ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣವಚನ ಸ್ವೀಕಾರ

|
Google Oneindia Kannada News

ನವದೆಹಲಿ, ಜುಲೈ 25: ಭಾರತದಲ್ಲಿ ಬುಡಕಟ್ಟು ಸಮುದಾಯದ ಮೊದಲ ಮಹಿಳೆಯಾಗಿ ಹಾಗೂ ದೇಶದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಸೋಮವಾರ ಪದಗ್ರಹಣ ಸ್ವೀಕರಿಸಿದರು.
ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮುರಿಗೆ ಪ್ರಮಾಣ ವಚನ ಬೋಧಿಸಿದರು.

ಸೋಮವಾರ ಉಮಾ ಶಂಕರ್ ದೀಕ್ಷಿತ್ ಲೇನ್‌ನಲ್ಲಿರುವ ತಮ್ಮ ತಾತ್ಕಾಲಿಕ ನಿವಾಸದಿಂದ ಬೆಳಗ್ಗೆ 8.15ಕ್ಕೆ ಹೊರಟ ದ್ರೌಪದಿ ಮುರ್ಮು ರಾಜ್‌ಘಾಟ್ ಭೇಟಿ ನೀಡಿ ಗೌರವ ಸಲ್ಲಿಸಿದರು. ತದನಂತರದಲ್ಲಿ ರಾಜ್‌ಘಾಟ್ ನಿಂದ ಬೆಳಗ್ಗೆ 9.22 ಗಂಟೆಗೆ ರಾಷ್ಟ್ರಪತಿ ಭವನಕ್ಕೆ ತಲುಪಿದರು.

Draupadi murmu, India youngest and first tribal President to take oath today

ದ್ರೌಪದಿ ಮುರ್ಮು ಪ್ರಮಾಣವಚನ ಕಾರ್ಯಕ್ರಮ ಹೇಗಿತ್ತು?:

* ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷ ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೇರಿ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಸೆಂಟ್ರಲ್ ಹಾಲ್‌ಗೆ ಕರೆದೊಯ್ಯಲಿದ್ದಾರೆ. ತದನಂತರ ಸೆಂಟ್ರಲ್ ಹಾಲ್‌ನಲ್ಲಿ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಲಾಯಿತು.

* ಬೆಳಗ್ಗೆ 10.15ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಆರಂಭವಾಗಲಿದ್ದು, ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಪ್ರಮಾಣ ವಚನ ಬೋಧಿಸಲಿದ್ದಾರೆ. ದ್ರೌಪದಿ ಮುರ್ಮು ಪದಗ್ರಹಣದ ನಂತರ ಪ್ರಮಾಣ ಪತ್ರಕ್ಕೆ ಅಂಕಿತ ಹಾಕಿದರು.

Droupadi Murmu, India youngest and first tribal President to take oath today

* ಬೆಳಗ್ಗೆ 10:23ರ ಸುಮಾರಿಗೆ ಭಾರತದ 15ನೇ ರಾಷ್ಟ್ರಪತಿ ಆಗಿ ದ್ರೌಪದಿ ಮುರ್ಮು ಸೆಂಟ್ರಲ್ ಹಾಲ್‌ನಲ್ಲಿ ಮೊದಲ ಭಾಷಣ ಮಾಡಲಿದ್ದಾರೆ

ದೇಶದಲ್ಲಿ ಹೊಸ ಇತಿಹಾಸ ಬರೆದ ಮುರ್ಮು:

Recommended Video

Tiger Crossing Road: ಹುಲಿಯನ್ನ ರಸ್ತೆ ದಾಟಿಸಿದ ಪೊಲೀಸ್ ಅಧಿಕಾರಿ | *India | OneIndia Kannada

ಕಳೆದ ಜುಲೈ 21ರಂದು ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ 64 ವರ್ಷದ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಆಯ್ಕೆಯಾದ ಮೊದಲ ಬುಡಕಟ್ಟು ಸಮುದಾಯದ ನಾಯಕಿ ಎಂಬ ಹೊಸ ಇತಿಹಾಸವನ್ನು ದ್ರೌಪದಿ ಮುರ್ಮು ಬರೆದಿದ್ದಾರೆ. ಮುರ್ಮು ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ಅಧ್ಯಕ್ಷ ಮತ್ತು ಉನ್ನತ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದು, ಭಾರತದ ಮೊದಲ ಪ್ರಜೆಯಾದ ಎರಡನೇ ಮಹಿಳೆ ಎನಿಸಿಕೊಂಡಿದ್ದಾರೆ.

English summary
Droupadi Murmu will be the first tribal and only the second woman to take oath as President on July 25. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X