ಕೊರೊನಾ ಸೋಂಕಿನಿಂದ ಗುಣಮುಖರಾದ ತಕ್ಷಣ ಕಠಿಣ ಕೆಲಸಗಳು ಬೇಡ
ನವದೆಹಲಿ, ಸೆಪ್ಟೆಂಬರ್ 08: ಕೊರೊನಾ ಸೋಂಕು ವಿಶ್ವದೆಲ್ಲೆಡೆ ಹರಡುತ್ತಾ 8 ತಿಂಗಳುಗಳೇ ಕಳೆದಿದೆ. ಕೊರೊನಾ ಸೋಂಕು ಕೇವಲ ಶ್ವಾಸಕೋಶಕ್ಕೆ ಮಾತ್ರ ತೊಂದರೆ ಉಂಟು ಮಾಡುವುದಿಲ್ಲ ಬದಲಾಗಿ ದೇಹದ ವಿವಿಧ ಭಾಗಗಳಿಗೂ ಹರಡಬಲ್ಲದು ಎಂದು ಸಾಬೀತಾಗಿದೆ.
Recommended Video
ನೀತಿ ಆಯೋಗದ ಸಹಯೋಗದೊಂದಿಗೆ ನಡೆದ ಸಭೆಯಲ್ಲಿ ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಮಾತನಾಡಿ, ಕೊವಿಡ್ 19 ಪ್ರಕರಣಗಳಲ್ಲಿ ಕೆಲವು ರೋಗಿಗಳಿಗೆ ಕೊರೊನಾ ಸೋಂಕು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಕೆಲವರಿಗೆ ಬೀರುವುದಿಲ್ಲ.
ಈ ಹಿಂದೆ ಈ ಸೋಂಕನ್ನು ನ್ಯುಮೋನಿಯಾ ಎಂದು ನಂಬಲಾಗಿತ್ತು. ಸಂಶೋಧಕರು ಮತ್ತು ವೈದ್ಯರು ಸೋಂಕು ಹೃದಯದ ಮೇಲೂ ಪರಿಣಾಮವನ್ನು ಬೀರಬಲ್ಲದು ಎಂದು ತಿಳಿಸಿದ್ದಾರೆ.

ದೂರದ ಪ್ರಯಾಣ, ಭಾರ ಎತ್ತುವುದು ಸೇರಿದಂತೆ ಹಲವು ಚಟುವಟಿಕೆಗಳನ್ನು ತಕ್ಷಣ ಆರಂಭಿಸುವುದು ಬೇಡ ಎಂದು ವೈದ್ಯರು ಹೇಳಿದ್ದಾರೆ. ಕೊರೊನಾ ಸೋಂಕು ರಕ್ತದೊತ್ತಡ, ಉಸಿರಾಟದ ತೊಂದರೆ, ಹೃದಯ ಸಂಬಂಧಿ ತೊಂದರೆಯನ್ನು ಉಂಟು ಮಾಡುಬಲ್ಲದು.
ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ ನಾಲ್ಕರಿಂದ ಆರು ವಾರಗಳ ವರೆಗೆ ಕೆಲವು ಲಕ್ಷಣಗಳು ಇರುವುದರಿಂದ ಯಾವುದೇ ಕಾರಣಕ್ಕೂ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಕೂಡದು. ಕೆಲವರಿಗೆ ಶ್ವಾಸಕೋಶ, ಹೃದಯ ಸಂಬಂಧಿ, ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಆಸ್ಪತ್ರೆಗೆ ಹಿಂದಿರುಗಿದ್ದಾರೆ.












Click it and Unblock the Notifications