ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಿಕೋಬಾರ್ ದ್ವೀಪದಲ್ಲಿ 4.8 ತೀವ್ರತೆಯ ಭೂಕಂಪ
ಪೋರ್ಟ್ ಬ್ಲೇರ್, ಫೆಬ್ರವರಿ 28: ನಿಕೋಬಾರ್ ದ್ವೀಪದಲ್ಲಿ ಗುರುವಾರ ಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಇಂದು ಬೆಳಿಗ್ಗೆ ಸುಮಾರು 5:30 ರ ಸುಮಾರಿಗೆ ಭೂಕಂಪ ಸಂಭವಿಸಿಸದ್ದು, ರಿಕ್ಟರ್ ಮಾಪನದಲ್ಲಿ 4.8 ತೀವ್ರತೆ ದಾಖಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಫೆಬ್ರವರಿ 20 ರಂದು ರಾಜಧಾನಿ ದೆಹಲಿಯಲ್ಲೂ ಲಘು ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪನದಲ್ಲಿ 4.6 ತೀವ್ರತೆ ದಾಖಲಾಗಿತ್ತು. ಭೂಕಂಪದ ಕೇಂದ್ರ ಬಿಂದು ಎನ್‌ಸಿಆರ್‌ನಲ್ಲಿ 10 ಕಿ.ಮೀ ಭೂಮಿಯ ಆಳದಲ್ಲಿ ಕೇಂದ್ರೀಕೃತವಾಗಿತ್ತು.
ಫೆಬ್ರವರಿ 8ರಂದು ದೆಹಲಿ, ಎನ್‌ಸಿಆರ್, ಜಮ್ಮು ಮತ್ತು ಕಾಶ್ಮೀರದಲ್ಲಿ 5.6 ತೀವ್ರತೆ ದಾಖಲಾಗಿತ್ತು.
ಸದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ 5.1 ಭೂಕಂಪ ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು.