ಪ್ರವಾಸೋದ್ಯಮಕ್ಕೆ ಉತ್ತೇಜನ, 36 ದೇಶಗಳಿಗೆ ಇ ವೀಸಾ?

Posted By:
Subscribe to Oneindia Kannada

ನವದೆಹಲಿ, ಜುಲೈ 13: ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲು ಇ ಟೂರಿಸ್ಟ್ ವೀಸಾ ಯೋಜನೆಯನ್ನು 36 ದೇಶಗಳಿಗೆ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರವಾಸೋದ್ಯಮ ಇಲಾಖೆ ಶಿಫಾರಸು ಸಲ್ಲಿಸಿದೆ. ಇದಕ್ಕೆ ಅನುಮೋದನೆ ಸಿಕ್ಕರೆ ಸುಮಾರು 186 ದೇಶದವರು ಆನ್ ಲೈನ್ ಮೂಲಕ ವೀಸಾ ಪಡೆದು ಭಾರತದಲ್ಲಿ ಸ್ವಾಗತ ಪಡೆಯಬಹುದು.

ಗೃಹ ಸಚಿವಾಲಯಕ್ಕೆ ಕಳಿಸಿರುವ ಪ್ರಸ್ತಾವನೆ ಅಂಗೀಕಾರವಾದರೆ, ಭಾರತದಲ್ಲಿ ಪ್ರವಾಸ ಕೈಗೊಳ್ಳಲು ವಿಶ್ವದ 186 ದೇಶಗಳ ನಾಗರಿಕರು ಆನ್‌ಲೈನ್ ವೀಸಾ ಪಡೆಯಬಹುದಾಗಿದೆ.[ಇ ಟೂರಿಸ್ಟ್ ವೀಸಾ 37 ದೇಶಕ್ಕೆ ವಿಸ್ತರಣೆ]

ಇರಾನ್, ಈಜಿಪ್ಟ್, ಕತಾರ್, ಬಹರೈನ್, ಸೌದಿ ಅರೆಬಿಯ, ಮಾಲ್ಡೀವ್ಸ್, ಇಟಲಿ, ನೈಜೀರಿಯಾ, ಟರ್ಕಿ, ಇಥಿಯೋಪಿಯಾ, ಕಝಾಕಿಸ್ತಾನ ಹಾಗೂ ಮೊರಾಕ್ಕೊ. 2013ರಲ್ಲಿ ಆರಂಭವಾದ ಈ ಯೋಜನೆ ವಿದೇಶಿ ಪ್ರವಾಸಿಗರಲ್ಲಿ ಜನಪ್ರಿಯವಾಗುತ್ತಿದೆ.[ಬೆಂಗಳೂರಿನಲ್ಲಿ ಯುಎಸ್ ವೀಸಾ ಕೇಂದ್ರ ಸ್ಥಾಪನೆಗೆ ಮನವಿ]

e-visa for another 36 countries : Union tourism ministry

2016ರ ಜನವರಿಯಿಂದ ಜೂನ್‌ವರೆಗೆ ವರೆಗಿನ ಪ್ರವಾಸಿ ಅಂಕಿ ಅಂಶವನ್ನು ಗಮನಿಸಿದರೆ, ಇ-ಟೂರಿಸ್ಟ್ ವೀಸಾ ಪಡೆದು ಭಾರತಕ್ಕೆ ಇದುವರೆಗೆ 4.72 ಲಕ್ಷ ಪ್ರವಾಸಿಗರು ಆಗಮಿಸಿದ್ದಾರೆ. 2015ರ ಇದೇ ಅವಧಿಯಲ್ಲಿ 1.26 ಲಕ್ಷ ಪ್ರವಾಸಿಗರಷ್ಟೇ ಆಗಮಿಸಿದ್ದರು.[ಎಚ್ 1 ಬಿ ಉಳ್ಳ ದಂಪತಿಗೆ ಮೇ. 26ರಿಂದ ವರ್ಕ್ ಪರ್ಮಿಟ್]

ಒಂದು ವರ್ಷದಲ್ಲಿ ಶೇಕಡ 273.9ರಷ್ಟು ಪ್ರಗತಿ ಆಗಿದೆ ಎಂಬ ಅಂಶ ಸ್ಪಷ್ಟವಾಗುತ್ತದೆ. ಈ ಗಣನೀಯ ಹೆಚ್ಚಳಕ್ಕೆ ಇ- ವೀಸಾ ಸೌಲಭ್ಯವನ್ನು 150 ದೇಶಗಳಿಗೆ ವಿಸ್ತರಿಸಿರುವುದೇ ಕಾರಣ ಎನ್ನಲಾಗಿದೆ. ಮೊದಲು 76 ದೇಶಗಳಿಗಷ್ಟೇ ಈ ಸೌಲಭ್ಯ ಇತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Union tourism ministry plans to extend online visas to 36 countries. If accepted, 186 countries will now be able to access online visa to travel to India
Please Wait while comments are loading...