ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಸುದ್ದಿ ಬಂದಾಗ ದಿಗ್ವಿಜಯ್ ಸಿಂಗ್ ಬಾಯಿ ಬಿಡೋದು ಯಾಕೆ?

By ವಿಕಾಸ್ ನಂಜಪ್ಪ
|
Google Oneindia Kannada News

ಉಗ್ರಗಾಮಿಗಳು ಮತ್ತು ಪಾಕಿಸ್ತಾನದ ಸುದ್ದಿ ಬಂದಾಗ ಪ್ರತಿ ಬಾರಿಯೂ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಬಾಯಿ ಬಿಡುವುದು ಏಕೆ? ಎಂಬುದು ದೊಡ್ಡ ಪ್ರಶ್ನೆ.

ಕರ್ನಾಟಕದಲ್ಲಿ ದೇಶವಿರೋಧಿ ಘೋಷಣೆ ಕೂಗಲಾಗಿದೆ ಎಂಬ ಆರೋಪಕ್ಕೆ ಉತ್ತರವೆಂಬಂತೆ ದಿಗ್ವಿಜಯ್ ಸಿಂಗ್ ಸರಣಿ ಟ್ವೀಟ್ ಗಳನ್ನು ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಬಲೂಚಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತನಾಡುತ್ತಾರೆ. ಆದರೆ ಜಮ್ಮು ಕಾಶ್ಮೀರದಲ್ಲಿ ತೊಂದರಗೆ ಸಿಕ್ಕಿಹಾಕಿಕೊಂಡಿರುವವರ ಬಗ್ಗೆ ಒಂದೇ ಒಂದು ಸಾಂತ್ವನದ ಪದ ಆಡುತ್ತಿಲ್ಲ ಎಂದು ಸಿಂಗ್ ಟ್ವೀಟ್‌ ಮಾಡಿದ್ದರು.[ದಿಗ್ವಿಜಯ್ ವೆಡ್ಸ್ ಅಮೃತಾ: ಟ್ವಿಟ್ಟರ್ ಕಮೆಂಟ್ಸ್ ಪ್ರವಾಹ]

Digvijay Singh: Tongue that keeps slipping in deference to Pak, terrorists

ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆಯುವಂತೆ ಸಿಂಗ್ ಭಾರತ ಆಕ್ರಮಿತ ಕಾಶ್ಮೀರ ಎಂಬ ಪದ ಬಳಕೆಯನ್ನು ಮಾಡಿದ್ದಾರೆ. ದಿಗ್ವಿಜಯ್ ಸಿಂಗ್ ಈ ಬಗೆಯ ಹೇಳಿಕೆಗಳನ್ನು ವಿವಾದ ಹುಟ್ಟುಹಾಕಬೇಕು ಎಂಬ ಕಾರಣಕ್ಕೆ ನೀಡುತ್ತಿದ್ದಾರೆಯೇ? ಉತ್ತರ ಮಾತ್ರ ಗೊತ್ತಿಲ್ಲ.

ಉಗ್ರಗಾಮಿಗಳ ಬಗ್ಗೆ , ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ, ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯೋತ್ಸವದ ಭಾಷಣದ ಬಗ್ಗೆಯೂ ಸಿಂಗ್ ಬಾಲಿಶ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ.

ಹಿಂದೊಮ್ಮೆ ಭಯೋತ್ಪಾದಕ ಒಸಮಾ ಬಿನ್ ಲಾಡೆನ್ ಗೆ 'ಒಸಾಮಾಜಿ', ಲಷ್ಕರ್ ಇ ತೋಯ್ಬಾದ ಉಗ್ರ ಹಫೀಜ್ ಸಯೀದ್ ಗೆ 'ಹಫೀಜ್ ಸಾಹೇಬ್' ಎಂದು ಸಂಬೋಧಿಸಿ ಸಿಂಗ್ ವಿವಾದವನ್ನು ಹುಟ್ಟುಹಾಕಿದ್ದರು.
ವಿವಾದಿತ ಭಾಷಣಕಾರ ಡಾ, ಝಾಕೀರ್ ನಾಯ್ಕ್ ಹೇಳಿಕೆಗಳನ್ನು ಪುನರುಚ್ಚರಿಸಿದ್ದ ಸಿಂಗ್ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ವಿರೋಧ ಎದಿರಿಸಿದ್ದರು.

English summary
Why does Congress leader Digvijay Singh suffer so many slips of the tongue when it comes to Pakistan and terrorists? Adding to his long list of goof-ups, Singh on Thursday referred to Jammu & Kashmir as "Indian-occupied Kashmir", exactly what Pakistan calls J&K and wants the rest of the world to believe to be true.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X