ಧೋಕ್ಲಾಂನಿಂದ ಭಾರತೀಯ ಸೇನೆ ಮಾತ್ರ ಹಿಂತೆಗೆತ : ಚೀನಾ
ನವದೆಹಲಿ, ಆಗಸ್ಟ್ 28: ಧೋಕ್ಲಾಂನಿಂದ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುವುದಾಗಿ ಭಾರತದ ವಿದೇಶಾಂಗ ಇಲಾಖೆ ಹೇಳಿದ ಕೆಲವೇ ಕ್ಷಣಗಳಲ್ಲಿ ತಾನು ಸೇನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಚೀನಾ ಹೇಳಿದೆ.
ತನ್ನ ಸೇನೆ ಇನ್ನೂ ಇಲ್ಲಿ ಗಸ್ತು ತಿರುಗಲಿದೆ ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳಿದೆ. ಈ ಮೂಲಕ ಭಾರತೀಯ ವಿದೇಶಾಂಗ ಇಲಾಖೆ ನೀಡಿದ್ದ ಹೇಳಿಕೆಗೆ ಚೀನಾ ಉಲ್ಟಾ ಹೊಡೆದಿದೆ.

ಇದಕ್ಕೂ ಮೊದಲು ಭಾರತೀಯ ವಿದೇಶಾಂಗ ಇಲಾಖೆ ಎರಡೂ ದೇಶಗಳು ಸೇನೆಯನ್ನು ಧೋಕ್ಲಾಂ ನಿಂದ ಹಿಂತೆಗೆದುಕೊಳ್ಳಲಿವೆ ಎಂದು ಹೇಳಿತ್ತು. ಆದರೆ, ಚೀನಾ ಮಾತ್ರ, "ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಿದೆ. ಆದರೆ ನಮ್ಮ ಸೇನೆ ಹಿಂದಕ್ಕೆ ಬರುವುದಿಲ್ಲ," ಎಂದು ಹೇಳಿದೆ.












Click it and Unblock the Notifications