ಇಂದು ದೊಡ್ಡ ಚಂದಿರನ ನೋಡಿಬಿಡಿ, ಇಲ್ಲದಿದ್ದರೆ 18 ವರ್ಷ ಕಾಯ್ಬೇಕು!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 14: ಕಾರ್ತೀಕ ಮಾಸದ ಸೋಮವಾರದ ಹುಣ್ಣಿಮೆ (ನವೆಂಬರ್ 14) ಮತ್ತಷ್ಟು ವಿಶೇಷ ಎಂಬುದು ನಿಮಗೆ ಗೊತ್ತಾಗಿದೆಯೇ? ಇಂದು ರಾತ್ರಿ ಕಾಣಿಸಿಕೊಳ್ಳುವ ಚಂದ್ರ ಮಾಮೂಲಿಗಿಂತ ಶೇ 14ರಷ್ಟು ದೊಡ್ಡದಾಗೂ ಹಾಗೂ ಶೇ 30ರಷ್ಟು ಹೆಚ್ಚು ಪ್ರಕಾಶಮಾನವಾಗಿಯೂ ಕಾಣಿಸಿಕೊಳ್ಳುತ್ತೆ. ಇದನ್ನು ಸೂಪರ್ ಮೂನ್ ಅಂತಾರೆ.

ಭೂಮಿಗೆ ತುಂಬ ಹತ್ತಿರದಲ್ಲಿ ಚಂದ್ರ ಕಾಣಿಸಿಕೊಳ್ಳುವುದರಿಂದ ಇಂಥ ವಿದ್ಯಮಾನಕ್ಕೆ ನಾವೆಲ್ಲ ಸಾಕ್ಷಿಯಾಗಲಿದ್ದೇವೆ. ಮತ್ತೆ ಇಂಥ ಅದ್ಭುತ ಸಂಗತಿ ಕಾಣಿಸಿಕೊಳ್ಳುವುದು ಹದಿನೆಂಟು ವರ್ಷಗಳ ನಂತರವೇ. ಅಂದರೆ ನವೆಂಬರ್ 25, 2034ನೇ ಇಸವಿವರೆಗೆ ಕಾಯಬೇಕಾಗುತ್ತದೆ. ಭಾರತದಲ್ಲಿ ರಾತ್ರಿ 7.22ರ ವೇಳೆಗೆ ಚಂದ್ರನ ಪೂರ್ಣ ಪ್ರಮಾಣ ನೋಟ ಕಾಣಸಿಗುವ ಸಾಧ್ಯತೆ ಇದೆ.[ಸೂಪರ್ ಕೆಂಪು ಚಂದ್ರನ ಕುರಿತು ಇಂಟರೆಸ್ಟಿಂಗ್ ಸಂಗತಿ]

ಇನ್ನು ಚಂದ್ರ ರಾತ್ರಿ 8.09ರ ವೇಳೆಗೆ ಭೂಮಿಗೆ ತುಂಬ ಹತ್ತಿರದಲ್ಲಿ ಕಾಣಿಸಿಕೊಳ್ಳುತ್ತಾನೆ. ಅಂದರೆ 3,50,000 ಕಿ.ಮೀ. ಹತ್ತಿರಕ್ಕೆ ಚಂದ್ರ ದರ್ಶನವಾಗುತ್ತದೆ. ತುಂಬ ಚೆನ್ನಾಗಿ ಚಂದ್ರನನ್ನ ನೋಡಬೇಕು ಎಂಬ ಕುತೂಹಲ ನಿಮ್ಮಲ್ಲಿದ್ದರೆ ಮಾಲಿನ್ಯ ಕಡಿಮೆ ಇರುವ ಪ್ರದೇಶಗಳಿಗೆ ತೆರಳಿ, ಅಲ್ಲಿಂದ ನೋಡಿ. ಪೂರ್ವಕ್ಕೆ ಇರುವ ಸಮುದ್ರದಿಂದ, ಬೆಟ್ಟದ ಮೇಲಿಂದ ಮತ್ತೂ ಸುಂದರ ದೃಶ್ಯಗಳನ್ನು ಕಣ್ಣು ತುಂಬಿಕೊಳ್ಳಬಹುದು.

1948ರಲ್ಲಿ ಕಾಣಿಸಿತ್ತು

1948ರಲ್ಲಿ ಕಾಣಿಸಿತ್ತು

1948ರಲ್ಲಿ ಕಾಣಿಸಿಕೊಂಡಿತ್ತು ಅತಿ ದೊಡ್ಡದಾದ ಚಂದ್ರ. ಆ ನಂತರ ಈಗಲೇ ಚಂದ್ರ ಇಷ್ಟು ದೊಡ್ಡದಾಗಿ ನೋಡಲು ಸಿಗುತ್ತಿರುವುದು. ನಾಸಾ ಪ್ರಕಾರ, ಭೂಮಿಗೆ ಇಷ್ಟು ಹತ್ತಿರದಿಂದ, ಇಷ್ಟು ಪ್ರಕಾಶಮಾನವಾಗಿ ಚಂದ್ರನನ್ನ ನೋಡಲು ನವೆಂಬರ್ 25, 2034ರವರೆಗೆ ಕಾಯಬೇಕು.

ಮೂರು 'ಬಗೆ' ಚಂದಿರ

ಮೂರು 'ಬಗೆ' ಚಂದಿರ

2016ನೇ ಇಸವಿಯಲ್ಲೇ ಮೂರು ಬಗೆಯ ಚಂದ್ರನ ನೋಡಲು ಸಾಧ್ಯವಾಗಿದೆ. ಅಕ್ಟೋಬರ್ 16ರಂದು 'ಹಂಟರ್ ಮೂನ್' ಕಂಡಿತ್ತು. ಮುಂದಿನ ತಿಂಗಳು 14ಕ್ಕೆ 'ಕೋಲ್ಡ್ ಮೂನ್' ಕಾಣಿಸಲಿದೆ. ಸೋಮವಾರ (ನವೆಂಬರ್ 14) ಕಾಣಿಸುವುದು ಸೂಪರ್ ಮೂನ್.

ಜನಪದ ನಂಬಿಕೆ

ಜನಪದ ನಂಬಿಕೆ

ನವೆಂಬರ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಈ ದೊಡ್ಡ ಚಂದ್ರನಿಗೆ ಸುಶಿಕ್ಷಿತ ಹೆಸರು ಅಂದರೆ ಬೀವರ್ ಮೂನ್ ಅಂತಿದ್ದಾರೆ. ಆದರೆ ಜನಪದೀಯ ನಂಬಿಕೆಗಳು ಸಹ ಇದರ ಸುತ್ತ ಇದೆ.

ಸೂರ್ಯ, ಚಂದ್ರ, ಭೂಮಿ ಒಂದೇ ಕಕ್ಷೆ

ಸೂರ್ಯ, ಚಂದ್ರ, ಭೂಮಿ ಒಂದೇ ಕಕ್ಷೆ

ಸೂರ್ಯ, ಚಂದ್ರ ಹಾಗೂ ಭೂಮಿ ಒಂದೇ ಕಕ್ಷೆಯಲ್ಲಿದ್ದಾಗ, ಚಂದ್ರ ಭೂಮಿಗೆ ಸಮೀಪವಾಗಿ ಬಂದಾಗ ಕಾಣಿಸುವ ಅಪರೂಪದ ಚಿತ್ರ ಇದು. ಈ ವೇಳೆ ಚಂದ್ರ ಎಂದಿನ ಹುಣ್ಣಿಮೆ ದಿನ ಕಾಣಿಸಿಕೊಳ್ಳುವುದಕ್ಕಿಂತ ಶೇ 14ರಷ್ಟು ದೊಡ್ಡದಾಗಿಯೂ ಶೇ 30ರಷ್ಟು ಹೆಚ್ಚು ಪ್ರಕಾಶಮಾನವಾಗಿಯೂ ಕಾಣಿಸಿಕೊಳ್ಳುತ್ತೆ.

ಇಡೀ ರಾತ್ರಿ ಎದ್ದಿರಬೇಕಿಲ್ಲ

ಇಡೀ ರಾತ್ರಿ ಎದ್ದಿರಬೇಕಿಲ್ಲ

ಸೂಪರ್ ಚಂದ್ರನನ್ನ ನೋಡುವುದಕ್ಕೆ ಇಡೀ ರಾತ್ರಿ ಎಚ್ಚೆತ್ತು ಕಾಯಬೇಕು ಅಂತೇನೂ ಇಲ್ಲ. ಸೂರ್ಯಾಸ್ತವಾದ ನಂತರ ಯಾವ ಸಮಯದಲ್ಲಾದರೂ ನೋಡಬಹುದು. ಅದರೆ ರಾತ್ರಿ 7.22ರ ವೇಳೆಗೆ ಕಾಣುವ ಚಂದ್ರ ಸೌಂದರ್ಯ ತುಂಬ ಚಂದ ನೆನಪಿರಲಿ.

ಜ್ಯೋತಿಷ್ಯದ ಮಹತ್ವ ಇಲ್ಲ

ಜ್ಯೋತಿಷ್ಯದ ಮಹತ್ವ ಇಲ್ಲ

ಇದು ಬಾಹ್ಯಾಕಾಶದಲ್ಲಿ ಕಾಣುವ ವಿಸ್ಮಯ ಅನ್ನೋದರಲ್ಲಿ ಎರಡು ಮಾತಿಲ್ಲ. ಇದು ವೈಜ್ಞಾನಿಕ ಸಂಗತಿಯೇ ಹೊರತು ಜ್ಯೋತಿಷ್ಯದಲ್ಲಿ ತುಂಬ ಮಹತ್ವ ಇರುವ ಸಂಗತಿ ಅಲ್ಲ ಎನ್ನುತ್ತಾರೆ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ್ ಭಟ್.

ಸೂಪರ್ ಮೂನ್

ಸೂಪರ್ ಮೂನ್

ಸೂಪರ್ ಮೂನ್ ಬಗ್ಗೆ ಮತ್ತಷ್ಟು, ಇನ್ನಷ್ಟು ಮಾಹಿತಿ ಇನ್ ಫೋ ಗ್ರಾಫಿಕ್ಸ್ನಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It’s the November 14th supermoon. Also known as the 'Beaver Full Moon,' November’s full moon is the closest full moon to Earth in 2016. According to NASA, you won’t see a moon this bright and close to Earth again until November 25th, 2034.
Please Wait while comments are loading...