ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಟು ರದ್ದು : ಪರಿಸ್ಥಿತಿ ಲಾಭ ಪಡೆದ ಇ ಕಾಮರ್ಸ್ ಕಂಪನಿಗಳು

|
Google Oneindia Kannada News

ಬೆಂಗಳೂರು, ನವೆಂಬರ್ 10: ಪ್ರಧಾನಿ ನರೇಂದ್ರ ಮೋದಿ 500, 1000 ರುಪಾಯಿ ನೋಟು ರದ್ದು ಮಾಡಿದ ಕ್ಷಣದಿಂದ ಆಕಾಶವೇ ಕಳಚಿ ಬಿದ್ದಂತೆ ಲಕ್ಷಗಟ್ಟಲೆ ಜನ ತಲೆ ಕೆಡಿಸಿಕೊಂಡಿದ್ದರೆ, ಇ ಕಾಮರ್ಸ್ ಕಂಪನಿಗಳಿಗೆ ಈ ನಿರ್ಧಾರ ಖುಷಿ ತಂದಿದೆ. ಅದರಲ್ಲೂ ಇ ವಾಲೆಟ್ ಬಳಸುವಂಥದ್ದಕ್ಕೆ ಹಬ್ಬವೋ ಹಬ್ಬ.

ಆನ್ ಲೈನ್ ಕಂಪನಿಗಳು, ನಗದುರಹಿತ ವ್ಯವಹಾರ ಮಾಡುವಂಥ ಕಂಪನಿಗಳು ಸರಕಾರದ ಈ ನಿರ್ಧಾರವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿವೆ. ತಮ್ಮ ಕಂಪನಿಗಳ ಪ್ರಚಾರಕ್ಕಾಗಿ ರಾಶಿ ರಾಶಿ ಜಾಹೀರಾತು ನೀಡುತ್ತಿವೆ. ಪೇಟಿಎಂ, ಫ್ರೀಚಾರ್ಜ್, ಓಲಾ ಮನಿ ಮತ್ತು ಸ್ನಾಪ್ ಡೀಲ್ ನಂಥ ವೆಬ್ ಸೈಟ್ ಗಳು ಮತ್ತು ಮೊಬೈಲ್ ಅಪ್ಲಿಕೇಶನ್ ಗಳ ಬಗ್ಗೆ ಟೈಮ್ಸ್ ಆಫ್ ಇಂಡಿಯಾ, ದಿ ಹಿಂದೂ ಅಂಥ ಪತ್ರಿಕೆಗಳಲ್ಲಿ ಪೂರ್ತಿ ಪುಟ ಜಾಹೀರಾತು ನೀಡಲಾಗಿದೆ.[ನೋಟು ಬದಲಿಸಲು ಕ್ಯೂನಲ್ಲಿ ನಿಂತಾಗ ಸತ್ತರೆ ಯಾರು ಬರ್ತಾರೆ?]

E-commerce companies take advantage of note ban

ನಗದು ಇಲ್ಲ ಅಂತ ಚಿಂತಿಸಬೇಡಿ. 'ನಗದು ಇಲ್ಲ'ದಿದ್ದರೂ ಆರಾಮಾಗಿರಿ ಎಂಬುದು ಜಾಹೀರಾತಿನ ಹೂರಣ. ಟೈಮ್ಸ್ ಆಫ್ ಇಂಡಿಯಾದ ದೇಶದ ಬಹುತೇಕ ಆವೃತ್ತಿಗಳಲ್ಲಿ ಮೊದಲ ಏಳು ಪುಟಗಳಲ್ಲಿ ಇಂಥ ಕಂಪೆನಿಗಳ ಒಂದಿಡೀ ಪುಟದ ಜಾಹೀರಾತುಗಳು. ಇನ್ನು ಪೇಟಿಎಂ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನೇ ಬಳಸಲಾಗಿದೆ.[ನೋಟ್ ಬ್ಯಾನ್ ಬೆನ್ನಲ್ಲೇ ಕೇಂದ್ರದ ಮತ್ತೊಂದು ಮಹತ್ವದ ಆದೇಶ]

E-commerce companies take advantage of note ban

ಸ್ವತಂತ್ರ ಭಾರತದ ಆರ್ಥಿಕ ಇತಿಹಾಸದಲ್ಲೇ ಇಂಥ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಶಯಗಳು ಎಂದು ಹೇಳಲಾಗಿದೆ. ಮಾಜಿ ಅಧಿಕಾರಿ ಎಂ.ಜಿ.ದೇವಸಹಾಯಮ್ ಈ ಬಗ್ಗೆ ಮಾತನಾಡಿ, ಸ್ಮಾರ್ಟ್ ಫೋನ್ ಮೂಲಕ ನಗದುರಹಿತವಾಗಿ ಮಾಡಬಹುದಾದ ಡಿಜಿಟಲ್ ವ್ಯವಹಾರದ ಕಡೆಗೆ ಜನರನ್ನು ಸೆಳೆಯುವ ಅಜೆಂಡಾ ಇದ್ದಂತಿದೆ. ಇದರಿಂದ ಯಾರಿಗೆ ಅನುಕೂಲ ಎಂಬ ಸಂಗತಿ ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.

English summary
E- Commerce companies taking an advantages of Rupees 500, 1000 note ban in India. Companies trying to popularise cashless transaction through smartphones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X