ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಸೋಂಕು ರಹಿತಗೊಳಿಸಲು ಬಂತು UV ಬ್ಲಾಸ್ಟರ್!

|
Google Oneindia Kannada News

ನವದೆಹಲಿ, ಮೇ 5: ಕೊರೊನಾ ವೈರಸ್ ಪೀಡಿತ ಪ್ರದೇಶಗಳನ್ನು ಸೋಂಕು ರಹಿತಗೊಳಿಸಲು ಕ್ಷಿಪ್ರ ಮತ್ತು ರಾಸಾಯನಿಕ ಮುಕ್ತ ಅಲ್ಟ್ರಾ ವೈಲೆಟ್ (UV) ಡಿಸ್ ಇನ್ಫೆಕ್ಷನ್ ಟವರ್ ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಓ) ಅಭಿವೃದ್ಧಿ ಪಡಿಸಿದೆ.

ರಾಸಯನಿಕ ವಿಧಾನಗಳಿಂದ ಸೋಂಕು ರಹಿತಗೊಳಿಸಲು ಸೂಕ್ತವಲ್ಲದ ಗ್ಯಾಜೆಟ್, ಕಂಪ್ಯೂಟರ್ಸ್ ಸೇರಿದಂತೆ ಹೈಟೆಕ್ ಉಪಕರಣಗಳ ಮೇಲ್ಮೈ ಗಳಿಗೆ ಅಲ್ಟ್ರಾ ವೈಲೆಟ್ (UV) ಬ್ಲಾಸ್ಟರ್ ಬಹು ಉಪಕಾರಿಯಾಗಲಿದೆ.

ಲಾಕ್ ಡೌನ್ ಮುಗಿದ ಬಳಿಕ ಭಾರತಕ್ಕೆ ಕಾದಿದೆ ಡೇಂಜರ್: WHO ಅಲರ್ಟ್ಲಾಕ್ ಡೌನ್ ಮುಗಿದ ಬಳಿಕ ಭಾರತಕ್ಕೆ ಕಾದಿದೆ ಡೇಂಜರ್: WHO ಅಲರ್ಟ್

ವಿಮಾನ ನಿಲ್ದಾಣಗಳು, ಶಾಪಿಂಗ್ ಮಾಲ್, ಮೆಟ್ರೋ, ಹೋಟೆಲ್, ಕಾರ್ಖಾನೆಗಳು, ಕಚೇರಿಗಳು ಸೇರಿದಂತೆ ಹೆಚ್ಚು ಜನಸಂದಣಿ ಸೇರುವ ಪ್ರದೇಶಗಳಲ್ಲಿ ಈ ಅಲ್ಟ್ರಾ ವೈಲೆಟ್ (UV) ಬ್ಲಾಸ್ಟರ್ ಪರಿಣಾಮಕಾರಿಯಾಗಿದೆ ಎಂದು ಡಿ.ಆರ್.ಡಿ.ಓ ತಿಳಿಸಿದೆ.

DRDO Develops UV Disinfection Tower for Sanitising Covid-19 Prone Areas

ಲ್ಯಾಪ್ ಟಾಪ್ ಅಥವಾ ಮೊಬೈಲ್ ಫೋನ್ ಮೂಲಕ ವೈ-ಫೈ ಲಿಂಕ್ ಬಳಸಿ ಅಲ್ಟ್ರಾ ವೈಲೆಟ್ (UV) ಡಿಸ್ ಇನ್ಫೆಕ್ಷನ್ ಟವರ್ ಅನ್ನು ಆಪರೇಟ್ ಮಾಡಬಹುದಾಗಿದೆ.

360 ಡಿಗ್ರಿ ಇಲ್ಯೂಮಿನೇಷನ್ ಗಾಗಿ 254nm ತರಂಗಾಂತರದಲ್ಲಿ 43 ವ್ಯಾಟ್ UV-C ಶಕ್ತಿಯೊಂದಿಗೆ ಅಲ್ಟ್ರಾ ವೈಲೆಟ್ (UV) ಡಿಸ್ ಇನ್ಫೆಕ್ಷನ್ ಟವರ್ ತಲಾ ಆರು ದೀಪಗಳನ್ನು ಹೊಂದಿದೆ.

ಶಾಕಿಂಗ್: ಚೀನಾದಲ್ಲಿ ಪತ್ತೆಯಾಗುವ ಮುನ್ನವೇ 'ಈ' ದೇಶದಲ್ಲಿತ್ತೇ ಕೊರೊನಾ?ಶಾಕಿಂಗ್: ಚೀನಾದಲ್ಲಿ ಪತ್ತೆಯಾಗುವ ಮುನ್ನವೇ 'ಈ' ದೇಶದಲ್ಲಿತ್ತೇ ಕೊರೊನಾ?

ಸುಮಾರು 12*12 ಅಡಿ ವಿಸ್ತೀರ್ಣದ ಕೋಣೆಯನ್ನು ಸೋಂಕು ರಹಿತಗೊಳಿಸಲು ಈ ಉಪಕರಣ 10 ನಿಮಿಷ ತೆಗೆದುಕೊಳ್ಳುತ್ತದೆ. 400 ಅಡಿ ವಿಸ್ತೀರ್ಣದ ಕೋಣೆಯಲ್ಲಿ ವಿವಿದೆಡೆ ಕಡೆ ಈ ಉಪಕರಣವನ್ನಿಟ್ಟು ಸೋಂಕು ರಹಿತಗೊಳಿಸಲು 30 ನಿಮಿಷ ಕಾಲಾವಕಾಶ ಬೇಕು.

English summary
DRDO Develops UV Disinfection Tower for Sanitising Covid-19 Prone Areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X