Get Updates
Get notified of breaking news, exclusive insights, and must-see stories!

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟೀ ಕುಡಿಸಬೇಕು ಎಂದ ಡಾಲಿ ಚಾಯ್‌ವಾಲ

ನಾಗ್ಪುರದ ಡಾಲಿ ಚಾಯ್‌ವಾಲಾ ಸದ್ಯ ದೇಶ-ವಿದೇಶದಲ್ಲಿ ಕೂಡ ಜನಪ್ರಿಯವಾಗುತ್ತಿದ್ದಾರೆ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್‌ ಗೇಟ್ಸ್ ಅವರು ನಾಗ್ಪುರದ ಪ್ರಸಿದ್ಧ ಡಾಲಿ ಚಾಯ್‌ವಾಲಾ ಬಳಿ ರಸ್ತೆ ಬದಿ ಟೀ ಕುಡಿಯುವ ವಿಡಿಯೋ ಪೋಸ್ಟ್ ಮಾಡಿದ್ದರು.

ಬಿಲ್‌ಗೇಟ್ಸ್‌ಗೆ ಚಹಾ ಕೊಟ್ಟ ಬಳಿಕ ದೇಶದ ಗಮನ ಸೆಳೆದಿರುವ ಡಾಲಿ ಚಾಯ್‌ವಾಲಾ ತಮಗೆ ಅವರು ಬಿಲ್‌ ಗೇಟ್ಸ್ ಎಂದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಅವರು, ತಮ್ಮ ಮನದಾಸೆಯನ್ನು ಹಂಚಿಕೊಂಡಿದ್ದಾರೆ.

Dolly Chaiwala Expresses Desire to Serve Tea to Prime Minister Narendra Modi

ಟೀ ಕೊಟ್ಟಾಗ ಅವರು ಯಾರು ಅಂತಾನೆ ಗೊತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. "ವಿದೇಶದಿಂದ ಬಂದವರು ಆದ್ದರಿಂದ ನಾನು ಅವರಿಗೆ ಚಹಾವನ್ನು ಕೊಡಬೇಕು ಎಂದು ಭಾವಿಸಿದೆ. ಮರುದಿನ ನಾನು ನಾಗ್ಪುರಕ್ಕೆ ಹಿಂತಿರುಗಿದಾಗ ನಾನು ಯಾರಿಗೆ ಟೀ ಕೊಟ್ಟೆ ಎನ್ನುವುದನ್ನು ನೋಡಿದೆ. ಬಿಲ್ ಗೇಟ್ಸ್ 'ವಾವ್, ಡಾಲಿ ಕಿ ಚಾಯ್' ಎಂದರು. ಆದರೆ ನಾವು ಸ್ವಲ್ಪವೂ ಮಾತನಾಡಲಿಲ್ಲ, ಅವರು ನನ್ನ ಪಕ್ಕದಲ್ಲಿ ನಿಂತಿದ್ದರು ಮತ್ತು ನಾನು ನನ್ನ ಕೆಲಸದಲ್ಲಿ ನಿರತನಾಗಿದ್ದೆ" ಎಂದು ಹೇಳಿದ್ದಾರೆ.

ದಕ್ಷಿಣ ಭಾರತದ ಸಿನಿಮಾ ಪ್ರೇಮಿ

ನಾನು ದಕ್ಷಿಣ ಭಾರತದ ಚಲನಚಿತ್ರಗಳನ್ನು ಹೆಚ್ಚಾಗಿ ನೋಡುತ್ತೇನೆ. ಅದರಿಂದ ನಾನು ಈ ರೀತಿ ಸ್ಟೈಲ್‌ಗಳನ್ನು ಕಲಿತಿದ್ದೇನೆ. ಇಂದು ನಾನು ನಾಗ್ಪುರದ ಡಾಲಿ ಚಾಯ್ ವಾಲಾ ಆಗಿದ್ದೇನೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.

ಡಾಲಿ ಚಾಯ್‌ವಾಲಾ ತಮ್ಮ ವಿಭಿನ್ನ ಸ್ಟೈಲ್ ಮೂಲಕ ಗಮನ ಸೆಳೆದಿದ್ದಾರೆ. ಹಲವು ಯೂಟ್ಯೂಬ್ ವಾಹಿನಿಗಳಲ್ಲಿ, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಅವರು ಟೀ ಮಾಡುವ, ವಿಭಿನ್ನವಾಗಿ ಅದನ್ನು ಗ್ಲಾಸ್‌ಗೆ ಹಾಕಿಕೊಡುವ ವಿಡಿಯೋ ವೈರಲ್ ಆಗಿದ್ದವು.

ಅವರ ದೊಡ್ಡ ಆಸೆ ಇದೇ ಅಂತೆ..

ಬಿಲ್‌ ಗೇಟ್ಸ್‌ ಅವರಿಗೆ ಟೀ ಮಾಡಿಕೊಟ್ಟು ಜನಪ್ರಿಯವಾಗಿರುವ ಡಾಲಿ ಚಾಯ್‌ವಾಲಾಗೆ ದೊಡ್ಡ ಆಸೆ ಇದೆಯಂತೆ, ಅದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟೀ ಮಾಡಿಕೊಡುವ ಬಯಕೆ ಎಂದು ಹೇಳಿದ್ದಾರೆ. ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಚಹಾವನ್ನು ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ತಾನು ಚಿಕ್ಕ ವಯಸ್ಸಿನಲ್ಲಿ ಟೀ ಮಾರುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಅವರಿಗೆ ಈಗ ಚಹಾ ಕುಡಿಸುವ ಆಸೆಯನ್ನು ನಾಗ್ಪುರ ಟೀ ವ್ಯಾಪಾರಿ ವ್ಯಕ್ತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+