ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ ಪೊಂಪಿಯೊ, ಮಾರ್ಕ್ ಎಸ್ಪರ್ ಜತೆ ಅಜಿತ್ ದೋವಲ್ ಮಾತುಕತೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 27: ಭಾರತ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮಂಗಳವಾರ ಉಭಯ ದೇಶಗಳ ನಡುವಿನ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಕಾರ್ಯತಂತ್ರಗಳನ್ನು ವೃದ್ಧಿಸುವ ಸಂಬಂಧ ಮಾತುಕತೆ ನಡೆಸಿದರು.

ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಚೀನಾದೊಂದಿಗಿನ ಸೇನಾ ಬಿಕ್ಕಟ್ಟಿನ ವಿಚಾರವಾಗಿ ಅಧಿಕಾರಿಗಳು ಸಮಾಲೋಚನೆ ನಡೆಸಿದರು. ಎಲ್ಲ ವಿಭಾಗಗಳಲ್ಲಿಯೂ ಉಭಯ ದೇಶಗಳು ಮುಂದುವರಿಯಬೇಕಾದ ಸಂಗತಿಗಳು ಮತ್ತು ಸಾಮರ್ಥ್ಯ ನಿರ್ಮಾಣದ ಪ್ರಮುಖವಾಗಿ ಚರ್ಚಿಸಿದರು.

ಭಾರತ ಮತ್ತಷ್ಟು ಬಲಿಷ್ಠ, ಮುಗೀತು ಚೀನಿ ಗ್ಯಾಂಗ್‌ ಕತೆ..!ಭಾರತ ಮತ್ತಷ್ಟು ಬಲಿಷ್ಠ, ಮುಗೀತು ಚೀನಿ ಗ್ಯಾಂಗ್‌ ಕತೆ..!

ಮುಖ್ಯವಾಗಿ ಚೀನಾದಿಂದ ಭಾರತಕ್ಕೆ ಇರುವ ಬೆದರಿಕೆ ಬಗ್ಗೆ ದೋವಲ್ ಅವರು ಪೊಂಪಿಯೊ ಹಾಗೂ ಎಸ್ಪರ್ ಜತೆ ಮಾತುಕತೆ ನಡೆಸಿದರು. ಸುರಕ್ಷಿತ, ಸ್ಥಿರ ಮತ್ತು ನಿಯಮಾಧಾರಿತ ಪ್ರಾದೇಶಿಕ ಹಾಗೂ ಜಾಗತಿಕ ಭದ್ರತಾ ಪರಿಸರವನ್ನು ಸೃಷ್ಟಿಸುವ ವಿಚಾರಗಳನ್ನು ಅಧಿಕಾರಿಗಳು ಮುಂದಿಟ್ಟರು.

Doval, Pompeo, Esper Discusses On Strategic Ties

ಚೀನಾ ಜತೆ ಗಲ್ವಾನ್ ಸಂಘರ್ಷ: ಭಾರತದ ಪರ ನಿಂತ ಅಮೆರಿಕ ಚೀನಾ ಜತೆ ಗಲ್ವಾನ್ ಸಂಘರ್ಷ: ಭಾರತದ ಪರ ನಿಂತ ಅಮೆರಿಕ

2+2 ಸಚಿವರ ಮಟ್ಟದ ಮಾತುಕತೆಗಳ ಮೂರನೇ ಹಂತದಲ್ಲಿ ಈ ಸಭೆಯು 40 ನಿಮಿಷಗಳ ಕಾಲ ನಡೆಯಿತು. ಇದಕ್ಕೂ ಮುನ್ನರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅಮೆರಿಕದ ಇಬ್ಬರು ಪ್ರಮುಖ ಅಧಿಕಾರಿಗಳ ಜತೆ ಸಭೆ ನಡೆಸಿ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದ್ದರು.

English summary
NSA Ajit Doval held meeting with Mike Pompeo and Mark Esper to discuss on growing strategic ties between the two countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X