ಜಗತ್ತಿನ ಇಂದಿನ ಸಮಸ್ಯೆಗಳಿಗೆ ಬುದ್ಧನ ತತ್ವವೇ ಪರಿಹಾರ: ಮೋದಿ
ನವದೆಹಲಿ, ಜುಲೈ 4: ಜಗತ್ತಿನ ಇಂದಿನ ಸಮಸ್ಯೆಗಳಿಗೆ ಬುದ್ಧನ ತತ್ವವೇ ಪರಿಹಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Recommended Video
ಪ್ರಧಾನಿ ನರೇಂದ್ರ ಮೋದಿ ಅವರು ಇಂಟರ್ನ್ಯಾಷನಲ್ ಬುದ್ಧಿಸ್ಟ್ ಕಾನ್ಫರೆನ್ಸ್ ಆಯೋಜಿಸಿರುವ ಧರ್ಮಚಕ್ರ ದಿವಸ್ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸಿದರು. ಬುದ್ಧನ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯುವ ಜನತೆಯಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದರು.
ಆಷಾಢ ಪೂರ್ಣಿಮೆ ದಿನದ ನಿಮಿತ್ತ ಆಯೋಜಿಸಿರುವ ವರ್ಚುವಲ್ ಕಾರ್ಯಕ್ರಮವಾಗಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೂ ಕೂಡ ಪಾಲ್ಗೊಂಡಿದ್ದರು.

ಮೋದಿ ಮಾತು: ಎಲ್ಲರಿಗೂ ಆಷಾಢ ಪೂರ್ಣಿಮೆಯ ದಿನದ ಶುಭಾಶಯಗಳು ಎಂದು ಹೇಳುತ್ತಾ ಮಾತು ಆರಂಭಿಸಿದರು.
ಈ ದಿನವನ್ನು ಗುರುಪೂರ್ಣಿಮೆ ಎಂದೂ ಹೇಳುತ್ತಾರೆ. ಈ ದಿನ ನಮಗೆ ತಿಳಿವಳಿಕೆಯನ್ನು ನೀಡುವ ಗುರುಗಳನ್ನು ಸ್ಮರಿಸುವ ದಿವಸ. ಈ ದೃಷ್ಟಿಯಿಂದಲೇ ನಾವು ಇವತ್ತು ಭಗವಾನ್ ಬುದ್ಧನಿಗೂ ಗೌರವ ನಮನ ಸಲ್ಲಿಸುತ್ತಿದ್ದೇವೆ.
ಭಗವಾನ್ ಬುದ್ಧನ ತತ್ತ್ವಾದರ್ಶಗಳು ಅನೇಕ ಸಮುದಾಯಗಳ ಮತ್ತು ರಾಷ್ಟ್ರಗಳ ಏಳಿಗೆಗೆ ದಾರಿ ತೋರಿಸಿವೆ. ಕರುಣೆ ಮತ್ತು ಸಹಾನುಭೂತಿಯ ಮಹತ್ವವನ್ನು ಇವುಗಳು ಸಾರುತ್ತವೆ. ಭಗವಾನ್ ಬುದ್ಧನ ಸರಳತೆ ಚಿಂತನೆಯಲ್ಲೂ ಮತ್ತು ಕ್ರಿಯೆಯಲ್ಲೂ ಅನುಷ್ಠಾನಗೊಂಡಿವೆ ಎಂದು ಹೇಳಿದರು.
ಇಂದು ಜಗತ್ತು ಕಂಡು ಕೇಳಿ ಅರಿಯದ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳಿಗೆ ಪರಿಹಾರವು ಭಗವಾನ್ ಬುದ್ಧ ಅವರ ತತ್ತ್ವಾದರ್ಶಗಳಿಂದಲೇ ಸಿಗಬಹುದು. ಹಿಂದಿನ ಕಾಲದಲ್ಲಿ ಅವುಗಳು ಸಕಾಲಿಕವಾಗಿದ್ದವು. ಈಗಲೂ ಸಕಾಲಿಕವೇ ಆಗಿವೆ. ಭವಿಷ್ಯದಲ್ಲೂ ಈ ಚಿಂತನೆಗಳು ಸಕಾಲಿಕವಾಗಿಯೇ ಉಳಿಯಲಿವೆ.
ಸಾರಾನಾಥದ ರೂಪಪಟನಾದ ಜಿಂಕೆ ಉದ್ಯಾನದಲ್ಲಿ ತನ್ನ ಐವರು ಶಿಷ್ಯಂದಿರಿಗೆ ಭಗವಾನ್ ಬುದ್ಧ ಮೊದಲ ಬಾರಿ ಧರ್ಮೋಪದೇಶ ಮಾಡಿದ ದಿನ ಆಷಾಢ ಹುಣ್ಣಿಮೆ. ಈ ದಿನವನ್ನು ಸ್ಮರಿಸುವ ಸಲುವಾಗಿ ಧರ್ಮ ಚಕ್ರ ದಿವಸ್ ಆಚರಣೆ ಮಾಡಲಾಗುತ್ತಿದೆ. ಈ ದಿನವನ್ನು ಬೌದ್ಧರು ಮತ್ತು ಹಿಂದುಗಳು ಗುರುಪೂರ್ಣಿಮೆ ಎಂದು ಜಗತ್ತಿನಾದ್ಯಂತ ಆಚರಿಸುತ್ತಾರೆ.
-
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ












Click it and Unblock the Notifications