ಕೇರಳ KSRTC: ಫೋನ್ ಪೇ ಕ್ಯೂಆರ್ ಕೋಡ್ ಬಳಸಿ ಟಿಕೆಟ್ ಖರೀದಿಸುವ ವ್ಯವಸ್ಥೆ
ತಿರುವನಂತಪುರಂ, ಡಿಸೆಂಬರ್, 29: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಪ್ರಯಾಣಿಕರಿಗೆ ಡಿಜಿಟಲ್ ವ್ಯವಸ್ಥೆ ಮೂಲಕ ಟಿಕೆಟ್ ಖರೀದಿಸುವ ಸೌಲಭ್ಯವನ್ನು ಪ್ರಾರಂಭಿಸಿದೆ. ಪ್ರಯಾಣಿಕರು ಫೋನ್ ಪೇ ಕ್ಯೂ ಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯುವ ವ್ಯವಸ್ಥೆಯನ್ನಯ ಕಲ್ಪಿಸಿದೆ. ಈ ಸೌಲಭ್ಯವನ್ನು ಇದೀಗ ಆರಂಭದಲ್ಲಿ ಸೂಪರ್ ಕ್ಲಾಸ್ ಬಸ್‌ಗಳಲ್ಲಿ ಮಾತ್ರ ಅಳವಡಿಸಲಾಗುವುದು ಎನ್ನುವ ಮಾಹಿತಿಯನ್ನು ನೀಡಿದೆ.
ಈ ಬಗ್ಗೆ ಕೇರಳ ಸರ್ಕಾರದ ಸಾರಿಗೆ ಸಚಿವರಾದ ಆಂಟನಿ ರಾಜು ಅವರು ಮಾಹಿತಿಯನ್ನು ನೀಡಿದ್ದಾರೆ. ಅವರು ಡಿಸೆಂಬರ್ 28ರಂದು ಮೊದಲ ಟಿಕೆಟ್ ತೆಗೆದುಕೊಳ್ಳುವ ಮೂಲಕ ಡಿಜಿಟಲ್ ಪಾವತಿ ಸೌಲಭ್ಯವನ್ನು ಉದ್ಘಾಟಿಸಿದರು. ಹಾಗೆಯೇ ಈ ವ್ಯವಸ್ಥೆಯು ಮುಂದಿನ ದಿನಗಳಲ್ಲಿ ಎಲ್ಲಾ ಬಸ್‌ಗಳಲ್ಲಿಯೂ ಜಾರಿಗೆ ತರಲಾಗುವುದು ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ಫೋನ್ ಪೇ ಬಳಸಿ ಟಿಕೆಟ್ ಪಡೆಯಿರಿ
ಪ್ರತಿನಿತ್ಯ ಸಾವಿರಾರು ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತ ಇರುತ್ತವೆ. ಇಂತಹ ಸಮಯದಲ್ಲಿ ಎಲ್ಲರಿಗೂ ಟಿಕೆಟ್ ನೀಡುವುದು, ಚಿಲ್ಲರೆ ನೀಡುವುದು ಕಂಡಕ್ಟರ್‌ಗಳಿಗೆ ತಲೆನೋವಾಗಿರುತ್ತದೆ. ಚಿಲ್ಲರೆ ಇದ್ದರೆ ಮಾತ್ರ ಬಸ್ ಹತ್ತಿ ಎನ್ನುವ ಮಾತುಗಳು ಕೂಡ ಸಾಮಾನ್ಯವಾಗಿ ಕೇಳಿದ್ದೇವೆ. ಆದರೆ, ಮುಂದಿನ ದಿನಗಳಲ್ಲಿ ಆನ್‌ಲೈನ್ ಮೂಲಕ ಟಿಕೆಟ್ ಪಡೆಯುವ ಅವಕಾಶವನ್ನು ಪಡೆಯಬಹುದು ಎಂದು ತಿಳಿಸಲಾಗಿತ್ತು. ಆ್ಯಂಡ್ರಾಯ್ಡ್ ತಂತ್ರಜ್ಞಾನವನ್ನು ಹೊಂದಿರುವ ಹೊಸ ಟಿಕೆಟ್ ಯಂತ್ರವು ಟಚ್ ಸ್ಕ್ರೀನ್ ತಂತ್ರಜ್ಞಾನವನ್ನು ಹೊಂದಿದೆ. ಟಿಕೆಟ್ ಕೊಡುವುದು ಮಾತ್ರವಲ್ಲದೆ ವೈಫೈ ಕನೆಕ್ಟ್, ಯುಪಿಐ ಕ್ಯೂಆರ್ ಕೋಡ್ ಸೌಲಭ್ಯವನ್ನು ಸಹ ಒಳಗೊಂಡಿದೆ. ಪ್ರಯಾಣಿಕರು ಹತ್ತುವ ಹಾಗೂ ಇಳಿಯುವ ನಿಲ್ದಾಣದ ಹೆಸರನ್ನು ಯಂತ್ರದಲ್ಲಿ ನಮೂದಿಸಿದರೆ ದರ ತೋರಿಸಲಿದೆ. ಮುಂದುವರಿದಾಗ ನಗದು ಮತ್ತು ಯುಪಿಐ ಪಾವತಿ ಎಂಬ ಎರಡು ಆಯ್ಕೆಗಳು ಸ್ಕ್ರೀನ್ ಮೇಲೆ ತೋರಿಸುತ್ತದೆ. ಯುಪಿಐ ಆಯ್ಕೆ ಮಾಡಿದರೆ ಸ್ಕ್ರೀನ್ ಮೇಲೆ ಬಾರ್ ಕೋಡ್ ಬರುತ್ತದೆ. ಪ್ರಯಾಣಿಕರು ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು.

ಸೂಪರ್ ಕ್ಲಾಸ್ ಬಸ್‌ಗಳಲ್ಲಿ ಹೊಸ ವ್ಯವಸ್ಥೆ ಜಾರಿ
ಹಣ ಪಾವತಿ ಆಗುತ್ತಿದ್ದಂತೆಯೇ ಆ್ಯಂಡ್ರಾಯ್ಡ್ ತಂತ್ರಜ್ಞಾನ ಆಧಾರಿತ ಯಂತ್ರದಿಂದ ಟಿಕೆಟ್ ಬರಲಿದೆ ಎನ್ನುವ ಮಾಹಿತಿಯನ್ನು ನಮ್ಮ ಬೆಂಗಳೂರಿನ ಬಿಎಂಟಿಸಿಸಿ ಮಾಹಿತಿ ನೀಡಿತ್ತು. ಹಾಗೆಯೇ ಇದೇ ಮಾದರಿಯಲ್ಲಿ ಇದೀಗ ಕೇರಳದಲ್ಲೂ ಕೂಡ ಕೆಎಸ್‌ಆರ್‌ಟಿಸಿ ಸಾರಿಗೆ ಸಂಸ್ಥೆಯವರು ಪ್ರಯಾಣಿಕರಿಗೆ ಫೋನ್ ಪೇ ಮೂಲಕ ಟಿಕೆಟ್ ಖರೀದಿಸುವ ಸೌಲಭ್ಯವನ್ನು ಕಲ್ಪಿಸಿದೆ. ಆರಂಭದಲ್ಲಿ ಈ ವ್ಯವಸ್ಥೆಯನ್ನು ಸೂಪರ್ ಕ್ಲಾಸ್ ಬಸ್‌ಗಳಲ್ಲಿ ಮಾತ್ರ ಅಳವಡಿಸಲಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಎಲ್ಲಾ ಬಸ್‌ಗಳಲ್ಲೂ ಈ ಹೊಸ ಮಾದರಿಯನ್ನು ಅಳವಡಿಸಲಾಗುತ್ತದೆ ಎಂದು ಕೇರಳದ ಕೆಎಸ್‌ಆರ್‌ಟಿಸಿ ಸಂಸ್ಥೆ ಮಾಹಿತಿ ನೀಡಿದೆ.












Click it and Unblock the Notifications