• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂಡಮಾನ್ ಮತ್ತು ನಿಕೋಬಾರ್‌ ದ್ವೀಪದಲ್ಲಿ ಸಣ್ಣ ಭೂಕಂಪ

|

ದಿಗ್ಲಿಪುರ್, ಡಿ.6: ಅಂಡಮಾನ್ ಮತ್ತು ನಿಕೋಬಾರ್‌ ದ್ವೀಪದಲ್ಲಿ ಭಾನುವಾರ ಸಂಜೆ ಭೂಕಂಪ ಸಂಭವಿಸಿದೆ. ಅಂಡಮಾನ್ ಮತ್ತು ನಿಕೋಬಾರ್‌ ದ್ವೀಪದಲ್ಲಿ ಸಂಭವಿಸಿದ ಕಂಪನ ಪ್ರಮಾಣ ರಿಕ್ಟರ್ ಮಾಪಕದಲ್ಲಿ 4.3ರಷ್ಟಿದೆ ಎಂದು ಭೂಕಂಪನ ಮಾಪನ ಕೇಂದ್ರ ಮಾಹಿತಿ ನೀಡಿದೆ.

ಅಂಡಮಾನ್ ಮತ್ತು ನಿಕೋಬಾರ್‌ ದ್ವೀಪದಲ್ಲಿ ಸಂಭವಿಸಿದ ಕಂಪನದಿಂದ ಯಾವುದೇ ಹಾನಿಯಾಗಿರುವ ಸುದ್ದಿ ಸಿಕ್ಕಿಲ್ಲ. ಸುನಾಮಿ ಎಚ್ಚರಿಕೆಯನ್ನು ನೀಡಿಲ್ಲ ಎಂದು ನೈಸರ್ಗಿಕ ವಿಕೋಪ ನಿಯಂತ್ರಣ ಕೇಂದ್ರ ತಿಳಿಸಿದೆ.

ಡಿಗ್ಲಿಪುರದ ಸುಮಾರು 55 ಕಿಲೋಮೀಟರ್ ನ ಆಗ್ನೇಯ ಭಾಗದಲ್ಲಿ ರಾತ್ರಿ 7.05 ವೇಳೆಯಲ್ಲಿ ಸಂಭವಿಸಿದೆ. ಭೂಕಂಪವು 10 ಕಿ.ಮೀ ಆಳದಲ್ಲಿ ಕಂಡು ಬಂದಿದೆ.

ಜೂನ್10ರಂದು ಅಂಡಮಾನ್ ಮತ್ತು ನಿಕೋಬಾರ್‌ನ ಡಿಗ್ಲಿಪುರದ ವಾಯುವ್ಯಕ್ಕೆ 110 ಕಿ.ಮೀ ಭೂಕಂಪನ ಸಂಭವಿಸಿತ್ತು. ಭೂಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ 4.3 ದಾಖಲಾಗಿತ್ತು.

2019ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಎರಡು ಗಂಟೆಗಳ ಅವಧಿಯಲ್ಲಿ ಸಣ್ಣಮಟ್ಟದಿಂದ ಸಾಧಾರಣ ಪ್ರಮಾಣದ 9 ಭೂಕಂಪಗಳು ಸಂಭವಿಸಿತ್ತು ಕೆಲವು ಗಂಟೆಗಳಲ್ಲಿ 20ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿತ್ತು. ಇದಾದ ಬಳಿಕ ಒಂದು ವರ್ಷದ ಅವಧಿಯಲ್ಲಿ ಸಣ್ಣ ಪ್ರಮಾಣದ ಭೂಕಂಪಗಳು ಸಂಭವಿಸಿದ್ದರೂ ದೊಡ್ಡ ಪ್ರಮಾಣ ತೀವ್ರತೆಯಾಗಲಿ, ಸುನಾಮಿ ಎಚ್ಚರಿಕೆಯಾಗಲಿ ಕಂಡು ಬಂದಿಲ್ಲ.

English summary
An earthquake of magnitude 4.3 on the Richter Scale jolted the Andaman and Nicobar Islands on Sunday, the National Center for Seismology (NCS) informed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X