ಬಡ್ತಿಯಲ್ಲಿ ತಾರತಮ್ಯ, ಸುಪ್ರೀಂಕೋರ್ಟ್ ಮೊರೆ ಹೋದ 100 ಸೈನಿಕರು
ನವದೆಹಲಿ, ಸೆಪ್ಟೆಂಬರ್ 11: ಬಡ್ತಿಯಲ್ಲಿ ತಾರತಮ್ಯ ನಡೆದಿದೆ ಎಂದು ಆರೋಪಿಸಿ ಕನಿಷ್ಟ 100 ಲೆಫ್ಟಿನೆಂಟ್ ಕರ್ನಲ್ ಹುದ್ದೆಯ ಅಧಿಕಾರಿಗಳು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದಾರೆ.
ಬಡ್ತಿಯಲ್ಲಿ ತಾರತಮ್ಯವಾಗಿರುವುದರಿಂದ ಈ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿದೆ ಎಂದು ಸುಪ್ರಿಂ ಕೋರ್ಟ್ ಗೆ ಸಲ್ಲಿಸಲಾದ ಅರ್ಜಿಯಲ್ಲಿ ಹೇಳಲಾಗಿದೆ.

ಸೇವಾ ವಲಯದ ಸೈನಿಕರನ್ನು ಕಾರ್ಯಾಚರಣೆಗೆ ಕಳುಹಿಸಿ, ಬಡ್ತಿಯಲ್ಲಿ ಯುದ್ಧ ವಲಯದ ಅಧಿಕಾರಿಗಳಿಗೆ ಮಾತ್ರ ಬಡ್ತಿ ನೀಡಲಾಗಿದೆ. ಕಾರ್ಯಾಚರಣೆಗೆ ಕಳುಹಿಸಿಸಿ ಅಧಿಕಾರಿಗಳನ್ನು ಬಡ್ತಿ ನೀಡುವಾಗ ಮಾತ್ರ ಕಾರ್ಯಚರಣೆಯಲ್ಲಿ ಪಾಲ್ಗೊಳ್ಳದವರೆಂದು ಪರಿಗಣಿಸಲಾಗಿದೆ. ಇದು ಸೈನಿಕರ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಅಧಿಕಾರಿಗಳು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.












Click it and Unblock the Notifications