Good News: ವಿಮಾನ ಪ್ರಯಾಣಿಕರಿಗೆ ನೆಮ್ಮದಿಯ ಸುದ್ದಿ

Good News: ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿ ನಂತರ ಪ್ಲಾನ್‌ ಚೇಂಜ್‌ ಮಾಡಲು ಬಯಸುವವರಿಗೆ ಹೆಚ್ಚಿನ ಮೊತ್ತದ ದಂಡ ವಿಧಿಸಲಾಗುತ್ತಿತ್ತು. ಆದರೆ, ಇದೀಗ ಇಂತಹವರಿಗಾಗಿಯೇ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಶುಭಸುದ್ದಿಯೊಂದನ್ನು ನೀಡಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಭಾರತ ಸರ್ಕಾರದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ವಿಮಾನ ಪ್ರಯಾಣಿಕರಿಗೆ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಮಾಹಿತಿ ಪ್ರಕಾರ, ಡಿಜಿಸಿಎ ಟಿಕೆಟ್ ಮರುಪಾವತಿ ಮಾನದಂಡಗಳಲ್ಲಿ ಸರಣಿ ಸುಧಾರಣೆಗಳನ್ನು ಯೋಜಿಸುತ್ತಿದೆ. ಅವುಗಳಲ್ಲಿ ಒಂದು ಉಚಿತ ರದ್ದತಿ ಅಥವಾ ಟಿಕೆಟ್ ಮರುಹೊಂದಾಣಿಕೆಯನ್ನು ಒಳಗೊಂಡಿದೆ. ಆದರೆ ಬುಕಿಂಗ್ ಮಾಡಿದ 48 ಗಂಟೆಗಳ ಒಳಗೆ ಮಾಡಿದರೆ ಮಾತ್ತ ಈ ಪ್ರಯೋಜನಾ ಪಡೆಯಬಹುದು.

DGCA Announces Free Flight Ticket Cancellation or Rescheduling Within 48 Hours of Booking

ವಿಮಾನ ಟಿಕೆಟ್ ಕಾಯ್ದಿರಿಸಿದ ನಂತರ ತಮ್ಮ ಪ್ರಯಾಣದ ಯೋಜನೆಗಳನ್ನು ಬದಲಾಯಿಸಲು ಬಯಸಿದರೆ ಹೆಚ್ಚಿನ ಮೊತ್ತವನ್ನು ವಿಧಿಸಲಾಗುವ ಪ್ರಯಾಣಿಕರಿಗೆ ಇದು ತುಂಬಾ ಸಹಾಯಕ ಆಗಲಿದೆ. ಹೆಚ್ಚಿನ ಫ್ಲೈಟ್-ಬುಕಿಂಗ್ ಸೈಟ್‌ಗಳು ವಿಮಾನ ಪ್ರಯಾಣವನ್ನು ಉಚಿತವಾಗಿ ರದ್ದುಗೊಳಿಸುವ ಅಥವಾ ನಿಗದಿಪಡಿಸುವ ಆಯ್ಕೆಯನ್ನು ನೀಡುತ್ತವೆ.

ಆದರೆ, ಇದು ಪ್ರೀಮಿಯಂನಲ್ಲಿ ಬರುತ್ತದೆ ಮತ್ತು ಮರುಹೊಂದಾಣಿಕೆ ಅಥವಾ ರದ್ದುಗೊಳಿಸುವ ಆಯ್ಕೆಯನ್ನು ಒಮ್ಮೆ ಮಾತ್ರ ಬಳಸಬಹುದು. ಡಿಜಿಸಿಎ ಪ್ರಕಾರ, ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ 'ಲುಕ್-ಇನ್' ಆಯ್ಕೆಯನ್ನು ಒದಗಿಸಬೇಕು. ಇದು ಬುಕಿಂಗ್ ಸಮಯದಿಂದ 48 ಗಂಟೆಗಳ ಕಾಲ ಮಾನ್ಯ ಆಗಿರುತ್ತದೆ. ಆ ಸಮಯದೊಳಗೆ ಟಿಕೆಟ್ ರದ್ದುಗೊಂಡರೆ ವಿಮಾನಯಾನ ಸಂಸ್ಥೆಯು ಪೂರ್ಣ ಮರುಪಾವತಿಯನ್ನು ನೀಡಬೇಕಾಗುತ್ತದೆ.

"ಈ ಅವಧಿಯಲ್ಲಿ ಪ್ರಯಾಣಿಕರು ತಮ್ಮ ಟಿಕೆಟ್ ರದ್ದುಪಡಿಸುವ ಅಥವಾ ಬದಲಾವಣೆ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಇದಕ್ಕೆ ಶುಲ್ಕ ಇರುವುದಿಲ್ಲ. ಆದರೆ, ಇದು ಪರಿಷ್ಕೃತ ವಿಮಾನದಲ್ಲಿನ ಸಾಮಾನ್ಯ ಟಿಕೆಟ್ ದರಕ್ಕೆ ಹೊಂದಿಕೆ ಆಗಬೇಕಾಗುತ್ತದೆ," ಎಂದು ಡಿಜಿಸಿಎ ಹೇಳಿದೆ ಎಂದು ವರದಿಯಾಗಿದೆ. ಈ ನಿರ್ಧಾರ ಪ್ರಯಾಣಿಕರಿಗೆ ತುಂಬಾ ಅನುಕೂಲ ಆದಂತಾಗಿದೆ. ಅದರಲ್ಲೀ ಪ್ರಯಾಣದ ಯೋಜನೆಯನ್ನು ಬದಲಾಯಿಸುವವರಿಗೆ ಇದರಿಂದ ಹೆಚ್ಚು ಅನುಕೂಲ ಆಗಲಿದೆ.

ಸವಾಲುಗಳು: ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಪ್ರಸ್ತಾಪನೆ ಮಾಡಲಾಗಿದ್ದ ಕನಕಪುರ ರಸ್ತೆಯ ಹಾರೋಹಳ್ಳಿ ಬಳಿಯ 4,800 ಹೆಕ್ಟೇರ್ ಪ್ರದೇಶ ಮತ್ತು 5,000 ಹೆಕ್ಟೇರ್ ಪ್ರದೇಶ ಹಾಗೂ ನೆಲಮಂಗಲ ಸಮೀಪದ ಕುಣಿಗಲ್ ರಸ್ತೆಯಲ್ಲಿರುವ 5,200 ಹೆಕ್ಟೇರ್ ಪ್ರದೇಶದಲ್ಲಿ ಎಎಐ ಅಧ್ಯಯನ ನಡೆಸಿತ್ತು.

ಇದೀಗ ವರದಿ ನೀಡಿರುವ ವಿಮಾನ ನಿಲ್ದಾಣ ಪ್ರಾಧಿಕಾರ 3 ಸ್ಥಳಗಳಲ್ಲಿ ಏರ್‌ಪೋರ್ಟ್‌ ನಿರ್ಮಾಣಕ್ಕೆ ಇರುವ ಪ್ರಮುಖ ಸವಾಲುಗಳುಗಳನ್ನು ತೆರೆದಿಟ್ಟಿದೆ. ಆ ಸ್ಥಳೀಯ ಸಾಧ್ಯತಾ ಅಧ್ಯಯನದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಎಎಐ ಸಲ್ಲಿಸಿದೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಯ್ಕೆ ಆಗಿದ್ದ 3 ಸ್ಥಳಗಳ ಸವಾಲುಗಳನ್ನು ಬಿಚ್ಚಿಟ್ಟಿದೆ. ಆ ಸವಾಲುಗಳೇ ಬನ್ನೇರುಘಟ್ಟ ಅರಣ್ಯ ಪ್ರದೇಶ, ಎಚ್‌ಎಎಲ್‌ನ ಏರ್‌ಸ್ಪೇಸ್‌, ಕಲ್ಲು-ಬಂಡೆಗಳಿಂದ ಕೂಡಿದ ಗುಡ್ಡಗಾಡು ಪ್ರದೇಶಗಳಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+