National Highway Vs Expressways: ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳು

National Highway And Expressways: ದೇಶದ ಬಹುತೇಕ ಭಾಗಗಳಲ್ಲಿ ಇದೀಗ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ ವೇ ಕಾಮಗಾರಿ ನಡೆಯುತ್ತಿವೆ. ಈ ಪೈಕಿ ಕೆಲವು ಲೋಕಾರ್ಪಣೆ ಹಂತದಲ್ಲಿದ್ದರೆ, ಇನ್ನೂ ಹಲವು ನಿರ್ಮಾಣ ಹಂತದಲ್ಲಿ ಇವೆ. ಹಾಗಾದ್ರೆ, ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ ವೇಗಳಿಗೆ ಇರುವ ವ್ಯತ್ಯಾಸಗಳು ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬಹುತೇಕ ಮಂದಿ ರಾಷ್ಟ್ರಿಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ ವೇ ಒಂದೇ ಎಂದು ಭಾವಿಸುತ್ತಾರೆ. ಆದರೆ, ಇವೆರಡರ ನಡುವೆ ಅಜಗಜಾಂತರ ವ್ಯತ್ಯಾಸಗಳಿವೆ ಎನ್ನುವುದನ್ನ ಮರೆಯಬಾರದು. ಹಾಗಾದ್ರೆ, ಏನೆಲ್ಲಾ ವ್ಯತ್ಯಾಸಗಳಿ ಇವೆ? ಎಂಬ ಪ್ರಶ್ನೆಗೆ ಉತ್ತರವನ್ನು ಕೆಳಗೆ ನೀಡಲಾಗಿದೆ ಒಮ್ಮೆ ಕಣ್ಣಾಡಿಸಿ.

Difference Between National Highways and Expressways in India

ಕರ್ನಾಟಕ ಸೇರಿ ದೇಶದ ಬಹುತೇ ರಾಜ್ಯಗಳು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ ವೇಗಳನ್ನು ಒಳಗೊಂಡಿವೆ. ಮತ್ತೊಣದೆಡೆ ಕೆಲವು ಉದ್ಘಾಟನೆ ಹಂತದಲ್ಲಿದ್ದರೆ, ಕೆಲವು ಕಾಮಗಾರಿ ಹಾಗೂ ಇನ್ನೂ ಕೆಲವು ಡಿಪಿಆರ್ ಹಂತದಲ್ಲಿವೆ. ಇನ್ನು ರಾಷ್ಟ್ರೀಯ ಹೆದ್ದಾರಿ ಎಕ್ಸ್‌ಪ್ರೆಸ್‌ವೇ ಗಳನ ನಡುವಿನ ವ್ಯತ್ಯಾಸಗಳನ್ನು ಸಂಪೂರ್ಣ ಮಾಹಿತಿ ಸಹಿತ ಇಲ್ಲಿನ ವಿವರಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಗಳು (National Highways)

* ರಾಷ್ಟ್ರಿ ಹೆದ್ದಾರಿಗಳ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಲಿದೆ. ಇವುಗಳು ಹಲವು ಜಿಲ್ಲೆ, ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತವೆ.

* ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗದ ಮಿತಿ ಕಡಿಮೆ ಇರಲಿದ್ದು, ಗಂಟೆಗೆ 80-100 ಕಿಲೋ ಮೀಟರ್‌ ವರೆಗೆ ನಿಗದಿ ಪಡಿಸಲಾಗಿರುತ್ತದೆ.

* ರಾಷ್ಟ್ರೀಯ ಹೆದ್ದಾರಿಗಳು 2-6 ಲೇನ್‌ಗಳನ್ನು ಹೊಂದಿರುತ್ತವೆ.

* ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

* ರಾಷ್ಟ್ರೀಯ ಹೆದ್ದಾರಿಗಳು ಸಾಮಾನ್ಯವಾಗಿ ಬಹು ಪ್ರವೇಶ ಮತ್ತು ನಿರ್ಗಮನ ಬಿಂದುಗಳನ್ನು ಹೊಂದಿರುತ್ತವೆ. ಆದ್ದರಿಂದ ಸ್ಥಳೀಯ ರಸ್ತೆಗಳಿಗೆ ಸುಲಭವಾಗಿ ಪ್ರವೇಶ ಮಾಡಬಹುದು.

* ರಾಷ್ಟ್ರೀಯ ಹೆದ್ದಾರಿಗಳು ಪ್ರಮುಖ ನಗರಗಳು, ಪಟ್ಟಣಗಳು ಮತ್ತು ರಾಜ್ಯಗಳನ್ನು ಸಂಪರ್ಕಿಸುತ್ತವೆ. ಈ ಮೂಲಕ ಅಂತಾರಾಜ್ಯ ಸಾರಿಗೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತವೆ.

* ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಫ್ಲೈಓವರ್‌ಗಳನ್ನು ಹೊಂದಿರುತ್ತವೆ.

ಎಕ್ಸ್‌ಪ್ರೆಸ್‌ ವೇಗಳು (Expressways)

* ಎಕ್ಸ್‌ಪ್ರೆಸ್‌ಗಳ ಮಾಲೀಕತ್ವವನ್ನು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು ಸಹ ಹೊಂದಬಹುದು.

* ವೇಗದ ಮಿತಿಯನ್ನು ಗಂಟೆಗೆ 100-120ರ ವರಗೆ ನಿಗದಿಪಡಿಸಲಾಗುತ್ತದೆ.

* ಎಕ್ಸ್‌ಪ್ರೆಸ್‌ ವೇಗಳನ್ನು 6-10 ಅಥವಾ ಅದಕ್ಕಿಂತ ಹೆಚ್ಚು ಲೇನ್‌ಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ.

* ಇಲ್ಲಿ ನಿಧಾನಗತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತದೆ. ಉದಾಹರಣೆಗೆ ದ್ವಿಚಕ್ರ ವಾಹನಗಳು, ಆಟೋ, ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ ನಿಷೇಧ ಇರುತ್ತದೆ. ದೊಡ್ಡ ವಾಹನಗಳು ಅಂದ್ರೆ, ಕಾರು, ಲಾರಿ ಸೇರಿದಂತೆ ದೊಡ್ಡ ವಾಹನಗಳಿಗೆ ಮಾತ್ರ ಅವಕಶ ಇರುತ್ತದೆ.

* ಇವು ಎಲ್ಲೆಂದರಲ್ಲಿ ಪ್ರವೇಶ ದ್ವಾರಗಳನ್ನು ಹೊಂದಿರುವುದಿಲ್ಲ. ಒಂದು ವೇಳೆ ನಿಮಗೆ ಅವಶ್ಯ ಇರುವ ಜಿಲ್ಲೆಗಳಿಗೆ ಎಂಟ್ರಿ ಕೊಡಬೇಕಂದ್ರೆ, ಇಂಟರ್‌ಚೆಂಜ್‌ ಇರುವ ಕಡೆಗಳಲ್ಲಿಯೇ ಪ್ರವೇಶ ಮಾಡಬೇಕಾಗುತ್ತದೆ.

* ಎಕ್ಸ್‌ಪ್ರೆಸ್‌ವೇಗಳನ್ನು ತಡೆರಹಿತ ವಾಹನ ಸಂಚಾರದ ಉದ್ದೇಶಕ್ಕಾಗಿ ನಿರ್ಮಾಣ ಮಾಡಲಾಗಿರುತ್ತದೆ.

* ಎಕ್ಸ್‌ಪ್ರೆಸ್‌ವೇಗಳು ಅಗತ್ಯ ಇರುವ ಕಡೆಗಳಲ್ಲಿ ಸರ್ವೀಸ್‌ ರಸ್ತೆಗಳನ್ನು ಹೊಂದಿರುತ್ತವೆ.

* ವೇಗ ನಿಯಂತ್ರಣಕ್ಕಾಗಿ ಅತ್ಯಾಧುನಿಕ ಎಐ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗುತ್ತದೆ. ಅಪಘಾತಗಳ ನಿಯಂತ್ರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+