• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಾ.ಹರ್ಷವರ್ಧನ್ ಗೆ ಒಲಿದು ಬಂತು ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ಹುದ್ದೆ.!

|

ನವದೆಹಲಿ, ಮೇ 20: ಮಾರಣಾಂತಿಕ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿರುವ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ವಿಶ್ವ ಆರೋಗ್ಯ ಸಂಸ್ಥೆ (WHO)ಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಮೇ 22 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

   KSRTC ಬಸ್ ಹತ್ತಿ ಸಂಪೂರ್ಣ ಪರಿಶೀಲನೆ ನಡೆಸಿದ ಸಿದ್ದರಾಮಯ್ಯ | Siddaramaiah | Oneindia Kannada

   ಪ್ರಸ್ತುತ 34 ಸದಸ್ಯರ WHO ಕಾರ್ಯನಿರ್ವಾಹಕ ಮಂಡಳಿ (Executive Board) ಯ ಅಧ್ಯಕ್ಷರಾಗಿರುವ ಜಪಾನ್ ನ ಡಾ.ಹಿರೋಕಿ ನಕಟಾನಿ ಸ್ಥಾನವನ್ನು ಭಾರತದ ಡಾ.ಹರ್ಷವರ್ಧನ್ ತುಂಬಲಿದ್ದಾರೆ.

   ಓಹೋ.. ಕೊರೊನಾ ಕುರಿತ ಮಹತ್ವದ ಮಾಹಿತಿ ಮುಚ್ಚಿಡಲು WHOಗೆ ಕರೆ ಮಾಡಿದ್ರಾ ಚೀನಾ ಅಧ್ಯಕ್ಷ?ಓಹೋ.. ಕೊರೊನಾ ಕುರಿತ ಮಹತ್ವದ ಮಾಹಿತಿ ಮುಚ್ಚಿಡಲು WHOಗೆ ಕರೆ ಮಾಡಿದ್ರಾ ಚೀನಾ ಅಧ್ಯಕ್ಷ?

   WHO ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಭಾರತವನ್ನು ನೇಮಿಸುವ ಪ್ರಸ್ತಾಪಕ್ಕೆ 194 ರಾಷ್ಟ್ರಗಳ ವಿಶ್ವ ಆರೋಗ್ಯ ಅಸೆಂಬ್ಲಿ ಬೆಂಬಲ ನೀಡಿ, ಸಹಿ ಹಾಕಿದೆ.

   ಸರ್ವಾನುಮತದ ತೀರ್ಮಾನ

   ಸರ್ವಾನುಮತದ ತೀರ್ಮಾನ

   ಕಾರ್ಯನಿರ್ವಾಹಕ ಮಂಡಳಿಗೆ ಭಾರತವನ್ನು ಆಯ್ಕೆ ಮಾಡುವುದಾಗಿ ಕಳೆದ ವರ್ಷವೇ ವಿಶ್ವ ಆರೋಗ್ಯ ಸಂಸ್ಥೆಯ ಸೌತ್-ಈಸ್ಟ್ ಏಷ್ಯಾ ಗ್ರೂಪ್ ಸರ್ವಾನುಮತದಿಂದ ತೀರ್ಮಾನಿಸಿತ್ತು. ಅದರಂತೆ ಇದೀಗ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಭಾರತ ನಾಮನಿರ್ದೇಶಿತಗೊಂಡಿದೆ.

   ಮೇ 22 ರಂದು ಸಭೆ

   ಮೇ 22 ರಂದು ಸಭೆ

   ಮೇ 22 ರಂದು ನಡೆಯಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಡಾ. ಹರ್ಷವರ್ಧನ್ ಅವರನ್ನು ಆಯ್ಕೆ ಮಾಡಲಾಗುತ್ತದೆ.

   ವಿಶ್ವ ಆರೋಗ್ಯ ಸಂಸ್ಥೆ ಕುರಿತು ತನಿಖೆಗೆ ಭಾರತ ಸೇರಿ 62 ರಾಷ್ಟ್ರಗಳ ಒತ್ತಾಯವಿಶ್ವ ಆರೋಗ್ಯ ಸಂಸ್ಥೆ ಕುರಿತು ತನಿಖೆಗೆ ಭಾರತ ಸೇರಿ 62 ರಾಷ್ಟ್ರಗಳ ಒತ್ತಾಯ

   ಆರೋಗ್ಯ ಕ್ಷೇತ್ರದಲ್ಲಿ ಅರ್ಹತೆ

   ಆರೋಗ್ಯ ಕ್ಷೇತ್ರದಲ್ಲಿ ಅರ್ಹತೆ

   ಕಾರ್ಯನಿರ್ವಾಹಕ ಮಂಡಳಿಯು ಆರೋಗ್ಯ ಕ್ಷೇತ್ರದಲ್ಲಿ ತಾಂತ್ರಿಕವಾಗಿ ಅರ್ಹತೆ ಪಡೆದ 34 ಪ್ರಮುಖರನ್ನು ಹೊಂದಿದೆ. ಪ್ರತಿಯೊಬ್ಬರೂ ವಿಶ್ವ ಆರೋಗ್ಯ ಅಸೆಂಬ್ಲಿಯಿಂದ ಆಯ್ಕೆಯಾದ ಸದಸ್ಯ ರಾಷ್ಟ್ರದಿಂದ ನೇಮಕಗೊಂಡಿದ್ದಾರೆ. ಸದಸ್ಯ ರಾಷ್ಟ್ರಗಳನ್ನು ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ.

   ವರ್ಷಕ್ಕೆ ಎರಡು ಬಾರಿ ಕಾರ್ಯನಿರ್ವಾಹಕ ಮಂಡಳಿ ಸಭೆ ಸೇರಲಿದೆ. ಹೆಲ್ತ್ ಅಸೆಂಬ್ಲಿಯ ಪಾಲಿಸಿಗಳಿಗೆ ಸಲಹೆಗಳನ್ನು ನೀಡುವುದು ಕಾರ್ಯನಿರ್ವಾಹಕ ಮಂಡಳಿಯ ಪ್ರಮುಖ ಕಾರ್ಯ.

   ಡಾ.ಹರ್ಷವರ್ಧನ್ ಹೇಳಿದ್ದು ಹೀಗೆ..

   ಡಾ.ಹರ್ಷವರ್ಧನ್ ಹೇಳಿದ್ದು ಹೀಗೆ..

   73 ನೇ ವಿಶ್ವ ಆರೋಗ್ಯ ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡಿದ್ದ ಡಾ.ಹರ್ಷವರ್ಧನ್, ''ಕೋವಿಡ್-19 ರೋಗವನ್ನು ಎದುರಿಸಲು ಭಾರತ ಎಲ್ಲಾ ಅಗತ್ಯ ಕ್ರಮಗಳನ್ನು ಸರಿಯಾಗಿ ತೆಗೆದುಕೊಂಡಿದೆ. ರೋಗವನ್ನು ನಿಭಾಯಿಸುವಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ. ಮುಂದಿನ ತಿಂಗಳುಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ'' ಎಂದು ಹೇಳಿದ್ದರು.

   ಕೊರೊನಾ ವೈರಸ್ ಕುರಿತು ತನಿಖೆಗೆ ಒಪ್ಪಿಗೆ ನೀಡಿದ WHOಕೊರೊನಾ ವೈರಸ್ ಕುರಿತು ತನಿಖೆಗೆ ಒಪ್ಪಿಗೆ ನೀಡಿದ WHO

   English summary
   Dr Harsh Vardhan to become chairman of WHO Executive Board.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X