Get Updates
Get notified of breaking news, exclusive insights, and must-see stories!

Waqf Bill Passed: ಇಂದಿನಿಂದ ಹೊಸ ಕಾನೂನು ಜಾರಿ, 'ವಕ್ಫ್ ಬಿಲ್‌ 2025'ಗೆ ರಾಷ್ಟ್ರಪತಿ ಅಂಗೀಕಾರ

ನವದೆಹಲಿ, ಏಪ್ರಿಲ್ 06: ಸಂಸತ್ ಅಧಿವೇಶನದಲ್ಲಿ ಕಳೆದ ಮೂರು ದಿನಗಳಿಂದ ಚರ್ಚೆಯಾಗಿದ್ದ, ಸಾಕಷ್ಟು ವಿರೋಧ, ಆಕ್ರೋಶಕ್ಕೆ ಕಾರಣವಾಗಿದ್ದ ಕೇಂದ್ರ ಸರ್ಕಾರದ ಮಹತ್ವದ ಮಸೂದೆ 'ವಕ್ಫ್ (ತಿದ್ದುಪಡಿ) ಮಸೂದೆ 2025' ಗೆ ರಾಷ್ಟ್ರಪ್ರತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಮಂಡಿಸಲ್ಪಟ್ಟ ಬಳಿಕ ವಿಪಕ್ಷಗಳು, ಮುಸ್ಲಿಮರು ಟೀಕಿಸಿದ್ದರು. ದೇಶವ್ಯಾಪಿ ಹೋರಾಟಗಳು ನಡೆದವು. ಈ ಮಧ್ಯೆ ಏಪ್ರಿಲ್ 5ರಂದು ರಾಷ್ಟ್ರಪತಿಗಳು ಈ ವಕ್ಫ್ ಮಸೂದೆಗೆ ಒಪ್ಪಿಗೆ ನೀಡಿದ್ದು, ರಾಷ್ಟ್ರದಲ್ಲಿ ಹೊಸ ಕಾನೂನು ಜಾರಿಯಾಗಿದೆ.

ರಾಷ್ಟ್ರಪತಿಗಳು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಂತಿಮ ಮುದ್ರೆ ಹಾಕಿದ್ದನ್ನು ಕರ್ನಾಟಕ ಬಿಜೆಪಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ಇದು ಸಬ್‌ ಕಾ ವಿಕಾಸ್ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇತ್ತ ವಿಪಕ್ಷಗಳ ಆಕ್ರೋಶ ಮುಂದುವರಿದಿದೆ. ಇಂದಿನಿಂದ ವಕ್ಟ್‌ ಕಾನೂನು ಭಾರತಾದ್ಯಂತ ಜಾರಿಯಾಗಿದೆ.

Droupadi Murmu Approved and Passed Waqf Amendment Bill after 3 Day Debate at Parliament

ರಾಜ್ಯ ಸಭೆ ಮತ್ತು ಲೋಕಸಭೆಯಲ್ಲಿ ಕಳೆದ ಮೂರು ದಿನಗಳಿಂದ ಈ ಬಗ್ಗೆ ಪರ ವಿರೋಧ ಚರ್ಚೆ ನಡೆದಿತ್ತು. ವಕ್ಫ್ ಬಿಲ್ ಕಾನೂನು ಜಾರಿಯಾದರೆ ಮುಸ್ಲಿಮರಿಗೆ ಅನ್ಯಾಯ ಮಾಡದಂತೆ ಎಂದು ಕಾಂಗ್ರೆಸ್, ಎಎಪಿ, ಇಂಡಿಯಾ ಮೈತ್ರಿಕೂಟದ ನಾಯಕರು ವಿರೋಧಿಸಿದ್ದರು.

Take a Poll

ಕಾನೂನು ಸಚಿವಾಲಯ ಶನಿವಾರ ಹೊರಡಿಸಿದ ಅಧಿಸೂಚನೆಯ ಅನ್ವಯ ಶನಿವಾರವೇ ರಾಷ್ಟ್ರಪತಿಗಳು ವಕ್ಫ್ (ತಿದ್ದುಪಡಿ) ಮಸೂದೆಗೆ ತಮ್ಮ ಒಪ್ಪಿಗೆ ನೀಡಿದ್ದಾರೆ. ಸಂಸತ್ತಿನಲ್ಲಿ ಮಸೂದೆ ಅಂಗೀಕಾರವಾಗಿದೆ. ಇದನ್ನು ರದ್ದುಗೊಳಿಸುವಂತೆ AIMIM ಅಸ್ಸಾವುದ್ದೀನ ಓವೈಸಿ, ಎಎಪಿ ಆಗ್ರಹಿಸಿದೆ. ಇದರ ಬೆನ್ನಲ್ಲೆ ಕೇಂದ್ರದ ಹೊಸ ಕಾನೂನು ವಿರುದ್ಧ ಕಾಂಗ್ರೆಸ್ ನಾಯಕರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ವಕ್ಫ್ ಮಸೂದೆ ವಿರುದ್ಧ ಕಾನೂನು ಹೋರಾಟಕ್ಕೆ ಕಾಂಗ್ರೆಸ್ ಮುಂದಾಗಿದೆ.

ವಕ್ಫ್‌ ಮಂಡಳಿ ಭೂ ಕಬಳಿಕೆ, ಪರಮಾಧಿಕಾರಕ್ಕೆ ಬ್ರೇಕ್

ವಕ್ಫ್‌ ಮಂಡಳಿಯಿಂದ ಎಲ್ಲೆಂದರಲ್ಲಿ ಜಮೀನು, ಭೂಮಿ ಕಳಬಳಿಕೆಗೆ ಬ್ರೇಕ್ ಹಾಕಲು, ವಕ್ಫ್ ಬೋರ್ಡ್‌ಗೆ ಇದ್ದ ಪರಮಾಧಿಕಾರ ನಿಯಂತ್ರಿಸಲು ಹಾಗೂ ಮಂಡಳಿಯಲ್ಲಿ ಬಡವರು, ಮಧ್ಯಮ ವರ್ಗದವರಿಗೂ ಅವಕಾಶ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರ ಈ ಹೊಸ ವಕ್ಫ್‌ ತಿದ್ದುಪಡಿ ಮಸೂದೆ ಜಾರಿಗೆ ತಂದಿದೆ.

Droupadi Murmu Approved and Passed Waqf Amendment Bill after 3 Day Debate at Parliament

ಮಹತ್ವ ಗುರಿ ಉದ್ದೇಶದಿಂದ ಈ ಬಿಲ್ ಇಂದಿನಿಂದ ಜಾರಿಯಾಗಿದೆ. ದೇಶಾದ್ಯಂತ ವಕ್ಫ್ ಮಂಡಳಿ ವಿರುದ್ಧ ಕಾನೂನು ಜಾರಿಯಾಗಿದೆ ಎಂದು ಕರ್ನಾಟಕ ಬಿಜೆಪಿ ದ್ರೌಪದಿ ಮುರ್ಮು ಅವರಿಗೆ ಮತ್ತು ಕೇಂದ್ರ ನಾಯಕರಿಗೆ ಅಭಿನಂದನೆ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+