ಕೋಲ್ಕತ್ತಾ: ರೈಲಿನೊಳಗೆ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ: ಟಿಟಿಇ ಬಂಧನ
ಕುಡಿದ ಮತ್ತಿನಲ್ಲಿ ರೈಲಿನೊಳಗೆ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಟಿಟಿಇಯನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಕೋಲ್ಕತ್ತಾ ಮಾರ್ಚ್ 14: ಅಕಾಲ್ ತಖ್ತ್ ಎಕ್ಸ್‌ಪ್ರೆಸ್‌ನಲ್ಲಿ ಭಾನುವಾರ ತಡರಾತ್ರಿ ಕುಡಿದ ಅಮಲಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ರೈಲ್ವೆ ಪ್ರಯಾಣ ಟಿಕೆಟ್ ಪರೀಕ್ಷಕರನ್ನು (ಟಿಟಿಇ) ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಆರೋಪಿಯನ್ನು ಟಿಟಿಇ ಮುನ್ನಾ ಕುಮಾರ್ ಎಂದು ಗುರುತಿಸಲಾಗಿದೆ. ಈತನ ಮೇಲೆ ಸೆಕ್ಷನ್ 354-ಎ (ಲೈಂಗಿಕ ಕಿರುಕುಳಕ್ಕಾಗಿ ಶಿಕ್ಷೆ), 352 (ಗಂಭೀರ ಪ್ರಚೋದನೆಯ ಹೊರತಾಗಿ ಆಕ್ರಮಣ ಅಥವಾ ಕ್ರಿಮಿನಲ್ ಶಕ್ತಿ), ಮತ್ತು 509 (ಪದ, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ನಡೆದಾಗ ಕುಮಾರ್ ಕರ್ತವ್ಯದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.

ಕೋಲ್ಕತ್ತಾದ ಸೀಲ್ದಾಹ್ ರೈಲು ನಿಲ್ದಾಣದಿಂದ ಅಮೃತಸರಕ್ಕೆ ಹೋಗುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ. ಟಿಟಿಇ ಮುನ್ನಾ ಕುಮಾರ್ ಅವರನ್ನು ಸಹರಾನ್‌ಪುರದಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು. ಆದರೆ ಘಟನೆ ವೇಳೆ ಇವರು ಕರ್ತವ್ಯದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಜೊತೆಗೆ ಇವರು ಮದ್ಯಪಾನ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಕಾರಿ ರೈಲ್ವೇ ಪೊಲೀಸ್ (ಜಿಆರ್‌ಪಿ) ಸರ್ಕಲ್ ಆಫೀಸರ್ (ಲಕ್ನೋ) ಸಂಜೀವ್ ಕುಮಾರ್ ಸಿನ್ಹಾ ಅವರು ಮಂಗಳವಾರ ತಮ್ಮ ಸಹಾಯವಾಣಿ ಸಂಖ್ಯೆಯ ಮೂಲಕ ಪ್ರಯಾಣಿಕರೊಬ್ಬರು ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ.
''ಸೋಮವಾರ ಮಧ್ಯರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ನಾವು ಚಾರ್‌ಬಾಗ್ ರೈಲು ನಿಲ್ದಾಣಕ್ಕೆ ತಂಡವನ್ನು ಕಳುಹಿಸಿದ್ದೇವೆ ಮತ್ತು ರೈಲ್ವೆ ಉದ್ಯೋಗಿಯೂ ಆಗಿರುವ ದೂರುದಾರರಿಗೆ ಲಿಖಿತ ದೂರು ನೀಡಲು ಕೇಳಿದ್ದೇವೆ. ಆರೋಪಿ ತನ್ನ ಪತ್ನಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಆಕೆಯ ಪತಿ ದೂರಿನಲ್ಲಿ ತಿಳಿಸಿದ್ದಾನೆ. ಚಾರ್‌ಬಾಗ್ ರೈಲು ನಿಲ್ದಾಣದಿಂದ ಕುಮಾರ್‌ನನ್ನು ಬಂಧಿಸಿದ್ದೇವೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ'' ಎಂದು ಸಿನ್ಹಾ ತಿಳಿಸಿದ್ದಾರೆ.

ಘಟನೆ ನಡೆದಾಗ ಕುಮಾರ್ ಕುಡಿದಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಘಟನೆ ವೇಳೆ ಬಹುಶಃ ಅವನು ನಿದ್ರೆ ಅಥವಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಮೂತ್ರ ವಿಸರ್ಜಿಸಿರಬಹುದು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications