Lok sabha 2023 Opinion poll: ಅತಂತ್ರ ಜನಾದೇಶ, ಪಿಎಂ ಮೋದಿ ಭವಿಷ್ಯ ತೂಗೊಯ್ಯಾಲೆಯಲ್ಲಿ?
ಲೋಕಸಭೆ ಚುನಾವಣೆಗೆ ಈಗ ದಿನಗಣನೆ ಆರಂಭವಾಗಿದೆ. ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಈ ಕಾರಣಕ್ಕೆ ಅತ್ತ ಆಡಳಿತ ನಡೆಸುತ್ತಿರುವ ಬಿಜೆಪಿ ರಣತಂತ್ರ ರೂಪಿಸಿದರೆ, ವಿಪಕ್ಷ ನಾಯಕರು ಬಿಜೆಪಿಗೆ ಸೋಲಿನ ರುಚಿ ತೋರಿಸಲು ಸಿದ್ಧತೆ ನಡೆಸಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಸಮೀಕ್ಷೆ ವರದಿ ಹೊರಬಿದ್ದಿದ್ದು, ಅತಂತ್ರ ಲೋಕಸಭೆ ಮುನ್ಸೂಚನೆ ಸಿಕ್ಕಿದೆ.
ದೇಶದಲ್ಲಿ ಹಲವು ದಶಕಗಳ ಕಾಲ ಅತಂತ್ರ ಲೋಕಸಭೆ ಆತಂಕ ಕಾಡಿತ್ತು. ಆದರೆ ಕಳೆದ 2 ಚುನಾವಣೆ ಸಂದರ್ಭದಲ್ಲಿ ಪೂರ್ಣ ಬಹುಮತ ಪಡೆದು ಬಿಜೆಪಿ ಅಧಿಕಾರ ನಡೆಸುತ್ತಿದೆ. ಆದರೆ ಈ ಬಾರಿ ಮತ್ತೆ ಅತಂತ್ರ ಲೋಕಭೆಯ ಆತಂಕ ಶುರುವಾಗಿದೆ. ಅಕಸ್ಮಾತ್ ಈಗಲೇ ಚುನಾವಣೆ ನಡೆದರೆ, ಲೋಕಸಭೆಯಲ್ಲಿ ಅತಂತ್ರ ಫಲಿತಾಂಶ ಬರುವುದು ಪಕ್ಕಾ ಅಂತಾ ಸ್ಮಾಲ್ ಬಾಕ್ಸ್ ಇಂಡಿಯಾದ, ಫಸ್ಟ್ ಲೋಕಸಭಾ ಸಮೀಕ್ಷೆ ವರದಿ ಭವಿಷ್ಯ ನುಡಿದಿದೆ. ಈ ಮೂಲಕ ಮತ್ತೊಮ್ಮೆ ದೇಶದಲ್ಲಿ ಅತಂತ್ರ ಲೋಕಸಭೆ ಮುನ್ಸೂಚನೆ ಸಿಕ್ಕಿದೆ. ಹಾಗಾದರೆ ಬಿಜೆಪಿ ಎಷ್ಟು ಸ್ಥಾನ ಗೆಲ್ಲಬಹುದು? ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲಬಹುದು? ಎನ್‌ಡಿಎ & ಇಂಡಿಯಾ ಒಕ್ಕೂಟಗಳ ಭವಿಷ್ಯ ಏನು? ಮುಂದೆ ಓದಿ.

ಭಾರತದಲ್ಲಿ ಅತಂತ್ರ ಲೋಕಸಭೆ ಫಲಿತಾಂಶ?
ಅಕಸ್ಮಾತ್ ಭಾರತದಲ್ಲಿ ಈಗಲೇ ಲೋಕಸಭೆ ಚುನಾವಣೆ ನಡೆದರೆ ಆಡಳಿತ ನಡೆಸುತ್ತಿರುವ ಎನ್‌ಡಿಎಗೆ ಹಿನ್ನಡೆ ಎದುರಾಗುತ್ತೆ. ಫಲಿತಾಂಶದ ಬಗ್ಗೆ ಸ್ಮಾಲ್ ಬಾಕ್ಸ್ ಇಂಡಿಯಾದ ಫಸ್ಟ್ ಲೋಕಸಭಾ ಸಮೀಕ್ಷೆ ವರದಿ ಭವಿಷ್ಯ ನುಡಿದಿದೆ. ಇಂಡಿಯಾ ಒಕ್ಕೂಟ- 243 ಸ್ಥಾನದಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ ನೇತೃತ್ವದ ಎನ್‌ಡಿಎ- 255 ಸ್ಥಾನ ಗೆಲ್ಲಬಹುದು ಎನ್ನುತ್ತಿದೆ ಈ ಸಮೀಕ್ಷೆ. ಇತರರು 45 ಸ್ಥಾನ ಗೆಲ್ಲಬಹುದು ಎನ್ನಲಾಗಿದ್ದು, ಮುಂಬರುವ ದಿನದಲ್ಲಿ ಮತ್ತೆ ಅತಂತ್ರ ಪರಿಸ್ಥಿತಿಯ ಆತಂಕ ಎದುರಾಗಿದೆ. ಹೀಗಾಗಿ ಬರೋಬ್ಬರಿ ಹತ್ತು ವರ್ಷಗಳ ಬಳಿಕ ಲೋಕಸಭಾ ಫಲಿತಾಂಶದಲ್ಲಿ ಭಾರಿ ಏರಿಳಿತ ಎದುರಾಗುವ ಸಾಧ್ಯತೆ ಇದೆ.
ಯಾವ ರಾಜ್ಯದಲ್ಲಿ ಯಾರಿಗೆ ಗೆಲುವು?
ಸ್ಮಾಲ್ ಬಾಕ್ಸ್ ಇಂಡಿಯಾದ, ಫಸ್ಟ್ ಲೋಕಸಭಾ ಸಮೀಕ್ಷೆ ವರದಿ ಪ್ರಕಾರ ಮಹಾರಾಷ್ಟ್ರ ಮತದಾರರ ಒಲವು ಇಂಡಿಯಾ ಒಕ್ಕೂಟದ ಪರವಿದೆ. ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳ ಪೈಕಿ ಇಂಡಿಯಾ ಒಕ್ಕೂಟ 36 ಸ್ಥಾನ ಗೆಲ್ಲಬಹುದು ಎನ್ನಲಾಗಿದೆ. ಎನ್‌ಡಿಎಗೆ 12 ಸ್ಥಾನ ಸಿಗುವ ನಿರೀಕ್ಷೆ ಇದೆ. ಇನ್ನುಳಿದಂತೆ ಒಟ್ಟು 21 ಸ್ಥಾನ ಇರುವ ಒಡಿಶಾ ರಾಜ್ಯ ಬಿಜೆಡಿಗೆ ಜೈ ಎನ್ನಲಿದ್ದಾರಂತೆ ಜನ. 21 ಸ್ಥಾನದಲ್ಲಿ ಒಡಿಶಾ ಮತದಾರರು ಬಿಜೆಡಿಗೆ ಜೈ ಅಂತಿದ್ದಾರೆ. ಎನ್‌ಡಿಎ 09 ಸ್ಥಾನ ಗೆದ್ದರೆ, ಇಂಡಿಯಾ ಒಕ್ಕೂಟ 02 ಸ್ಥಾನ ಗೆಲ್ಲಬಹುದು ಹಾಗೇ ಬಿಜೆಡಿ 10 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಯಾರು ಕಿಂಗ್?
ತೀವ್ರ ಕುತೂಹಲ ಕೆರಳಿಸಿರುವ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ ಕೂಡ ಒಂದಾಗಿದ್ದು, ಈ ರಾಜ್ಯದಲ್ಲಿ ಮತದಾರ ಪ್ರಭು ಇಂಡಿಯಾ ಒಕ್ಕೂಟಕ್ಕೆ ಜೈ ಎನ್ನಬಹುದು ಎಂದು ಈಗ ಸಮೀಕ್ಷೆ ಹೇಳುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು 42 ಲೋಕಸಭಾ ಸ್ಥಾನಗಳು ಇದ್ದು, ಈ ಪೈಕಿ ಇಂಡಿಯಾ ಒಕ್ಕೂಟ 34 ಸ್ಥಾನ ಗೆಲ್ಲಬಹುದು ಎನ್ನಲಾಗಿದೆ, ಹಾಗೇ ಕಳೆದ ಬಾರಿ ಭರ್ಜರಿ ಬಂಪರ್ ಪಡೆದಿದ್ದ ಎನ್‌ಡಿಎ ಒಕ್ಕೂಟ 2024ರ ಚುನಾವಣೆಯಲ್ಲಿ 08 ಸ್ಥಾನದಲ್ಲಿ ಗೆಲುವು ಪಡೆಯಬಹುದು ಎನ್ನಲಾಗಿದೆ. ಈ ಮೂಲಕ ಇಂಡಿಯಾ ಒಕ್ಕೂಟ ಭಾರಿ ದೊಡ್ಡ ಅಂತರದಲ್ಲಿ ಹೆಚ್ಚಿನ ಸ್ಥಾನ ಪಡೆಯಬಹುದು ಎನ್ನುತ್ತಿದೆ ಸಮೀಕ್ಷೆ.

ಬಿಹಾರದಲ್ಲಿ ಸಿಹಿ ಯಾರ ಪಾಲಿಗೆ?
ಉತ್ತರ ಭಾರತದಲ್ಲಿ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಬಿಹಾರ ಕೂಡ ಒಂದು. ಬಿಹಾರದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರ ಇವೆ. ಆದ್ರೆ ಇಲ್ಲೂ ಇಂಡಿಯಾ ಒಕ್ಕೂಟ ಗೆಲುವು ಸಾಧಿಸುವ ಸಾಧ್ಯತೆ ಇದೆ. ಇಂಡಿಯಾಗೆ ಇಲ್ಲಿ 27 ಸ್ಥಾನಗಳು ಸಿಗುವ ನಿರೀಕ್ಷೆ ಇದೆ. ಹಾಗೇ ಎನ್‌ಡಿಎ ಒಕ್ಕೂಟಕ್ಕೆ 13 ಸ್ಥಾನ ಸಿಗಬಹುದು ಎನ್ನಲಾಗಿದೆ. ಇನ್ನುಳಿದಂತೆ ಗುಜರಾತ್‌ನಲ್ಲಿ ಎನ್‌ಡಿಎ ಮತ್ತೆ ಕಿಂಗ್ ಆಗಲಿದ್ದು, ಒಟ್ಟು 26 ಕ್ಷೇತ್ರಗಳಲ್ಲಿ 26 ಕ್ಷೇತ್ರದಲ್ಲೂ ಎನ್‌ಡಿಎ ಗೆಲ್ಲಬಹುದು ಎನ್ನಲಾಗಿದೆ. ಹಾಗೇ ಉತ್ತರ ಪ್ರದೇಶದಲ್ಲಿ NDAಗೆ ಮತ್ತೆ ಸಿಹಿ ಸಿಗುವ ಮುನ್ಸೂಚನೆ ಸಿಕ್ಕಿದ್ದು, ಒಟ್ಟು 80 ಸ್ಥಾನಗಳ ಪೈಕಿ ಇಂಡಿಯಾ 12 ಸ್ಥಾನ ಗೆದ್ದರೆ ಎನ್‌ಡಿಎ ಬರೋಬ್ಬರಿ 68 ಸ್ಥಾನ ಗೆಲ್ಲಬಹುದು ಎಂದಿದೆ ಸಮೀಕ್ಷೆ.












Click it and Unblock the Notifications