• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಣಿಜ್ಯ ವಿಮಾನ ಸಂಚಾರ ನಿರ್ಬಂಧ ಅ. 31ರವರೆಗೂ ವಿಸ್ತರಣೆ

|

ನವದೆಹಲಿ, ಸೆಪ್ಟೆಂಬರ್ 30: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣದ ಕಾರಣದಿಂದ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯವು (ಡಿಜಿಸಿಎ) ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನ ಸೇವೆಗಳ ಸಂಚಾರದ ಮೇಲಿನ ನಿರ್ಬಂಧವನ್ನು ಅಕ್ಟೋಬರ್ 31ರವರೆಗೂ ವಿಸ್ತರಿಸಿದೆ.

ಗೃಹ ಸಚಿವಾಲಯವು ಬುಧವಾರ ಅನ್‌ಲಾಕ್ 5ರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಡಿಜಿಸಿಎ ಈ ಪ್ರಕಟಣೆ ಹೊರಡಿಸಿದೆ. ಅನ್‌ಲಾಕ್ ಪ್ರಕ್ರಿಯೆಯ ಈಗಿನ ಹಂತದಲ್ಲಿ ಪ್ರಯಾಣಿಕರ ವೈಮಾನಿಕ ಪ್ರಯಾಣಕ್ಕೆ ಅನುಮತಿ ನೀಡಲು ಸಾಧ್ಯವಾಗುವುದಿಲ್ಲ. ಗೃಹ ಸಚಿವಾಲಯದಿಂದ ಅನುಮತಿ ಪಡೆದವರು ಮಾತ್ರವೇ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ಆದರೆ ಸರಕು ಸಾಗಣೆ ವಿಮಾನಗಳ ಓಡಾಟಕ್ಕೆ ಯಾವುದೇ ನಿರ್ಬಂಧವಿಲ್ಲ.

ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಟರ್ಮಿನಲ್-2 ಪುನಾರಂಭಇಂದಿರಾ ಗಾಂಧಿ ವಿಮಾನ ನಿಲ್ದಾಣದ ಟರ್ಮಿನಲ್-2 ಪುನಾರಂಭ

ಆದರೆ ಈಗಾಗಲೇ ವಿವಿಧ ದೇಶಗಳ ನಡುವೆ ವಿಮಾನ ಸಂಚಾರ ನಡೆಸುವ ಏರ್ ಬಬಲ್ ಒಪ್ಪಂದಗಳನ್ನು ಭಾರತ ಮಾಡಿಕೊಂಡಿದ್ದು, ಅದು ಮುಂದುವರಿಯಲಿದೆ. ಇದಕ್ಕೂ ಮುನ್ನ ಬುಧವಾರ ನಾಗರಿಕ ವಿಮಾನಯಾನ ಸಚಿವಾಲಯವು ಭಾರತೀಯರು ಪ್ರಯಾಣಿಸಬಹುದಾದ ದೇಶಗಳ ಪಟ್ಟಿಗೆ ಭೂತಾನ್ ಮತ್ತು ಕೀನ್ಯಾಗಳನ್ನು ಸೇರ್ಪಡೆ ಮಾಡಿದೆ. ಭಾರತ-ಭೂತಾನ್ ಮತ್ತು ಭಾರತ-ಕೀನ್ಯಾ ನಡುವಿನ ಏರ್ ಬಬಲ್ ಕಾರ್ಯಾಚರಣೆ ಆರಂಭಿಸಿದ್ದು, ಈ ಮೂರೂ ದೇಶಗಳ ಎಲ್ಲ ರಾಷ್ಟ್ರೀಯ ವಿಮಾನಗಳು ವಾಣಿಜ್ಯ ಪ್ರಯಾಣ ಸೇವೆಯನ್ನು ಆರಂಭಿಸಲಿವೆ.

ಭಾರತಕ್ಕೆ ತೆರಳುವ ವಿಮಾನಗಳಿಗೆ ಸೌದಿ ಅರೇಬಿಯಾ ಅನುಮತಿಭಾರತಕ್ಕೆ ತೆರಳುವ ವಿಮಾನಗಳಿಗೆ ಸೌದಿ ಅರೇಬಿಯಾ ಅನುಮತಿ

ಭಾರತವು ಇದೇ ರೀತಿ ಏರ್ ಬಬಲ್ ಹೊಂದಾಣಿಕೆಯನ್ನು ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಅಫ್ಘಾನಿಸ್ತಾನ, ಬಹರೇನ್, ಭೂತಾನ್, ಕೀನ್ಯಾ, ಕೆನಡಾ, ಇರಾಕ್, ಜಪಾನ್, ಮಾಲ್ಡೀವ್ಸ್, ನೈಜೀರಿಯಾ, ಕತಾರ್ ಮತ್ತು ಯುಎಇ ನಡುವೆ ಮಾಡಿಕೊಂಡಿದೆ.

English summary
DGCA has extended the suspension on international commercial passenger flights till Oct 31. ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನಗಳ ಓಡಾಟವನ್ನು ಡಿಜಿಸಿಎ ಅ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X