ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಲಸಿಕೆ ಖರೀದಿಸಲು 80 ಸಾವಿರ ಕೋಟಿ ರೂ. ಸರ್ಕಾರದ ಬಳಿ ಇದೆಯೇ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 26: ದೇಶದಲ್ಲಿ ಕೊರೊನಾ ಲಸಿಕೆ ತಯಾರಿಕೆ ಹಾಗೂ ಮಾರಾಟ ಪ್ರಮುಖವಾದದ್ದು, ಮುಂದಿನ ಒಂದು ವರ್ಷದೊಳಗೆ ಕೇಂದ್ರ ಸರ್ಕಾರದ ಬಳಿ 80 ಸಾವಿರ ಕೋಟಿ ರೂ. ಹಣ ಸಿದ್ಧವಿರುವುದೇ ಎಂದು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದರ್ ಪೂನಾವಾಲ ಪ್ರಶ್ನಿಸಿದ್ದಾರೆ.

ಇಡೀ ವಿಶ್ವದಲ್ಲೇ ಸೆರಂ ಅತಿ ಹೆಚ್ಚು ಲಸಿಕೆಗಳನ್ನು ತಯಾರಿಸುವ ಕಂಪನಿಯಾಗಿದೆ.ಮುಂದಿನ ಒಂದು ವರ್ಷದಲ್ಲಿ ಭಾರತದ ಬಳಿ 80 ಸಾವಿರ ಕೋಟಿ ರೂ. ಲಭ್ಯವಿರುವುದೇ? ಯಾಕೆಂದರೆ ಆರೋಗ್ಯ ಸಚಿವಾಲಯವು ಲಸಿಕೆಯನ್ನು ಖರೀದಿಸಿ ಭಾರತದಲ್ಲಿ ವಿತರಿಸಬೇಕಾಗುತ್ತದೆ ನಾವು ಎದುರಿಸುವ ಮುಂದಿನ ಸವಾಲು ಇದು ಎಂದಿದ್ದಾರೆ.

ಲಕ್ಷಣಗಳಿದ್ದರೂ ಕೊರೊನಾ ಪರೀಕ್ಷೆ ಮಾಡಿಸಲು ಜನರು ಹಿಂಜರಿಯುತ್ತಿರುವುದೇಕೆ? ಲಕ್ಷಣಗಳಿದ್ದರೂ ಕೊರೊನಾ ಪರೀಕ್ಷೆ ಮಾಡಿಸಲು ಜನರು ಹಿಂಜರಿಯುತ್ತಿರುವುದೇಕೆ?

ಭಾರತ ಮತ್ತು ವಿದೇಶದಲ್ಲಿ ಲಸಿಕೆ ತಯಾರಕರು ತಮ್ಮ ದೇಶದ ಅಗತ್ಯತೆಗೆ ಅನುಗುಣವಾಗಿ ಲಸಿಕೆಗಳನ್ನು ತಯಾರಿಸಬೇಕಾಗುತ್ತದೆ. ಹೀಗಾಗಿ ನಾನು ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ.

Does Centre Have 80,000 Crore For Covid Vaccines?

ಹಾಗೆಯೇ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೊವಿಡಶೀಲ್ಡ್ , ಆಸ್ಟ್ರಾಜೆನೆಕಾದ ಎರಡು ಮತ್ತು ಮೂರನೇ ಹಂತದ ಪ್ರಯೋಗವನ್ನು ಸೆರಂ ಸಂಸ್ಥೆ ನಡೆಸುತ್ತಿದೆ.

ಇನ್ನು ಕೋವ್ಯಾಕ್ಸಿನ್ ಹಾಗೂ ಜೈಡಸ್ ಕ್ಯಾಡಿಲಾ ಎರಡು ಹಂತಗಳ ಪರೀಕ್ಷೆ ಮುಗಿಸಿದ್ದು, ಮೂರನೇ ಹಂತಕ್ಕೆ ಅನುಮತಿಗೆ ಕಾಯುತ್ತಿವೆ.ದೇಶದಲ್ಲಿ ನಿತ್ಯ 80 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. 9.6 ಲಕ್ಷ ಸಕ್ರಿಯ ಪ್ರಕರಣಗಳಿವೆ.

ಕೊರೊನಾ ಲಸಿಕೆ ಸಿದ್ಧವಿದ್ದು, ಪ್ರತಿಯೊಬ್ಬರ ಭಾರತೀಯನಿಗೂ ಲಸಿಕೆ ಲಭ್ಯವಾಗುವಂತೆ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದರು.

Recommended Video

North Korea ಅಧ್ಯಕ್ಷನ್ನ meet ಮಾಡ್ತೀನಿ , ನೋ Tension | Oneindia Kannada

ಒಂದೊಮ್ಮೆ ಕೊವಿಶೀಲ್ಡ್ ಲಸಿಕೆ ಲಭ್ಯವಾಗುತ್ತದೆ ಎಂದರೆ ಒಂದು ಲಸಿಕೆಗೆ 1 ಸಾವಿರ ರೂ. ತಗುಲುತ್ತದೆ. ಪ್ರತಿ ತಿಂಗಳು 30 ಬಿಲಿಯನ್ ಡೋಸ್‌ಗಳ ಅಗತ್ಯವಿರುತ್ತದೆ. ಇಡೀ ದೇಶದ ಜನರನ್ನು ತಲುಪುವಷ್ಟರಲ್ಲಿ ಸುಮಾರು 2 ವರ್ಷಗಳ ಕಾಲ ಹಿಡಿಯಬಹುದು.

English summary
Adar Poonawalla, the CEO of the Serum Institute of India - the world's largest manufacturer of vaccines by volume and which is conducting Covid vaccine trials ahead of mass production - took to Twitter today to highlight potential challenges ahead of vaccine production and distribution in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X