ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಆರ್ಥಿಕತೆ ವೇಗ ನಿಧಾನವಾಗಿದೆ ಎಂದ ಆರ್ಥಿಕ ಸಚಿವಾಲಯ

|
Google Oneindia Kannada News

2018-19ನೇ ಸಾಲಿನಲ್ಲಿ ಭಾರತದ ಆರ್ಥಿಕತೆಯ ಪ್ರಗತಿ ವೇಗ ನಿಧಾನವಾಗಿದೆ. ಖಾಸಗಿ ಬಳಕೆ ಪ್ರಮಾಣದಲ್ಲಿನ ಇಳಿಕೆ, ರಫ್ತು ಪ್ರಮಾಣದಲ್ಲಿ ಇಳಿಕೆ, ನಿಗದಿತ ಹೂಡಿಕೆ ಪ್ರಗತಿಯಲ್ಲಿನ ಹಿನ್ನಡೆ ಕಾರಣಕ್ಕೆ ಭಾರತದ ಆರ್ಥಿಕತೆ ನಿಧಾನವಾಗಿದೆ ಎಂದು ಆರ್ಥಿಕ ಸಚಿವಾಲಯದ ವರದಿಯಲ್ಲಿ ತಿಳಿಸಲಾಗಿದೆ.

ಕೇಂದ್ರ ಸಾಂಖ್ಯಿಕ ಕಚೇರಿಯು ಮೂರನೇ ತ್ರೈಮಾಸಿಕದ ರಾಷ್ಟ್ರೀಯ ಖಾತೆಯ ದತ್ತಾಂಶಗಳನ್ನು ಬಿಡುಗಡೆ ಮಾಡಿದ್ದು, 2018-19ನೇ ಸಾಲಿಗೆ ಫೆಬ್ರವರಿಯಲ್ಲಿ 7ರಿಂದ 7.2 ಪರ್ಸೆಂಟ್ ಗೆ ಪ್ರಗತಿ ಅಂದಾಜು ಪರಿಷ್ಕೃತಗೊಳಿಸಲಾಗಿತ್ತು. ಏಳು ಪರ್ಸೆಂಟ್ ಪ್ರಗತಿಯು ಕಳೆದ ಐದು ವರ್ಷಗಳಲ್ಲೇ ಕನಿಷ್ಠ ಮಟ್ಟದ್ದಾಗಿದೆ.

ಭಾರತದ ಅಂದಾಜು ಪ್ರಗತಿ ದರ ಕಡಿತಗೊಳಿಸಿದ ಐಎಂಎಫ್, ಹೊಸ ಸರಕಾರಕ್ಕೆ ಸವಾಲು ಭಾರತದ ಅಂದಾಜು ಪ್ರಗತಿ ದರ ಕಡಿತಗೊಳಿಸಿದ ಐಎಂಎಫ್, ಹೊಸ ಸರಕಾರಕ್ಕೆ ಸವಾಲು

ಮಾರ್ಚ್ ನಲ್ಲಿ ನೀಡಿದ ಆರ್ಥಿಕ ವರದಿಯಲ್ಲಿ, ಹಣಕಾಸು ನೀತಿಯ ಮೂಲಕ ಪ್ರಗತಿಗೆ ಜೀವ ತುಂಬಲು ಯತ್ನಿಸಲಾಯಿತು. ರೆಪೋ ದರದಲ್ಲಿ ಕಡಿತ ಹಾಗೂ ಬ್ಯಾಂಕ್ ನಗದು ಪ್ರಮಾಣ ಸರಳಗೊಳಿಸುವ ಮೂಲಕ ಯತ್ನಿಸಲಾಯಿತಿ ಎಂದು ಆರ್ಥಿಕ ಸಚಿವಾಲಯ ಹೇಳಿದೆ.

Economic growth may have slowed in 2018-19: Report

ಆದರೂ ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿಯೇ ಇದೆ. ಮುಂಬರುವ ದಿನಗಳಲ್ಲಿ ವೇಗವಾಗಿ ಬೆಳೆಯಲಿದೆ ಎನ್ನಲಾಗಿದೆ. ನಿಜವಾದ ವಿನಿಮಯ ದರವು Q4‌ (ಜನವರಿಯಿಂದ ಮಾರ್ಚ್) 2018-19ರಲ್ಲಿ ಏರಿಕೆ ಆಗಿದೆ. ರಫ್ತು ಉತ್ತೇಜನಕ್ಕೆ ಸದ್ಯ ಭವಿಷ್ಯದಲ್ಲಿ ಸವಾಲಾಗಿ ಪರಿಣಮಿಸಲಿದೆ ಎಂದು ಹೇಳಲಾಗಿದೆ.

ಬಾಹ್ಯ ಅಂಶಗಳನ್ನು ಗಮನದಲ್ಲಿಟ್ಟು ಹೇಳಬೇಕು ಅಂದರೆ, ವಿತ್ತೀಯ ಕೊರತೆ ಪ್ರಮಾಣವನ್ನು ಜಿಡಿಪಿಗೆ ಹೋಲಿಸಿದರೆ Q4 (ಜನವರಿ-ಮಾರ್ಚ್) 2018-19 ಇಳಿಕೆಯಾಗಿದೆ. ಇದರಿಂದ ಆರ್ಥಿಕ ಪ್ರಗತಿ ಸೋರಿಕೆಯನ್ನು ಮಿತಿಗೊಳಿಸುತ್ತದೆ. ಕೇಂದ್ರ ಸರಕಾರದ ವಿತ್ತೀಯ ಕೊರತೆಯು ಆರ್ಥಿಕ ಜವಾಬ್ದಾರಿ ಮತ್ತು ಆಯ-ವ್ಯಯ ನಿರ್ವಹಣೆ ಗುರಿಯು (ಎಫ್ ಆರ್ ಬಿಎಂ) ಇಳಿಕೆ ಹಾದಿಯಲ್ಲಿದೆ.

ಭಾರತದ GDP ದರ 7 ಪರ್ಸೆಂಟ್ ಅನ್ನೋದು ಅನುಮಾನ: ರಘುರಾಮ್ ರಾಜನ್ಭಾರತದ GDP ದರ 7 ಪರ್ಸೆಂಟ್ ಅನ್ನೋದು ಅನುಮಾನ: ರಘುರಾಮ್ ರಾಜನ್

ರಿಸರ್ವ್ ಬ್ಯಾಂಕ್ ನಿಂದ ಆದ ಆರ್ಥಿಕತೆ ಸುಧಾರಣೆಯ ಕಾರಣಕ್ಕೆ 2018-19ರಲ್ಲಿ ಹಣದುಬ್ಬರ ಇಳಿಕೆ ಆಯಿತು. ಆದರೂ ವರ್ಷದ ಕೊನೆಯಲ್ಲಿ ಒಂದಿಷ್ಟು ಹೆಚ್ಚಾಯಿತು. ಫೆಬ್ರವರಿ ಹಾಗು ಏಪ್ರಿಲ್ ನಲ್ಲಿ ಹಣದುಬ್ಬರವನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ದರ ಕಡಿತ ಮಾಡಲಾಯಿತು. 2019ರಲ್ಲಿ ನಾಲ್ಕು ತಿಂಗಳಲ್ಲಿ ಆರ್ ಬಿಐನಿಂದ ಎರಡು ಬಾರಿ 0.25 ಪರ್ಸೆಂಟ್ ಕಡಿತ ಮಾಡಿದ್ದು, ವರ್ಷದಲ್ಲೇ ಕನಿಷ್ಠ ಆರು ಪರ್ಸೆಂಟ್ ಗೆ ತರಲಾಗಿದೆ.

ಆರ್ಥಿಕ ನೀತಿ ಸಮಿತಿ ರಚನೆ ಆದ ಮೇಲೆ 2016ರ ಕೊನೆಗೆ ಮೇಲಿಂದ ಮೇಲೆ ದರ ಕಡಿತ ಮಾಡಿದ್ದು ಅದೇ ಮೊದಲು.

English summary
The Indian economy appears to have slowed down in 2018-19 due to lower private consumption, tepid growth in fixed investment and muted exports, a finance ministry report has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X