ಶ್ರೀನಗರದಲ್ಲಿ ಮತ್ತೆ ಭೂಕಂಪ: ರಿಕ್ಟರ್ ಮಾಪನದಲ್ಲಿ 4.5 ತೀವ್ರತೆ ದಾಖಲು
ಶ್ರೀನಗರ, ಡಿಸೆಂಬರ್ 11: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಇಂದು(ಡಿ.11) ಬೆಳಿಗ್ಗೆ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 4.5 ತೀವ್ರತೆ ದಾಖಲಾಗಿದೆ.
ಇಂದು ಬೆಳಿಗ್ಗೆ ಸುಮಾರು 4.45 ರ ಸುಮಾರಿಗೆ ಭುಕಂಪ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಯಾವುದೇ ಸಾವು ನೋವಿನ ಕುರಿತು ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಕಣಿವೆ ರಾಜ್ಯದಲ್ಲಿ ಪದೇ ಪದೇ ಇಂಥ ಭೂಕಂಪಗಳು ಸಮಭವಿಸುತ್ತಿದ್ದು, ಕಳೆದ ಶನಿವಾರವಷ್ಟೇ 4.7 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಮೇಘಾಲಯದಲ್ಲೂ ಭೂಕಂಪ
ಮೇಘಾಲಯದಲ್ಲೂ ಇಂದು ಬೆಳಿಗ್ಗೆ 8 ರ ಸುಮಾರಿಗೆ 4.7 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಸಾವು ನೋವಿನ ವರದಿಯಾಗಿಲ್ಲ.
ರಾಜಧಾನಿ ದೆಹಲಿಯಲ್ಲೂ ಡಿ.6 ರಂದು 5.0 ತೀವ್ರತೆಯ ಭೂಕಮಪ ಸಂಭವಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications