ಮಹಾರಾಷ್ಟ್ರ ಆಸ್ಪತ್ರೆಯಲ್ಲಿ ಶಿಶುಗಳ ಸಾವು: ಆಸ್ಪತ್ರೆ ವೈದ್ಯರು ಬಿಚ್ಚಿಟ್ಟ ಸತ್ಯವೇನು?
ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ 48 ಗಂಟೆಗಳಲ್ಲಿ 30ಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದಾರೆ. ದುರಂತ ಎಂದರೆ ಇದರಲ್ಲಿ 16 ಶಿಶುಗಳು ಕೂಡ ಸೇರಿವೆ. ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಕೇವಲ 24 ಹಾಸಿಗೆಗಳು ಇದ್ದು, ಆದರೆ ಇಲ್ಲಿ 65 ಶಿಶುಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1ರ ನಡುವೆ 16 ಶಿಶುಗಳು ಸಾವನ್ನಪ್ಪಿವೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.
ನಾಂದೇಡ್‌ನ ಡಾ.ಶಂಕರರಾವ್ ಚವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 30 ರಿಂದ ಇದುವರೆಗೆ 16 ಶಿಶುಗಳು ಸೇರಿದಂತೆ 30 ಸಾವುಗಳು ಸಂಭವಿಸಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

12 ಶಿಶುಗಳು ಸಾವನ್ನಪ್ಪಿದಾಗ 24 ಹಾಸಿಗೆಗಳ ಸೌಲಭ್ಯವಿರುವ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ದಾಖಲಾತಿಗಳ ಸಂಖ್ಯೆ 65 ಎಂದು ಸೌಲಭ್ಯದ ಹಿರಿಯ ವೈದ್ಯರು ಮಂಗಳವಾರ ಪಿಟಿಐಗೆ ತಿಳಿಸಿದ್ದಾರೆ. ಪೀಡಿಯಾಟ್ರಿಕ್ಸ್ ತೀವ್ರ ನಿಗಾ ಘಟಕದಲ್ಲಿ (ಪಿಐಸಿಯು) ಮತ್ತೊಂದು ಶಿಶು ಸಾವನ್ನಪ್ಪಿದೆ.
ಔಷಧಿ ಕಾರಣವಲ್ಲ ಎಂದ ವೈದ್ಯ
ನಾಂದೇಡ್ ಸೌಲಭ್ಯದಲ್ಲಿರುವ ಮಕ್ಕಳ ವಿಭಾಗದ ಮುಖ್ಯಸ್ಥ ಡಾ ಕಿಶೋರ್ ರಾಥೋಡ್, ಶಿಶು ರೋಗಿಗಳ ಸಾವಿಗೆ ಔಷಧಿಯ ಕೊರತೆಯೇ ಕಾರಣ ಎನ್ನುವ ಆರೋಪವನ್ನು ನಿರಾಕರಿಸಿದ್ದಾರೆ.
ನವಜಾತ ಶಿಶುಗಳ ತೀವ್ರ ನಿಗಾ ಘಟಕ (NICU) ದಲ್ಲಿ ಸಂಭವಿಸಿದ ಹನ್ನೊಂದು ಸಾವುಗಳಲ್ಲಿ, ಎಂಟು (ಶಿಶುಗಳು) ಅತ್ಯಂತ ನಿರ್ಣಾಯಕ ಹಂತದಲ್ಲಿ ಇಲ್ಲಿಗೆ ಸ್ಥಳಾಂತರಿಸಲ್ಪಟ್ಟಿದ್ದವು. ಆ ಶಿಶುಗಳು 1 ಕೆ.ಜಿಗಿಂತ ಕಡಿಮೆ ತೂಕವನ್ನು ಹೊಂದಿದ್ದವು ಎಂದು ಅವರು ಹೇಳಿದರು.
ಇನ್ನೊಂದು ವಾರ್ಡ್, ಪೀಡಿಯಾಟ್ರಿಕ್ಸ್ ಇಂಟೆನ್ಸಿವ್ ಕೇರ್ ಯುನಿಟ್ (ಪಿಐಸಿಯು) ಈ ಸೌಲಭ್ಯವು 31 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದ್ದು ಆದರೆ 32 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ, ಹಾಸಿಗೆಗಳ ಸೌಲಭ್ಯ ಇಲ್ಲದೇ ಇದ್ದರೂ, ಯಾವುದೇ ರೋಗಿಗೆ ಪ್ರವೇಶವನ್ನು ನಿರಾಕರಿಸಲಾಗಿಲ್ಲ ಎಂದು ಡಾ ರಾಥೋಡ್ ಹೇಳಿದರು.
ದಾಖಲಾತಿಗಳ ಸಂಖ್ಯೆ ಹೆಚ್ಚು ಇದ್ದರೂ ಸಾಮಾನ್ಯ ವಾರ್ಡ್‌ಗೆ ಮಾತ್ರ ಕನಿಷ್ಠ 90 ಹಾಸಿಗೆಗಳ ಅಗತ್ಯವಿದೆ ಎಂದು ಹೇಳಿದರು.
ಶಂಕರರಾವ್ ಚವ್ಹಾಣ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ.ಎಸ್.ಆರ್.ವಕೋಡೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮೃತ 12 ಶಿಶುಗಳಲ್ಲಿ ಆರು ಗಂಡು ಮತ್ತು ಆರು ಹೆಣ್ಣು ಶಿಶುಗಳು ಸೇರಿವೆ, ಸಾವನ್ನಪ್ಪಿದ ಶಿಶುಗಳಲ್ಲಿ ಹೆಚ್ಚಾಗಿ 0-3 ದಿನದ ವಯಸ್ಸಿನವು ಮತ್ತು ತುಂಬಾ ಕಡಿಮೆ ತೂಕ ಹೊಂದಿದ್ದವು ಎಂದು ಮಾಹಿತಿ ನೀಡಿದ್ದಾರೆ.
ಮಂಗಳವಾರ ವರದಿ ಸಲ್ಲಿಸಲು ಛತ್ರಪತಿ ಸಂಭಾಜಿನಗರ ಜಿಲ್ಲೆಯಿಂದ ಮೂವರು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications