ಯಾವುದನ್ನೂ ನಿಷೇಧಿಸಬೇಡಿ, ನಿಯಂತ್ರಿಸಿ : ಕಮಲ್ ಹಾಸನ್
'ಯಾವುದನ್ನೂ ನಿಷೇಧಿಸಬೇಡಿ, ನಿಯಂತ್ರಿಸಿ' ಅದು ಜಲ್ಲಿಕಟ್ಟು ಆಚರಣೆಯಾಗಲಿ, ಪೇಟಾ ಆಗಲಿ, ನಿಯಂತ್ರಣ ಮುಖ್ಯ. ‘ಪೊಲೀಸರು ಕೂಡಾ ಹಿಂಸಾಚಾರ ಎಸಗಿದ ಸರಣಿ ವಿಡಿಯೋಗಳನ್ನು ನೋಡಿ ನನಗೆ ಆಘಾತವಾಗಿದೆ' ಚಿತ್ರನಟ ಕಮಲ್ ಹಾಸನ್ ಹೇಳಿದ್ದಾರೆ
ಚೆನ್ನೈ, ಜನವರಿ 24: 'ಯಾವುದನ್ನೂ ನಿಷೇಧಿಸಬೇಡಿ, ನಿಯಂತ್ರಿಸಿ' ಅದು ಜಲ್ಲಿಕಟ್ಟು ಆಚರಣೆಯಾಗಲಿ, ಪೇಟಾ ಆಗಲಿ, ನಿಯಂತ್ರಣ ಮುಖ್ಯ. 'ಪೊಲೀಸರು ಕೂಡಾ ಹಿಂಸಾಚಾರ ಎಸಗಿದ ಸರಣಿ ವಿಡಿಯೋಗಳನ್ನು ನೋಡಿ ನನಗೆ ಆಘಾತವಾಗಿದೆ' ಚಿತ್ರನಟ ಕಮಲ್ ಹಾಸನ್ ಅವರು ಮಂಗಳವಾರ ತಮ್ಮ ನೋವು ತೋಡಿಕೊಂಡಿದ್ದಾರೆ.
ಯಾವುದೇ ರೂಪದ ನಿಷೇಧಗಳಿಗೆ ನಾನು ವಿರೋಧಿ' ಎಂದರು. ಪೊಲೀಸರೂ ಹಿಂಸಾಚಾರ ಎಸಗಿದ ವಿಡಿಯೋ ಕಂಡು ನನಗೆ ಅಷ್ಟೇ ಆಘಾತವಾಗಿದೆ. ಈ ಬಗ್ಗೆ ನಮಗೆ ಸಮಾಧಾನವಾಗುವಂತಹ ವಿವರಣೆ ನೀಡುತ್ತಾರೆ ಎಂದು ಭಾವಿಸಿದ್ದೇನೆ' ಎಂದು ಅವರು ನುಡಿದರು.

ಮರೀನಾ ಬೀಚ್ನಲ್ಲಿ ಒಂದು ವಾರದಿಂದ ಶಾಂತಿಯುತವಾಗಿ ಜಲ್ಲಿಕಟ್ಟು ಪರ ಹೋರಾಟದಲ್ಲಿ ನಡೆದಿತ್ತು. ವಿದ್ಯಾರ್ಥಿಗಳು ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಯಾವುದೇ ಹಿಂಸಾಚಾರ ಸಂಭವಿಸಿರಲಿಲ್ಲ. ಆದರೆ, ನಂತರ ಹಿಂಸಾಚಾರ ಸಂಭವಿಸಿದ್ದು ಖೇದಕರ. ಪೊಲೀಸರೂ ಹಿಂಸಾಚಾರ ನಿರತರಾದ ವಿಡಿಯೋಗಳು ನಮ್ಮನ್ನು ಘಾಸಿಗೊಳಿಸಿವೆ.
ಪೊಲೀಸರು ಆಟೋರಿಕ್ಷಾಕ್ಕೆ ಬೆಂಕಿ ಹಚ್ಚುವ ವಿಡಿಯೊಗಳು ಚ್ಚಿದ ಹಾಗೂ ಮಹಿಳೆಯರತ್ತ ಲಾಠಿ ಬೀಸಿದ ವಿಡಿಯೋಗಳನ್ನು ಉಲ್ಲೇಖಿಸುತ್ತಾ ಕಮಲ್ ಹೇಳಿದರು.
Chennai: I say I dont want to hate (Pakistan), I want to rub out the borders, we created the borders: Kamal Haasan pic.twitter.com/hItNJJIhmr
— ANI (@ANI_news) January 24, 2017
'ನಾನು ಪಾಕಿಸ್ತಾನವನ್ನು ದ್ವೇಷಿಸಲು ಬಯಸುವುದಿಲ್ಲ. ಗಡಿಗಳನ್ನೇ ಅಳಿಸಹಾಕಬೇಕು ಎಂದು ನಾನು ಅಪೇಕ್ಷಿಸುತ್ತೇನೆ. ಗಡಿಗಳನ್ನು ಸೃಷ್ಟಿಸಿದವರು ನಾವು ಎಂದು ಕಮಲ್ ಹೇಳಿದರು. 'ನಾನೇನಾದರೂ 1924ರಲ್ಲಿ ಹುಟ್ಟಿರುತ್ತಿದ್ದರೆ ಮಹಾತ್ಮಾ ಗಾಂಧಿ ಅವರ ಮುಂದೆ ಕುಳಿತು ಭಾರತ- ಪಾಕಿಸ್ತಾನ ಮಧ್ಯೆ ಏಕತೆಗಾಗಿ ಪ್ರಾರ್ಥಿಸುತ್ತಿದ್ದೆ' ಎಂದು ಹೇಳಿದರು.











Click it and Unblock the Notifications