ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಮೋರ್ ಕರಾವಳಿಯಲ್ಲಿ ಭೂಕಂಪ: ಸುನಾಮಿ ಎಚ್ಚರಿಕೆ

|
Google Oneindia Kannada News

ನವದೆಹಲಿ ಮೇ 27: ಪೂರ್ವ ಟಿಮೋರ್ ಕರಾವಳಿಯಲ್ಲಿ ಶುಕ್ರವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಜಿಯೊಲಾಜಿಕಲ್ ಸರ್ವೆ ಹೇಳಿದ್ದು, ಹಿಂದೂ ಮಹಾಸಾಗರದಲ್ಲಿ ಸುನಾಮಿ ಎಚ್ಚರಿಕೆಯನ್ನೂ ನೀಡಿದೆ.

ಭೂ ಕಂಪದ ತೀವ್ರತೆಯು ಹಿಂದೂ ಮಹಾಸಾಗರದ ಪ್ರದೇಶದ ಮೇಲೆ ಪರಿಣಾಮ ಬೀರಲಿದ್ದು, ಭಾರೀ ಪ್ರಮಾಣದ ಅಲೆಗಳು ಸುನಾಮಿಯನ್ನು ಉಂಟುಮಾಡಬಹುದು ಎಂದು ಮುನ್ನೆಚ್ಚರಿಕೆ ನೀಡಿದೆ.

Breaking news: ಹರಿಯಾಣದ ಜಾಜ್ಜರ್‌ನಲ್ಲಿ ಕಡಿಮೆ ತೀವ್ರತೆಯಲ್ಲಿ ಭೂಕಂಪBreaking news: ಹರಿಯಾಣದ ಜಾಜ್ಜರ್‌ನಲ್ಲಿ ಕಡಿಮೆ ತೀವ್ರತೆಯಲ್ಲಿ ಭೂಕಂಪ

ಟಿಮೋರ್ ದ್ವೀದಪ ಪೂರ್ವ ಆರಂಭದಿಂದ 51.4 ಕಿಲೋ ಮೀಟರ್ ಆಳದಲ್ಲಿ ಭೂ ಕಂಪ ಸಂಭವಿಸಿದೆ ಎಂದು ಅಮೆರಿಕ ಜಿಯಾಲಾಜಿಕಲ್ ಸರ್ವೆ ಹೇಳಿದೆ. ಪೂರ್ವ ಟಿಮೋರ್ ಮತ್ತು ಇಂಡೋನೇಷ್ಯಾ ನಡುವೆ ಭೂಕಂಪನ ಕೇಂದ್ರಬಿಂದುವಾಗಿದ್ದು. ಹಿಂದೂ ಮಹಾಸಾಗರದಲ್ಲಿ ಸುನಾಮಿ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

Earth Quake in Timor Coast: Tsunami Warning in Indian Ocean

ಸ್ಥಳೀಯರೊಬ್ಬರು ಹೇಳಿದ ಪ್ರಕಾರ "ಭೂಕಂಪನದ ಅನುಭವ ನಮಗೆ ಆಯಿತು, ಆದರೆ ಅದು ತುಂಬಾ ಸಮಯ ಇರಲಿಲ್ಲ, ಆದರೆ ಸದ್ಯಕ್ಕೆ ಯಾವುದೇ ಹಾನಿಯಾಗಿಲ್ಲ, ಸಾರ್ವಜನಿಕರು ಎಂದಿನಂತೆ ದೈನಂದಿನ ಚಟುವಟಿಕೆಯಲ್ಲಿ ತೊಡಗಿದ್ದಾರೆ" ಎಂದು ಹೇಳಿದರು.

ರಿಂಗ್‌ ಆಫ್‌ ಫೈರ್; ಪೂರ್ವ ಟಿಮೋರ್ ಮತ್ತು ಇಂಡೋನೇಷ್ಯಾ ಪೆಸಿಫಿಕ್ ಸಾಗರದ "ರಿಂಗ್ ಆಫ್ ಫೈರ್" ಪ್ರದೇಶದಲ್ಲಿ ಇವೆ, ರಿಂಗ್ ಆಫ್‌ ಫೈರ್ ಪ್ರದೇಶದಲ್ಲಿ ಜ್ವಾಲಾಮುಖಿಯಂತಹ ಘಟನೆ ಸಾಮಾನ್ಯವಾಗಿದೆ, ಆಗಾಗ್ಗೆ ಈ ಪ್ರದೇಶದಲ್ಲಿ ಭೂಕಂಪನ ಸಂಭವಿಸುತ್ತಲೇ ಇರುತ್ತದೆ. ಸುಮಾರು 450 ಜ್ವಾಲಾಮುಖಿಗಳು ಈ ಪ್ರದೇಶದಲ್ಲಿದೆ. ಪ್ರಪಂಚದಲ್ಲಿರುವ ಒಟ್ಟು ಜ್ವಾಲಾಮುಖಿಗಳ ಪೈಕಿ ಶೇ.75 ರಷ್ಟು ರಿಂಗ್ ಆಫ್‌ ಫೈರ್ ಪ್ರದೇಶದಲ್ಲಿವೆ.

ಜಪಾನ್ ಹಾಗೂ ತೈವಾನ್ ನಡುವೆ ಭಾರಿ ಭೂಕಂಪ, No ಸುನಾಮಿ ಅಲರ್ಟ್ ಜಪಾನ್ ಹಾಗೂ ತೈವಾನ್ ನಡುವೆ ಭಾರಿ ಭೂಕಂಪ, No ಸುನಾಮಿ ಅಲರ್ಟ್

ಪೂರ್ವ ಟಿಮೋರ್ 13 ಲಕ್ಷ ಜನಸಂಖ್ಯೆಯನ್ನು ಹೊಂದಿದೆ ಮತ್ತು ಆಗ್ನೇಯ ಏಷ್ಯಾದ ಚಿಕ್ಕ ದೇಶವಾಗಿದೆ, ಇತ್ತೀಚೆಗೆ ಸ್ವಾತಂತ್ರ್ಯದ 20 ನೇ ವಾರ್ಷಿಕೋತ್ಸವವನ್ನು ಆಚರಿಸಿದೆ.

Earth Quake in Timor Coast: Tsunami Warning in Indian Ocean

ಫೆಬ್ರವರಿಯಲ್ಲಿ, ನೆರೆಯ ಇಂಡೋನೇಷ್ಯಾದ ಉತ್ತರ ಸುಮಾತ್ರಾದಲ್ಲಿ 6.2 ತೀವ್ರತೆಯ ಭೂಕಂಪವು 12 ಜನರ ಸಾವಿಗೆ ಕಾರಣವಾಗಿತ್ತು. 2004 ರಲ್ಲಿ ಸಂಭವಿಸಿದ 9.1-ತೀವ್ರತೆಯ ಭೂಕಂಪದಿಂದ ಸುಮಾತ್ರಾ ಕರಾವಳಿಯನ್ನು ಅಪ್ಪಳಿಸಿದ ಸುನಾಮಿ ಇಂಡೋನೇಷ್ಯಾದಲ್ಲಿ ಸುಮಾರು 1,70,000 ಸೇರಿದಂತೆ ಪ್ರದೇಶದಾದ್ಯಂತ 2,20,000 ಜನರನ್ನು ಬಲಿ ಪಡೆದಿತ್ತು.

2018ರಲ್ಲಿ ಲಾಂಬೋಕ್ ದ್ವೀಪದಲ್ಲಿ ಪ್ರಬಲ ಭೂಕಂಪನ ಉಂಟಾಗಿತ್ತು. ಅದರ ಬಳಿಕ ಹಲವು ವಾರಗಳ ಕಾಲ ನಿರಂತರ ಕಂಪನಗಳಾಗಿದ್ದವು. ಇದರಿಂದ ಲಾಂಬೋಕ್ ದ್ವೀಪ ಮತ್ತು ನೆರೆಯ ಸುಂಬಾವಾದಲ್ಲಿ 550ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದರು.

English summary
A 6.1-magnitude earthquake struck off the East Timor coast on Friday, the US Geological Survey said, warning of a tsunami in the Indian Ocean.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X