Get Updates
Get notified of breaking news, exclusive insights, and must-see stories!

ಸಂಸತ್ ಭವನಕ್ಕೆ ನುಗ್ಗಿದ ಅಪರಿಚಿತರು, ಕೆ.ಎಸ್. ಈಶ್ವರಪ್ಪ ಹೇಳಿದ್ದೇನು

ಸಂಸತ್ ಭವನ ಇಂದು ನಲುಗಿ ಹೋಗಿದ್ದು, ಅಧಿವೇಶನ ನಡೆಯುವ ಸಮಯದಲ್ಲಿ ಒಳ ನುಗ್ಗಿದ ಅಪರಿಚಿತರು ಭಯ ಹುಟ್ಟಿಸಿದ್ದಾರೆ. ಈ ಸುದ್ದಿ ಭಾರತದ ಮೂಲೆ ಮೂಲೆಯಲ್ಲು ಸಂಚಲನ ಸೃಷ್ಟಿಸಿರುವ ಸಮಯದಲ್ಲೇ, ಈ ಆತಂಕಕಾರಿ ಘಟನೆಯ ಬಗ್ಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದೇನು ಗೊತ್ತಾ? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಹೌದು, ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ ಅವರು ಹಿಂದಿನಿಂದ ಭಾರತದ ಮೇಲೆ ಭಯೋತ್ಪಾದಕರ ಹಾಗೂ ದೇಶದ್ರೋಹಿಗಳು ಕಣ್ಣಿಟ್ಟಿದ್ದಾರೆ. ಇಂತಹ ದುಷ್ಟ ಶಕ್ತಿ ಮೆಟ್ಟಿನಿಂತು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ದುಷ್ಟ ಶಕ್ತಿಗಳು ಭಯ ಹುಟ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದಿದ್ದಾರೆ. ಈ ಮೂಲಕ ಸಂಸತ್ ಮೇಲೆ ನಡೆದಿರುವ ದಾಳಿಯನ್ನ ಕೆ.ಎಸ್. ಈಶ್ವರಪ್ಪ ಖಂಡಿಸಿದ್ರು.

Discover What Former DCM KS Eshwarappa Said About Unknown Entered To Parliament

ಬಿಜೆಪಿಗೆ ಬೆಂಬಲ ಸಿಗುತ್ತಿದೆ ಅಂತಾ...

ಲೋಕಸಭೆ ಅಧಿವೇಶನ ನಡೆಯುವಾಗಲೇ ಅಪರಿಚಿತ ವ್ಯಕ್ತಿಗಳು ನುಗ್ಗಿದ ಕಾರಣಕ್ಕೆ, ಅವರಿಂದು ಪ್ರತಿಕ್ರಿಯೆ ನೀಡಿದ್ದಾರೆ. ದೇಶದ್ರೋಹಿ ಚಟುವಟಿಕೆ ಮತ್ತು ಭಯ ಹುಟ್ಟಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಬೆಂಗಳೂರಲ್ಲಿ ಬಾಂಬ್ ಬೆದರಿಕೆ ಹಾಕಲಾಗಿದ್ದು, ರಾಜ ಭವನದಲ್ಲಿ ಕೂಡ ಭಯ ಹುಟ್ಟು ಹಾಕಿದ್ದಾರೆ. ಈಗ ಸದನದಲ್ಲಿ ಕೂಡ ಇಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಭಾರತೀಯ ಜನತಾ ಪಾರ್ಟಿಗೆ ಹೆಚ್ಚಿನ ಬೆಂಬಲ ಸಿಗುತ್ತಿರುವ ಹಿನ್ನೆಲೆ ದುಷ್ಕೃತ್ಯ ನಡೆಯುತ್ತಿವೆ ಎಂದು ಆರೋಪ ಮಾಡಿದ್ದಾರೆ ಕೆ.ಎಸ್. ಈಶ್ವರಪ್ಪ.

ಪಾಸ್ ಬಗ್ಗೆ ಏನ್ ಹೇಳಿದ್ರು?

ಮೈಸೂರು ಎಂಪಿ ಪಾಸ್ ತೆಗೆದುಕೊಂಡು ಅಪರಿಚಿತರು ಒಳನುಗ್ಗಿದ ಕುರಿತು ಪ್ರತಿಕ್ರಿಯೆ ನೀಡಿದ ಕೆ.ಎಸ್. ಈಶ್ವರಪ್ಪ ಅವರು, ಪರಿಚಿತರು ಎಂದು ಪಾಸ್ ಕೊಟ್ಟಿರಬಹುದು. ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸುತ್ತೇನೆ ಎಂದಿದ್ದಾರೆ. ಅಲ್ಲದೆ ಇದೇ ವೇಳೆ ಬಿಜೆಪಿಯಲ್ಲಿನ ಭಿನ್ನಮತದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಬಿಜೆಪಿ ಶಕ್ತಿ ಶಾಲಿ.

Discover What Former DCM KS Eshwarappa Said About Unknown Entered To Parliament

ಮೂರು ನಾಲ್ಕು ಜನರಲ್ಲಿ ಅಸಮಾಧಾನವು ಇದೆ. ಅಸಮಾಧಾನ ಇದ್ದವರೂ ಕೂಡ ಪಕ್ಷ ನಿಷ್ಟರೇ ಆಗಿದ್ದಾರೆ. ವೈಯಕ್ತಿಕ ಅಸಮಾಧಾನದಿಂದ ಗೊಂದಲವು ಉಂಟಾಗಿದೆ ಇದನ್ನ ಪಕ್ಷದ ವರಿಷ್ಠರು ಸರಿಪಡಿಸುವ ಕಾರ್ಯ ಮಾಡುತ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಒಟ್ನಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸಂಸತ್ ಭವನಕ್ಕೆ ಅಪರಿಚಿತರು ನುಗ್ಗಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ಬೇಕು ಅಂತಲೇ ಕೆಲವರು ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ. ಇದರ ಜೊತೆಗೆ ಬಿಜೆಪಿ ಭಿನ್ನಮತದ ಬಗ್ಗೆ ಕೂಡ ರಿಯಾಕ್ಷನ್ ಕೊಟ್ಟಿರುವುದು ವಿಶೇಷ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+