ಭಾರತದಲ್ಲಿ ರಾಜಕೀಯ ಪಕ್ಷಗಳು ತಿಂದ ಹಣ ಬಡ್ಡಿ ಸಮೇತ ವಸೂಲಿ?
ಸುಪ್ರೀಂ ಕೋರ್ಟ್ ಇಂದು ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ, ಹೀಗೆ 2024 ರ ಲೋಕಸಭೆ ಚುನಾವಣೆಗೆ ಮೊದಲು ಭಾರತದ ರಾಜಕೀಯದಲ್ಲಿ ಬಿರುಗಾಳಿ ಎದ್ದಿದೆ. ಎಲೆಕ್ಟ್ರಾಲ್ ಬಾಂಡ್ ಯೋಜನೆ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದು ಭಾರತದಲ್ಲಿ ರಾಜಕೀಯ ಪಕ್ಷಗಳಿಗೆ ಆಘಾತ ನೀಡಿದೆ. ಹಾಗಾದರೆ ರಾಜಕೀಯ ಪಕ್ಷಗಳು ತಿಂದ ಹಣ ಬಡ್ಡಿ ಸಮೇತ ವಸೂಲಿ ಆಗುತ್ತಾ? ಬಿಜೆಪಿ & ಕಾಂಗ್ರೆಸ್ ಪಕ್ಷಗಳಿಗೆ ಎಷ್ಟು ಕೋಟಿ ಬಂದಿದೆ? ಬನ್ನಿ ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಅನಾಮಧೇಯ ಚುನಾವಣಾ ಬಾಂಡ್ ಯೋಜನೆ ಮಾಹಿತಿ ಹಕ್ಕು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘನೆ ಆಗಿದೆ ಅಂತಾ ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲಕ ಲೋಸಕಭೆ ಚುನಾವಣೆಗೆ ಮೊದಲು, ಸುಪ್ರೀಂ ತೀರ್ಪು ಸಂಚಲನ ಸೃಷ್ಟಿ ಮಾಡಿದೆ. ಯೋಜನೆ ಸಂವಿಧಾನದ ಪರಿಚ್ಛೇದ 19 (1) (ಎ) ಅಡಿ ಬರುವ ವಾಕ್ & ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಆಗಿದೆ. ಇದೆ ಕಾರಣಕ್ಕೆ ಅಸಾಂವಿಧಾನಿಕ ಆಗಿದೆ ಎಂದು, ತೀರ್ಪು ಪ್ರಕಟಿಸುವ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ತಿಳಿಸಿದ್ದಾರೆ. ಹಾಗಾದರೆ ಚುನಾವಣಾ ಬಾಂಡ್ ಯೋಜನೆ ಮೂಲಕ, ಬಿಜೆಪಿ & ಕಾಂಗ್ರೆಸ್ ಪಕ್ಷಗಳ ಖಜಾನೆಗೆ ಬಂದಿದ್ದು ಎಷ್ಟು ಸಾವಿರ ಕೋಟಿ ರೂಪಾಯಿ ಗೊತ್ತೆ?

ಕೇಸರಿ ಪಡೆ 'ಬಿಜೆಪಿ'ಗೆ ಬಂಪರ್!
ಇಲ್ಲಿ ಎಲೆಕ್ಟೊರಲ್ ಬಾಂಡ್‌ಗಳು ಅಂದ್ರೆ ರಾಜಕೀಯ ಪಕ್ಷಗಳಿಗೆ ವ್ಯಕ್ತಿಗಳು ಮತ್ತು ಉದ್ಯಮಗಳು ತಮ್ಮ ಹೆಸರು ಬಹಿರಂಗ ಮಾಡದೆ ದೇಣಿಗೆ ನೀಡಲು ಇರುವ ಆರ್ಥಿಕ ಸಾಧನವೆ ಆಗಿವೆ. ಇದನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರ ಸರ್ಕಾರ ನಗದು ದೇಣಿಗೆಗಳಿಗೆ ಪರ್ಯಾಯವಾಗಿ 2018ರಲ್ಲಿ ಪರಿಚಯ ಮಾಡಿತ್ತು. ಹಾಗೇ ರಾಜಕೀಯ ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ತರಲು ಇದು ಅನುಕೂಲ ಮಾಡುತ್ತದೆ ಅಂತಾ ಸರ್ಕಾರ ಹೇಳಿಕೆ ನೀಡಿತ್ತು.
ಇನ್ನು ಚುನಾವಣಾ ಆಯೋಗದ ಮಾಹಿತಿ ಪ್ರಕಾರ 2016-2022 ರ ನಡುವೆ 16,437 ಕೋಟಿ ರೂ ಮೌಲ್ಯದ ಒಟ್ಟಾರೆ 28,030 ಎಲೆಕ್ಟೊರಲ್ ಬಾಂಡ್‌ಗಳು ಮಾರಾಟ ಆಗಿದ್ದವಂತೆ. ಹಾಗಾದರೆ, ಇದರಲ್ಲಿ ಬಿಜೆಪಿಗೆ ಸಿಕ್ಕಿರುವುದು ಎಷ್ಟು ಸಾವಿರ ಕೋಟಿ? ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿದ್ದು ಎಷ್ಟು ಸಾವಿರ ಕೋಟಿ ರೂಪಾಯಿ? ಬಿಜೆಪಿ & ಕಾಂಗ್ರೆಸ್ ಬಿಟ್ಟು ಬೇರೆ ಯಾವ ಪಕ್ಷಕ್ಕೆ ಕೋಟಿ ಕೋಟಿ ಸಿಕ್ಕಿದೆ? ಮುಂದೆ ಓದಿ.
ಇಲ್ಲಿದೆ ನೋಡಿ ಪಕ್ಕಾ ಲೆಕ್ಕ!
ಅಂದಹಾಗೆ ಈ ದೇಣಿಗೆ ಫಲಾನುಭವಿಗಳ ಪೈಕಿ ಮೊದಲ ಸ್ಥಾನದಲ್ಲಿ ಇದ್ದು ಫಸ್ಟ್ ರ‍್ಯಾಂಕ್ ಪಡೆದಿರುವುದು ಬಿಜೆಪಿ. ಹೀಗೆ ಬಿಜೆಪಿ ಪಕ್ಷಕ್ಕೆ 10,122 ಕೋಟಿ ರೂಪಾಯಿ ದೇಣಿಗೆ ಬಂದಿದೆ ಎನ್ನಲಾಗಿದೆ. ಈ ಮೂಲಕ ಒಟ್ಟಾರೆ ದೇಣಿಗೆ ಪೈಕಿ ಹತ್ತಿರ ಹತ್ತಿರ ಶೇಕಡಾ 60ರಷ್ಟು ಪಡೆದಿತ್ತು ಬಿಜೆಪಿ ಪಕ್ಷ. ಮತ್ತೊಂದು ಕಡೆ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ 2ನೇ ಸ್ಥಾನದಲ್ಲಿ ಇದೆ. ಈ ಅವಧಿಯಲ್ಲಿ ಕಾಂಗ್ರೆಸ್ ಒಟ್ಟಾರೆ 1,547 ಕೋಟಿ ರೂಪಾಯಿ ಅಂದ್ರೆ ಸುಮಾರು ಶೇಕಡಾ 10 ರಷ್ಟು ಪಾಲು ಹೊಂದಿದೆ. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷವು 823 ಕೋಟಿ ರೂಪಾಯಿ ಅರ್ಥಾತ್ ಶೇಕಡಾ 8 ರಷ್ಟು ದೇಣಿಗೆ ಪಡೆದಿದೆಯಂತೆ.

ಒಟ್ನಲ್ಲಿ ಈ ಮೂಲಕ 2024ರ ಲೋಕಸಭೆ ಚುನಾವಣೆಗೆ ಮೊದಲು ಸುಪ್ರೀಂ ಕೋರ್ಟ್ ನೀಡಿದ ಆದೇಶ ದೊಡ್ಡ ಆಘಾತ ಕೊಟ್ಟಿದೆ. ಹಾಗೇ ಭಾರತದ ಸಾರ್ವತ್ರಿಕ ಚುನಾವಣೆಗೆ ಇನ್ನೇನು ಕೆಲ ದಿನ ಮಾತ್ರ ಬಾಕಿ ಇರುವಾಗ ಈ ಆದೇಶ ಸಂಚಲನ ಸೃಷ್ಟಿ ಮಾಡಿದೆ. ಇಷ್ಟುದಿನ ಭಾರತದ ರಾಜಕೀಯ ಪಕ್ಷಗಳು ದೇಣಿಗೆ ಮೂಲಕ ಪಡೆಯುತ್ತಿದ್ದ ದೊಡ್ಡ ಮೊತ್ತದ ಹಣಕ್ಕೂ ಇದೀಗ ಬ್ರೇಕ್ ಬಿದ್ದಂತಾಗಿದೆ.












Click it and Unblock the Notifications