ಭಾರತದಲ್ಲಿ ಅಲ್ಲಲ್ಲಿ ಸಾಧಾರಣ ಭೂಕಂಪ
ಕೋಲ್ಕೊತ್ತಾ, ಮೇ 22: ಬುಧವಾರ ರಾತ್ರಿ 9.30ರಲ್ಲಿ ಭಾರತದ ಪೂರ್ವ ಭಾಗ ಮತ್ತು ಚೆನ್ನನಲ್ಲಿ ಸಾಧಾರಣ ಪ್ರಮಾಣದ ಭೂಕಂಪವಾಗಿದೆ. ಬಂಗಾಳಕೊಲ್ಲಿಯಲ್ಲಿ ಕೇಂದ್ರೀಕೃತವಾಗಿದ್ದ ಭೂಕಂಪವು ರಿಕ್ಟರ್ ಮಾಪಕದಲ್ಲಿ 6.0 ಯಷ್ಟಿತ್ತು.
ಒರಿಸ್ಸಾ, ದೆಹಲಿ, ಚೆನ್ನೈ, ಜಾರ್ಖಂಡ್ ಭಾಗಗಳಲ್ಲಿ ಈ ಭೂಕಂಪ ಸಂಭವಿಸಿದೆ. ಈ ಭೂಕಂಪನದಿಂದ ಯಾವುದೇ ಸಾವುನೋವು, ನಷ್ಟ ಉಂಟಾಗಿಲ್ಲ ಎಂದು ಅಧಿಕೃತ ಮೂಲಗಳು ಹೇಳಿವೆ. ಬಂಗಾಳಕೊಲ್ಲಿಯಲ್ಲಿ ಕೇಂದ್ರೀಕೃತವಾಗಿದ್ದರಿಂದ ಕಂಪನಗಳ ನಂತರ ಸುನಾಮಿ ಭೀತಿಯೇನೂ ಕಾಡಿಲ್ಲ. ಸುಮಾರು 40 ಸೆಕೆಂಡ್ ಕಾಲ ಈ ಭೂಕಂಪನ ಆಗಿದೆ.
ತಾಜಾ ವರದಿಗಳ ಪ್ರಕಾರ ಆಂಧ್ರದ ಕರಾವಳಿಯಲ್ಲೂ ಭೂಕಂಪನವಾಗಿರುವುದು ಹವಾಮಾನ ಇಲಾಖೆಯ ಗಮನಕ್ಕೆ ಬಂದಿದೆ. (ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ, ಜನರ ಪರದಾಟ)













Click it and Unblock the Notifications