವನ್ನು ಹೊಂದಿದ್ದರೂ ಇಡಿ ಸಿಬಿಐಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಾವು ನೋಡಿದಂತೆ ಚುನಾಯಿತ ಸರ್ಕಾರಗಳನ್ನು ಕಿತ್ತೊಗೆಯಲು ಕೇಂದ್ರ ಸರ್ಕಾರವು ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಆದರೆ ಇಡಿ ಕ್ಯಾಬಿನೆಟ್‌ಗೆ ಮಾಹಿತಿ ನೀಡಲಾಗುತ್ತಿಲ್ಲ ಮಹಾರಾಷ್ಟ್ರದ ಪರಿಸ್ಥಿತಿಯಿಂದ ನಮ್ಮ ಪ್ರಜಾಪ್ರಭುತ್ವವು ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ನೋಡಬಹುದಾಗಿದೆ ಎಂದು ಗೆಹ್ಲೋಟ್ ಹೇಳಿದರು.

ಈ ಹಿಂದೆ ಪ್ರಕರಣ ಮುಚ್ಚಲು ನಿರ್ಧರಿಸಿತ್ತು

ಈ ಹಿಂದೆ ಪ್ರಕರಣ ಮುಚ್ಚಲು ನಿರ್ಧರಿಸಿತ್ತು

ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಮಾತನಾಡಿ, ತಮ್ಮ ಆರೋಗ್ಯ ಸರಿಯಿಲ್ಲದ ಕಾರಣ ಇತ್ತೀಚಿನ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಕಳೆದ 2 ತಿಂಗಳಿನಿಂದ ನಾನು ಅಸ್ವಸ್ಥನಾಗಿದ್ದೆ. ಇದರಿಂದಾಗಿ ನಾನು ಧರಣಿಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಕಳೆದ ತಿಂಗಳಿಂದ ನನ್ನ ಪಕ್ಷದ ಸಹೋದ್ಯೋಗಿಗಳು ಏನು ಹೇಳಿದ್ದಾರೆ ಎಂಬುದರ ಕುರಿತು ನಾನು ಹೊಸದಾಗಿ ಹೇಳಲು ಏನೂ ಇಲ್ಲ. ಇಡಿ ಈ ಹಿಂದೆ ಪ್ರಕರಣವನ್ನು ಮುಚ್ಚಲು ನಿರ್ಧರಿಸಿತ್ತು. ಈಗ ಅದನ್ನು ಮತ್ತೆ ತೆರೆಯಲಾಗಿದೆ. ಇದು ಗ್ರಹಿಕೆಗೆ ನಿಲುಕ್ಕದ್ದಾಗಿದೆ ಎಂದು ಆಜಾದ್ ಹೇಳಿದರು.

ಸೋನಿಯಾ ಗಾಂಧಿ ಕರೆಯುವ ಅವಶ್ಯಕತೆ ಏನಿದೆ

ಸೋನಿಯಾ ಗಾಂಧಿ ಕರೆಯುವ ಅವಶ್ಯಕತೆ ಏನಿದೆ

ಸೋನಿಯಾ ಗಾಂಧಿಯವರಿಗೆ ಇಡಿ ಪದೇ ಪದೇ ಏಕೆ ಕರೆಸಿಕೊಳ್ಳುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅವರು ವಯಸ್ಸಾದವರು ಮತ್ತು ಆರೋಗ್ಯವಾಗಿಲ್ಲ. ಇಡಿ ಈಗಾಗಲೇ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದಾಗ ಸೋನಿಯಾ ಗಾಂಧಿ ಅವರನ್ನು ಕರೆಯುವ ಅವಶ್ಯಕತೆ ಏನಿದೆ. ಎಲ್ಲಾ ಪತ್ರಗಳು ಇಡಿ ಬಳಿ ಇರುವಾಗ ಇದು ಸರಿಯಲ್ಲ ಎಂದರು.

ಮೂರನೇ ಸುತ್ತಿನ ವಿಚಾರಣೆ

ಮೂರನೇ ಸುತ್ತಿನ ವಿಚಾರಣೆ

ಏತನ್ಮಧ್ಯೆ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಸುತ್ತಿನ ವಿಚಾರಣೆಗಾಗಿ ಸೋನಿಯಾ ಗಾಂಧಿ ಅವರು ತಮ್ಮ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಇಡಿ ಕಚೇರಿಗೆ ಹಾಜರಾಗಿದ್ದರು. 75 ವರ್ಷದ ಸೋನಿಯಾ ಅವರು ಮಂಗಳವಾರ ಸಂಜೆ 7 ಗಂಟೆಯ ಮೊದಲು ಕೇಂದ್ರ ದೆಹಲಿಯಲ್ಲಿರುವ ಇಡಿ ಕಚೇರಿಯಿಂದ ತನ್ನ ಹೇಳಿಕೆಯನ್ನು ದಾಖಲಿಸಿ ಹೊರಟಿದ್ದರು.

ಇಡಿ ಹೆಚ್ಚುವರಿ ನಿರ್ದೇಶಕಿ ಮೋನಿಕಾ ಶರ್ಮಾ ತಂಡದಿಂದ ವಿಚಾರಣೆ

ಇಡಿ ಹೆಚ್ಚುವರಿ ನಿರ್ದೇಶಕಿ ಮೋನಿಕಾ ಶರ್ಮಾ ತಂಡದಿಂದ ವಿಚಾರಣೆ

ಮಂಗಳವಾರ ಸೋನಿಯಾ ಗಾಂಧಿಯವರು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮತ್ತು ತನಿಖೆಯಲ್ಲಿರುವ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಭಾಗಿಯಾಗಿರುವ ಬಗ್ಗೆ ಸುಮಾರು 30 ಪ್ರಶ್ನೆಗಳಿಗೆ ಪ್ರತಿಕ್ರಿಯೆಯನ್ನು ಕೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಮಧ್ಯ ದೆಹಲಿಯಲ್ಲಿರುವ ಇಡಿ ಕಚೇರಿಯಲ್ಲಿ ಆಕೆಯ ವಿಚಾರಣೆಯು ಸುಮಾರು 11 ಗಂಟೆಗೆ ಪ್ರಾರಂಭವಾಯಿತು ಮತ್ತು 90 ನಿಮಿಷಗಳ ಊಟದ ವಿರಾಮದ ನಂತರ ಸಂಜೆ 7 ರವರೆಗೆ ಮುಂದುವರೆಯಿತು. ಇಡಿ ಹೆಚ್ಚುವರಿ ನಿರ್ದೇಶಕಿ ಮೋನಿಕಾ ಶರ್ಮಾ ನೇತೃತ್ವದ ತಂಡ ಆಕೆಯ ವಿಚಾರಣೆ ನಡೆಸಿತು.

Recommended Video

ಜಿಮ್ ನಲ್ಲಿ ಸರ್ಕಸ್ ಮಾಡೋಕೆ ಹೋಗಿ ಗಾಯ ಮಾಡ್ಕೊಂಡ ಜಾನಿ | Oneindia Kannada

English summary
The Congress has lashed out that the central government is creating terror in the country using the ED and has weaponized the Prevention of Money Laundering Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X