• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುರುಷರಿಗೆ ಹೊಟ್ಟೆನೋವು ಬಂದರೆ, ಗರ್ಭಧಾರಣೆ ಪರೀಕ್ಷೆಯೇ?

|

ರಾಂಚಿ, ಅಕ್ಟೋಬರ್ 14: ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಇಬ್ಬರು ಪುರುಷರು ಆಸ್ಪತ್ರೆಗೆ ಹೋದಾಗ ವೈದ್ಯರು ಹೇಳಿರುವ ಪರೀಕ್ಷೆ ಕೇಳಿ ಬೆಚ್ಚಿಬಿದ್ದಿದ್ದಾರೆ.

ಅತಿಯಾದ ತಲೆನೋವು ಬಂದಿದೆ ಏನಾಗಿದೆ ಎಂದು ಸ್ವಲ್ಪ ನೋಡಿ, ತಡೆಯೋಕಾಗ್ತಿಲ್ಲ ಎಂದು ವೈದ್ಯರ ಬಳಿ ಹೋದರೆ ವೈದ್ಯರು ಗರ್ಭಧಾರಣೆ ಪರೀಕ್ಷೆ ಮಾಸಿಡಿಕೊಳ್ಳಿ ಎಂದು ಹೇಳಿದ್ದು ಕೇಳಿ ಕಂಗಾಲಾಗಿದ್ದಾರೆ. ಈ ಘಟನೆ ಜಾರ್ಖಂಡ್‌ನ ಛಾತ್ರಾ ಜಿಲ್ಲೆಯಲ್ಲಿ ನಡೆದಿದೆ.

ಹೊಟ್ಟೆನೋವಿನಿಂದ ಬಳಲುತ್ತಿದ್ದ ಗೋಪಾಲ್​ ಗಂಜು ಹಾಗೂ ಕಾಮೇಶ್ವರ್​ ಜನ್ಹು ಅವರು ಚಿಕಿತ್ಸೆಗೆಂದು ಸರ್ಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿನ ವೈದ್ಯರಾದ ಮುಕೇಶ್​ ಕುಮಾರ್ ಅವರು ಅವರಿಬ್ಬರಿಗೂ ಗರ್ಭಧಾರಣೆ ಪರೀಕ್ಷೆ ಮಾಡಿಸಲು ಬರೆದುಕೊಟ್ಟಿದ್ದಾರೆ.

ಅದರೊಂದಿಗೆ ಎಚ್​ಐವಿ ಹಾಗೂ ಹಿಮೋಗ್ಲೊಬಿನ್​ ಕೂಡ ಟೆಸ್ಟ್​ ಮಾಡಿಸುವಂತೆ ಸೂಚಿಸಿದ್ದಾರೆ. ಇದನ್ನು ಕೇಳಿದ ಇವರಿಬ್ಬರೂ ಶಾಕ್​ಗೆ ಒಳಗಾಗಿದ್ದಲ್ಲದೆ, ಚಾತ್ರಾ ಜಿಲ್ಲಾ ಸರ್ಜನ್​ ಅರುಣ್​ಕುಮಾರ್​ ಪಾಸ್ವಾನ್​ಗೆ ದೂರು ನೀಡಿದ್ದಾರೆ.

ರಜೆ ತಪ್ಪಿಸಲು ಸಿಬ್ಬಂದಿಗೆ ಗರ್ಭಪಾತ ಮಾಡಿಸಿದ ಆಸ್ಪತ್ರೆ

ಇಂಥದ್ದೇ ಒಂದು ವಿಲಕ್ಷಣ ಘಟನೆ ಜುಲೈನಲ್ಲಿ ಪೂರ್ವ ಸಿಂಗ್​ಭೂಮ್​ ಜಿಲ್ಲೆಯಲ್ಲಿ ನಡೆದಿತ್ತು. ಹೊಟ್ಟೆನೋವೆಂದು ಹೋದ ಮಹಿಳೆಗೆ ಅಲ್ಲಿನ ವೈದ್ಯರು ಔಷಧವೆಂದು ಕಾಂಡೋಂ ಬರೆದುಕೊಟ್ಟಿದ್ದರು.

20 ನೇ ಬಾರಿಗೆ ಗರ್ಭಿಣಿಯಾದ ಮಹಾರಾಷ್ಟ್ರದ 38 ರ ಮಹಿಳೆ!

ಚೀಟಿಯನ್ನು ತೆಗೆದುಕೊಂಡು ಮೆಡಿಕಲ್​ ಶಾಪ್​ಗೆ ಹೋದಾಗಲೇ ಅವರಿಗೆ ತಮಗೆ ವೈದ್ಯರು ಬರೆದುಕೊಟ್ಟಿದ್ದು ಕಾಂಡೋಂ ಎಂದು ತಿಳಿದುಬಂದಿತ್ತು. ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಅರುಣ್​ಕುಮಾರ್​ ಪಾಸ್ವಾನ್​ ತಿಳಿಸಿದ್ದಾರೆ. ಆದರೆ ಈ ಆರೋಪವನ್ನು ಮುಕೇಶ್​ ಕುಮಾರ್ ನಿರಾಕರಿಸಿದ್ದಾರೆ.

English summary
A doctor in Jharkhand prescribed pregnancy test to two young men in Chatra district after they complained of stomach pain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X