ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತಿನಲ್ಲಿ ಸ್ವತಃ ನೀತಿ ಸಂಹಿತೆ ಉಲ್ಲಂಘಿಸಿದರೇ ಪ್ರಧಾನಿ ಮೋದಿ?!

|
Google Oneindia Kannada News

Recommended Video

ಪ್ರಧಾನಿ ಮೋದಿಯವರೇ ಗುಜರಾತಿನಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದರೇ ?! | Oneindia Kannada

ಅಹ್ಮದಾಬಾದ್, ಡಿಸೆಂಬರ್ 14: ಪ್ರಧಾನಿ ನರೇಂದ್ರ ಮೋದಿಯವರೇ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದರಾ..? ಹಾಗೊಂದು ಕೂಗು ಎದ್ದಿದೆ.

LIVE - ಗುಜರಾತ್ ನಲ್ಲಿ 12 ಗಂಟೆ ವೇಳೆಗೆ ಶೇಕಡಾ 39 ಮತದಾನLIVE - ಗುಜರಾತ್ ನಲ್ಲಿ 12 ಗಂಟೆ ವೇಳೆಗೆ ಶೇಕಡಾ 39 ಮತದಾನ

ಅಹ್ಮದಾಬಾದಿನ ರಾನಿಪ್ ನಲ್ಲಿ ಜನರೊಡನೆ ಸರದಿಯಲ್ಲಿ ನಿಂತು ಮೋದಿ ಮತಚಲಾಯಿಸಿದ್ದು ನಿಜಕ್ಕೂ ಆದರ್ಶವೇ. ಆದರೆ ಮತಚಲಾಯಿಸಿದ ನಂತರ ರೋಡ್ ಶೋ ನಡೆಸಿದ್ದು ಸರಿಯೇ? ಚುನಾವಣಾ ನೀತಿ ಸಂಹಿತೆ ಛಾಲ್ತಿಯಲ್ಲಿರುವಾಗ ಇಷ್ಟೇಲ್ಲ ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿ ರೋಡ್ ಶೋ ನಡೆಸಿದ್ದು ಎಷ್ಟಮಟ್ಟಿಗೆ ಸರಿ ಎಂಬುದು ಈಗ ಎದ್ದಿರುವ ಪ್ರಶ್ನೆ!

ಕಳೆದ ಬಾರಿ ಮಾಡಿದ್ದ ಜಾದೂ ಈಗಲೂ ಮಾಡುವುದೆ ಬಿಜೆಪಿ?ಕಳೆದ ಬಾರಿ ಮಾಡಿದ್ದ ಜಾದೂ ಈಗಲೂ ಮಾಡುವುದೆ ಬಿಜೆಪಿ?

ಇಂದು(ಡಿ.14) ಬೆಳಿಗ್ಗೆ ಅಹ್ಮದಾಬಾದಿನಲ್ಲಿ ಮತದಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಮತದಾನದ ನಂತರ ತಾವು ಕುಳಿತಿದ್ದ ವಾಹನದಿಂದ ಎದ್ದು ಜನರತ್ತ ಕೈಬೀಸುತ್ತ ಕೆಲಕಾಲ ರೋಡ್ ಶೋ ನಡೆಸಿದ್ದರು. ಈ ಕುರಿತು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಲ್ಲದೆ, ಚುನಾವಣಾ ಆಯೋಗವೂ ಮೋದಿಯವರ ಒತ್ತಡದಲ್ಲಿ ಕೆಲಸ ಮಾಡುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ಗುಜರಾತಿನ ಒಳಿತಿಗಾಗಿ ಪ್ರಾರ್ಥಿಸುತ್ತೇನೆ ಎಂದ ಮೋದಿ ತಾಯಿ ಹೀರಾಬೆನ್ಗುಜರಾತಿನ ಒಳಿತಿಗಾಗಿ ಪ್ರಾರ್ಥಿಸುತ್ತೇನೆ ಎಂದ ಮೋದಿ ತಾಯಿ ಹೀರಾಬೆನ್

ನೀತಿ ಸಂಹಿತೆ ಉಲ್ಲಂಘನೆಯಲ್ಲವೇ?

ಮತದಾನದ ನಂತರ ಪ್ರಧಾನಿ ಮೋದಿಯವರ ರೋಡ್ ಶೋ, ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಬಹುಶಃ ಚುನಾವಣಾ ಆಯೋಗವೂ ಪ್ರಧಾನಿ ನರೇಂದ್ರ ಮೋದಿಯವರ ಒತ್ತಡದಲ್ಲಿ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್ ಖಾರವಾಗಿ ಪ್ರಶ್ನಿಸಿದ್ದಾರೆ.

ರಾಹುಲ್ ವಿರುದ್ಧ ಮಾತ್ರ ಕ್ರಮ ತೆಗೆದುಕೊಂಡಿಲ್ಲವೇ?

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಟಿವಿ ಚಾನೆಲ್ ವೊಂದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂದರ್ಶನ ನೀಡಿದರೆಂದು ಅವರ ವಿರುದ್ಧ ಚುನಾವಣಾ ಆಯೋಗ ನೋಟೀಸು ಜಾರಿಗೊಳಿಸಿರಲಿಲ್ಲವೇ? ಹಾಗೆಯೇ ಪ್ರಧಾನಿ ಮೋದಿಯವರ ವಿರುದ್ಧವೂ ನೋಟೀಸ್ ಜಾರಿಗೊಳಿಸಿ ಎಂದು ಕಾಂಗ್ರೆಸ್ಸಿಗರು ಪಟ್ಟುಹಿಡಿದಿದ್ದಾರೆ.

ಚುನಾವಣಾ ಆಯೋಗದ ದ್ವಂದ್ವ ನೀತಿ!

ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ರಂದೀಪ್ ಸುರ್ಜೇವಾಲಾ, ಚುನಾವಣಾ ಆಯೋಗದ ದ್ವಂದ್ವ ನೀತಿಯ ಕುರಿತು ನಾವಿಂದು ಪತ್ರಿಕಾ ಗೋಷ್ಠಿ ಕರೆದು ಮಾತನಾಡುವುದಾಗಿ ಹೇಳಿದ್ದಾರೆ. ಚುನಾವಣಾ ಆಯೋಗವೇಕೆ ಪ್ರಧಾನಿಯವರ ಆಪ್ತಕಾರ್ದರ್ಶಿಯ ಹಾಗೆ ಕೆಲಸ ಮಾಡುತ್ತಿದೆ ಎಂದು ಅವರು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಸಮಜಾಯಿಷಿ ನೀಡಿದ ಬಿಜೆಪಿ

ಸಮಜಾಯಿಷಿ ನೀಡಿದ ಬಿಜೆಪಿ

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ, ಇದು ಪೂರ್ವನಿರ್ಧರಿತ ಕಾರ್ಯಕ್ರಮವಾಗಿರಲಿಲ್ಲ. ಪ್ರಧಾನಿ ಮೋದಿಯವರು ಮತಚಲಾಯಿಸಿ ಹೊರಟು ನಿಂತಾಗ ಜನರು ಅವರ ಸುತ್ತ ಸುತ್ತುವರಿದು, ಕೈಬೀಸಿದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರು ಸಹ ಪ್ರತಿಕ್ರಿಯೆಯಾಗಿ ಕೈಬೀಸಿದ್ದಾರೆ ಎಂದಿದೆ. ಆದರೆ ಬಿಜೆಪಿಯ ಸಮಜಾಯಿಷಿಯನ್ನು ಅಲ್ಲಗಳೆದಿರುವ ಕಾಂಗ್ರೆಸ್, ತಾನು ಈ ಕುರಿತು ಚುನಾವಣಾ ಆಯೋಗಕ್ಕೆ ದೂರುನೀಡುವುದಾಗಿ ಹೇಳಿದೆ.

English summary
"Prime minister Narendra Modi's roadshow with his inked finger in Gujarat assembly elections 2017, is a violation of model code of conduct" congress blames. Congress also blames election commission for not taking any action on this issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X