ಉತ್ತರ ಭಾರತದ ಹಲವೆಡೆ ಪ್ರಬಲ ಭೂಕಂಪ: 6.1 ತೀವ್ರತೆ ದಾಖಲು
ನವದೆಹಲಿ, ಸೆಪ್ಟೆಂಬರ್ 24:ದೆಹಲಿಯ ಎನ್‌ಸಿಆರ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ ತೀವ್ರತೆ 6.1 ಮ್ಯಾಗ್ನಿಟ್ಯೂಟ್ ದಾಖಲಾಗಿದೆ. ಭೂಕಂಪದಲ್ಲಿ ಮೃತರಾದವರ ಸಂಖ್ಯೆ 19 ಕ್ಕೇರಿದ್ದು, ನೂರಾರು ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ದೆಹಲಿಯಲ್ಲಿ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಕಂಪ ಸಂಭವಿಸಿದೆ ಎನ್ನಲಾಗಿದೆ. 73 ಕಿ.ಮೀ ಪಾಕಿಸ್ತಾನದ ಲಾಹೋರ್ ಭಾಗದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಸೇಸ್ಮಲಾಜಿಕಲ್ ಸೆಂಟರ್ ತಿಳಿಸಿದೆ.
ಹರ್ಯಾಣ, ಛಂಡೀಗಢ, ಹಿಮಾಚಲ ಪ್ರದೇಶದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.ಪಂಜಾಬ್, ಹಿಮಾಚಲಪ್ರದೇಶ, ಕಾಶ್ಮೀರ ಸೇರಿದಂತೆ ಹಲವು ಕಡೆ ಭೂಕಂಪ ಸಂಭವಿಸಿದೆ.
ಮಂಗಳವಾರ ಸುಮಾತು 4.30ರ ವೇಳೆಗೆ ಭೂಕಂಪ ಸಂಭವಿಸಿದೆ. ಲಾಹೋರ್ ಹಾಗೂ ರಾವಲ್‌ಪಿಂಡಿ ಮಧ್ಯೆ ಭೂಕಂಪದ ಕೇಂದ್ರಬಿಂದುವಾಗಿದೆ.
ಲಾಹೋರ್‌ನಿಂದ 173 ಕಿ.ಮೀ ದೂರ ಹಾಗೂ ರಾವಲ್‌ಪಿಂಡಿಯಿಂದ 80 ಕಿ.ಮೀ ವ್ಯಾಪ್ತಿಯಲ್ಲಿ ಭೂಕಂಪ ಸಂಭವಿಸಿದೆ. ಪಾಕಿಸ್ತಾನದಲ್ಲೂ ಭೂಕಂಪದ ತೀವ್ರತೆ 6.1 ದಾಖಲಾಗಿದೆ.












Click it and Unblock the Notifications