ಒಂದು ಇಯರ್ ಫೋನ್‌ ನಿಂದ ಹೋಯ್ತು 13 ಮಕ್ಕಳ ಪ್ರಾಣ!

Recommended Video

      ಲಕ್ನೌ ( ಉತ್ತರಪ್ರದೇಶ ) : 13 ಮಕ್ಕಳನ್ನ ಬಲಿಪಡೆದ ಶಾಲಾ ವಾಹನ ಚಾಲಕ | Oneindia kannada

      ಬೆಂಗಳೂರು,ಏಪ್ರಿಲ್ 27: ಶಾಲಾ ಬಸ್ ಎಂದರೆ ಚಾಲಕ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲುವುದಿಲ್ಲ, ಮಕ್ಕಳ ಆಟ, ತಮಾಷೆಯ ಮಾತುಗಳು, ತುಂಟಾಟ ಹೀಗೆ ಮಕ್ಕಳ ಮನಸ್ಥಿತಿಯೇ ವಿಚಿತ್ರ. ಅಂತಹ ಮುಗ್ದ ಮಕ್ಕಳ ನಗುವನ್ನು ಕಸಿದುಕೊಂಡ ಚಾಲಕನಿಗೆ ಏನೆನ್ನಬೇಕೋ, ಇಯರ್ ಫೋನ್ ಕಿವಿಯಲ್ಲಿ ಚುಚ್ಚಿಕೊಂಡು ಮುಗ್ಧ ಮಕ್ಕಳನ್ನು ಬಲಿತೆಗೆದುಕೊಂಡಿದ್ದಾನೆ.

      ಗುರುವಾರ ಖುಷಿ ನಗರದ ಡಿವೈನ್ ಪಬ್ಲಿಕ್ ಸ್ಕೂಲ್ ನ ಹತ್ತು ವರ್ಷದೊಳಗಿನ 13 ಮಕ್ಕಳು ಪ್ರಾಣತೆತ್ತಿದ್ದಾರೆ. ಅಪಘಾತದ ಸ್ಥಳದಲ್ಲೇ ಚಾಲಕ ಮೃತಪಟ್ಟಿದ್ದಾನೆ. ವ್ಯಾನಿನಲ್ಲಿದ್ದ 12 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದ ಮಕ್ಕಳನ್ನು ಗೋರಖಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.

      ಗುರುವಾರ ಬೆಳಗ್ಗೆ 7.10ರಲ್ಲಿ ಡಿವೈನ್ ಪಬ್ಲಿಕ್ ಶಾಲೆಯ 25 ಮಕ್ಕಳನ್ನು ವ್ಯಾನ್ ಗೆ ಹತ್ತಿಸಿಕೊಂಡ ಚಾಲಕ ಶಾಲೆಯತ್ತ ತೆರಳುತ್ತಿದ್ದ, ಮಾರ್ಗದುದ್ದಕ್ಕೂ ಇಯರ್ ಫೋನ್ ನಲ್ಲಿ ಸಂಗೀತ ಕೇಳಿಕೊಂಡು, ವಾಹನ ಚಲಾಯಿಸುತ್ತಿದ್ದ, ಮಾರ್ಗ ಮಧ್ಯೆ ಬೆಹಪೂರ್ವ ಎಂಬಲ್ಲಿ ಕಾವಲುರಹಿತ ರೈಲ್ವೆ ಕ್ರಾಸಿಂಗ್ ಇರುವುದು ತಿಳಿಸಿದ್ದರೂ, ಅತಿಯಾದ ಆತ್ಮವಿಶ್ವಾಸದಲ್ಲಿ ವಾಹನ ಚಲಾಯಿಸುತ್ತಿದ್ದ. ಇದೇ ವೇಳೆ ಸಿವಾನ್ ನಿಂದ ಗೋರಖಪುರಕ್ಕೆ ತೆರಳುತ್ತಿದ್ದ ತಾವೆ-ಕಪ್ತಾನ್ ಗಂಜ್ ಪ್ಯಾಸೆಂಜರ್ ರೈಲು ದುದಹಿ ರೈಲ್ವೆ ನಿಲ್ದಾಣದಿಂದ ಸಾಗುತ್ತಿತ್ತು.

      ರೈಲು ಲೆವೆಲ್ ಕ್ರಾಸಿಂಗ್ ಸಮೀಪಿಸುತ್ತಿರುವುದನ್ನು ಗಮನಿಸಿದ ಸ್ಥಳದಲ್ಲಿದ್ದ ಗೇಟ್ ಮಿತ್ರ ಶಾಲಾ ವಾಹನ ತಡೆಯಲು ಪ್ರಯತ್ನಸಿದ್ದ, ಆದರೆ ಚಾಲಕ ಅದನ್ನು ಗಮನಿಸಿದೆ ಇದ್ದ ಕಾರಣ ಈ ಅನಾಹುತ ಸಂಭವಿಸಿದೆ.

      ಮಕ್ಕಳ ಸಾವಿಗೆ ಹೊಣೆ ಯಾರು

      ಮಕ್ಕಳ ಸಾವಿಗೆ ಹೊಣೆ ಯಾರು

      ಉತ್ತರಪ್ರದೇಶದ ಖುಷಿ ನಗರದಲ್ಲಿ ಚಾಲಕನ ಅಜಾಗರೂಕತೆಯಿಂದ 13 ಮಂದಿ ಮುಗ್ದ ಮಕ್ಕಳು ಮೃತಪಟ್ಟಿದ್ದಾರೆ. ಇಯರ್ ಫೋನ್ ಹಾಕಿಕೊಂಡು ವಾಹನ ಚಲಾಯಿಸುತ್ತಿದ್ದ ಕಾರಣ ರೈಲ್ವೆ ಕ್ರಾಸಿಂಗ್ ನಲ್ಲಿ ರೈಲಿನ ಶಬ್ದ ಕೇಳದೆ ರೈಲಿಗೆ ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಮಕ್ಕಳು ಮೃತಪಟ್ಟಿದ್ದಾರೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

      ಡಗ್ಲಾಸ್ ಸಮೀಪದ ಕಚ್ಚಾತೈಲ ಘಟಕದಲ್ಲಿ ಬೆಂಗಿ ಅವಘಡ

      ಡಗ್ಲಾಸ್ ಸಮೀಪದ ಕಚ್ಚಾತೈಲ ಘಟಕದಲ್ಲಿ ಬೆಂಗಿ ಅವಘಡ

      ಡಗ್ಲಾಸ್ ಮಿನ್ನೆಸೋಟ ಸಮೀಪದ ಹಸ್ಕಿ ತೈಲಾಗಾರದಲ್ಲಿ ಗುರುವಾರ ಬೆಳಗ್ಗೆ ಕಚ್ಚಾತೈಲ ಹಾಗೂ ಅಸ್ಫಾಲ್ಟ್ ಘಟಕಕ್ಕೆ ಬೆಂಕಿ ತಗುಲಿ ಹಲವಾರು ಜನರು ಗಾಯಗೊಂಡರು. ಅಲ್ಲಿನ ಪೊಲೀಸ್ ಚೆಕ್‌ಪ್ಓಸ್ಟ್ ನಿಂದ ಕಂಡ ದೃಶ್ಯ ಹೀಗಿತ್ತು

      ಹೊನ್ನಾವರದಲ್ಲಿ ರಾಹುಲ್ ಗಾಂಧಿ

      ಹೊನ್ನಾವರದಲ್ಲಿ ರಾಹುಲ್ ಗಾಂಧಿ

      ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಅಂಗವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಕರ್ನಾಟಕಕ್ಕೆ ಪ್ರವಾಸ ಬೆಳೆಸಿದ್ದಾರೆ. ಶುಕ್ರವಾರ ಮಂಗಳೂರಿನಲ್ಲಿ ಪಾರ್ಟಿಯ ಮ್ಯಾನಿಫೆಸ್ಟೋ ಬಿಡುಗಡೆ ಮಾಡಿದ್ದಾರೆ. ಅದಕ್ಕೂ ಮುನ್ನ ಹೊನ್ನಾವರದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹೊನ್ನಾವರದಲ್ಲಿ ಕಾಣಿಸಿಕೊಂಡಿದ್ದು ಹೀಗೆ.

      ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

      ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

      ಇತ್ತೀಚೆಗೆ, ಕತುವಾ ಹಾಗೂ ಉನ್ನಾವೋದಲ್ಲಿ ಅತ್ಯಾಚಾರ ನಡೆದಿರುವ ಪ್ರಕರಣಗಳು ಬೆಳಕಿಗೆ ಬಂದಿವೆ, ಹೀಗೆ ದೇಶದಲ್ಲಿ ನಿತ್ಯ ನೂರಾರು ಅತ್ಯಾಚಾರ ನಡೆಯುತ್ತದೆ. ಹಾಗಾದರೆ ಭದ್ರತೆ, ಸಾಮಾಜಿಕತೆ ಹೊಂದಿರುವ ರಾಷ್ಟ್ರ ನಮ್ಮದು ಹೌದೋ ಅಲ್ಲವೋ ಎನ್ನುವ ಪ್ರಶ್ನೆ ಕಾಡುತ್ತದೆ. ದಿನನಿತ್ಯ ನಡೆಯುವ ಅತ್ಯಾಚಾರ, ದೌರ್ಜನ್ಯ, ಕೊಲೆ ವಿರೋಧಿಸಿ ಬೆಂಗಳೂರಿನ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.

      ಪಂಜಾಬ್ ಸೋಲಿಸಿದ ಖುಷಿಯಲ್ಲಿ ಹೈದರಾಬಾದ್ ತಂಡದ ಬೌಲರ್

      ಪಂಜಾಬ್ ಸೋಲಿಸಿದ ಖುಷಿಯಲ್ಲಿ ಹೈದರಾಬಾದ್ ತಂಡದ ಬೌಲರ್

      ಹೈದರಾಬಾದ್ ನ ಗಾಂಧಿ ಚೌಕದಲ್ಲಿ ಗುರುವಾರ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕಿಂ ಗ್ಸ್ ಇಲವೆನ್ ಪಂಜಾಬ್ ನಡುವೆ ಐಪಿಎಲ್ ಪಂದ್ಯ ಏರ್ಪಟ್ಟಿತ್ತು. ಹೂದರಾಬಾದ್ ತಂಡವು ಮಾತೃ ನೆಲದಲ್ಲಿ 13 ರನ್ ನಿಂದ ಪಂಚಾಬ್ ನ್ನು ಮಣಿಸಿತು. ಆ ಖುಷಿಯಲ್ಲಿ ಹೈದರಾಬಾದ್ ತಂಡದ ಬೌಲರ್ ಬೇಸಿಲ್ ಥಂಪಿ.

      ಮತ್ತೆ ಮಿಂಚಿದ ಹೈದರಾಬಾದ್ ಬೌಲರ್‌ಗಳು, ಪಂಜಾಬ್ ವಿರುದ್ಧ ಜಯ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+