ಭಾರತಾದ್ಯಂತ ಆಚರಣೆಗೊಳ್ಳುತ್ತಿರುವ ಛಾತಪೂಜೆ ವೈಶಿಷ್ಟ್ಯತೆಯೇನು?
ಬೆಂಗಳೂರು, ನವೆಂಬರ್, 18: ಅನಾದಿಕಾಲದಿಂದಲೂ ಸೂರ್ಯನಿಗೆ ಪೂಜೆ ಮಾಡುವ ಕ್ರಮ ನಮ್ಮ ಹಿಂದೂ ಸಂಪ್ರದಾಯದಲ್ಲಿ ನಡೆದೇ ಇದೆ. ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಆಗುವವರೆಗೂ ಜೀವ ಜಂತುಗಳನ್ನು ಸದಾ ಲವಲವಿಕೆಯಿಂದ ಇಡುವ, ಜೀವಂತಿಕೆ ನೀಡುವ ಸೂರ್ಯನನ್ನು ದೈವ ಸ್ವರೂಪಿಯಾಗಿ ನೋಡಲಾಗುತ್ತದೆ.
ಜಗತ್ತಿನ ಅತಿದೊಡ್ಡ ನಕ್ಷತ್ರವಾದ ಸೂರ್ಯನ ಹುಟ್ಟಿನ ಬಗ್ಗೆ ಹಲವಾರು ದಂತ ಕಥೆಗಳಿವೆ. ರವಿ, ಭಾಸ್ಕರ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಈತ ಇಡೀ ಜೀವ ಜಗತ್ತಿನ ಚೈತನ್ಯ. ಸಮಯಕ್ಕನುಗುಣವಾಗಿ ತನ್ನ ಪ್ರಜ್ವಲತೆಯಲ್ಲಿ ವಿಭಿನ್ನತೆ ತೋರುವ ಸೂರ್ಯ ತನ್ನಲ್ಲಿ ಶಾಂತಿ, ಉಗ್ರತೆ, ಪ್ರೀತಿ ಹೀಗೆ ನಾನಾ ಹಾವಭಾವಗಳನ್ನು ಮೇಳೈಸಿಕೊಂಡಿದ್ದಾನೆ.
ಜೀವ ಸ್ವರೂಪಿಗಳಿಗೆ ಸಾಕಾರ ಮೂರ್ತಿಯಾಗಿರುವ ಸೂರ್ಯನನ್ನು ಪೂಜಿಸುವ ಕ್ರಮವನ್ನು ಛಾತ ಪೂಜಾ ಎಂದು ಕರೆಯಲಾಗುತ್ತದೆ. ಈ ಛಾತ ಪೂಜೆಯನ್ನು ಹೆಚ್ಚಾಗಿ ಉತ್ತರ ಭಾರತದ ಮಂದಿ ಕೈಗೊಳ್ಳುತ್ತಾರೆ. 'ಜೀವದ ಶಕ್ತಿ ಕಣಜ', 'ದೈವ ಸ್ವರೂಪಿ' ಎಂಬ ಭಾವನೆ ತಳೆಯುವ ಉತ್ತರ ಭಾರತದ ಮಂದಿ ಸೂರ್ಯನಿಗೆ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ.[ಬೆಳಕಿನೊಂದಿಗೆ ಆತ್ಮದ ಬಂಧ ಬೆಸೆಯುವ ಮಿಣಮಿಣ ಹಣತೆ!]
ಹಾಗಾದರೆ ಬನ್ನಿ ಛಾತಾ ಪೂಜೆ ಎಂದರೇನು? ಎಲ್ಲೆಲ್ಲಿ ಆಚರಿಸುತ್ತಾರೆ? ಯಾವಾಗ ಪೂಜೆ ಮಾಡುತ್ತಾರೆ? ಇದರ ಹಿಂದಿರುವ ಕಥೆಗಳೇನು? ಎಂಬ ನಾನಾ ವಿಚಾರಗಳನ್ನು ನೋಡಿಕೊಂಡು ಬರೋಣ.[ಚಿತ್ರ: ಪಿಟಿಐ]

ಛಾತಾ ಪೂಜೆ ಎಂದರೇನು?
ಛಾತ ಪೂಜೆಯನ್ನು ಸೂರ್ಯನಿಗೆ ಧನ್ಯವಾದಗಳನ್ನು ಸಲ್ಲಿಸಲು ಮಾಡಲಾಗುತ್ತದೆ, ಭೂಮಿಯ ಹಾಗೂ ಜೀವನದ ಉತ್ಸಾಹದ ಚಿಲುಮೆಯಾಗಿರುವ ಸೂರ್ಯ ಛಾತಾ ಪೂಜೆ ಹೆಸರಿನಲ್ಲಿ ಇಡೀ ಕುಟುಂಬ ಮಂದಿಯಿಂದ ಆರಾಧನೆಗೊಳ್ಳುತ್ತಾನೆ.

ಎಲ್ಲೆಲ್ಲೆ ಛಾತ ಪೂಜೆ ಮಾಡಲಾಗುತ್ತದೆ?
ಬಿಹಾರ, ಜಾರ್ಖಂಡ್, ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸ್ ಘಡ್, ಬಿಹಾರ, ಗುಜರಾತ್, ಬೆಂಗಳೂರು, ಜಮೈಕಾ ಇನ್ನಿತರ ಕಡೆಗಳಲ್ಲಿ ಈ ಛಾತಪೂಜೆಯನ್ನು ನಡೆಯುತ್ತದೆ.

ಯಾವಾಗ ಛಾತಪೂಜೆಯನ್ನು ಮಾಡಲಾಗುತ್ತದೆ?
ಈ ಪೂಜೆಯನ್ನು ಮಹಿಳೆಯರು ಕಾರ್ತಿಕ ಮಾಸದ ಆರನೇ ದಿನ ಅಂದರೆ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಹಾಗೂ ಬೇಸಿಗೆ ಕಾಲದಲ್ಲಿ ಅಂದರೆ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಈ ಪೂಜೆಯನ್ನು ಕೈಗೊಳ್ಳಲಾಗುತ್ತದೆ. ನೇಪಾಳದಲ್ಲಿ ಮತ್ತು ಬಿಹಾರದಲ್ಲಿ ಚಳಿಗಾಲದಲ್ಲಿ ನೆರವೇರುತ್ತದೆ.

ಛಾತಪೂಜೆ ಯಾವಾಗ ಆರಂಭವಾಗುತ್ತದೆ?
ಛಾತಪೂಜೆಯು ದೀಪಾವಳಿ ಪ್ರಾರಂಭವಾಗುವ ನಾಲ್ಕು ದಿನ ಮೊದಲು ಆರಂಭವಾದರೆ, ಮುಗಿಯುವುದು ದೀಪಾವಳಿಯ ನಂತರದ ದಿನಗಳಲ್ಲಿ. ಪೂಜೆಯದಿನದಂದು ನದಿಯಲ್ಲಿ ಸ್ನಾನಮಾಡಿ ಆಹಾರ ತಯಾರಿಸುತ್ತಾರೆ.

ಛಾತಪೂಜೆ ದಿನ ಏನೆಲ್ಲಾ ಅಡುಗೆ ಮಾಡುತ್ತಾರೆ?
ಏಳು ದಿನ ಆಚರಣೆಗೊಳ್ಳುವ ಈ ಪೂಜೆಯಂದು ಕೀರು, ರೋಟಿ, ಚಪಾತಿ, ನಾನಾ ಬಗೆಯ ಸಿಹಿಗಳು, ಸೂಪ್ ಗಳನ್ನು ತಯಾರಿಸುತ್ತಾರೆ. ಅಡುಗೆಗೆ ಉಪ್ಪು, ಬೆಳ್ಳುಳ್ಳಿ, ಈರುಳ್ಳಿಯನ್ನು ಬಳಸದೆ ಮಾಡಲಾಗುತ್ತದೆ. ಈ ಎಲ್ಲಾ ಅಡುಗೆ ಮಾಡುವ ಭಕ್ತರು ಇಡೀ ದಿನ ಉಪವಾಸವಿದ್ದು, ಸೂರ್ಯ ಮುಳುಗಿದ ಬಳಿಕ ಆಹಾರ ಸೇವನೆ ಮಾಡುತ್ತಾರೆ.

ಪೂಜೆಯ ಹಿಂದಿರುವ ದಂತಕಥೆ ಏನು?
ರಾಮ ಮತ್ತು ಸೀತಾ 14 ವರ್ಷದ ಅಜ್ಞಾತವಾಸದಿಂದ ಬಂದ ಬಳಿಕ ಸೀತ ತನ್ನ ಹುಟ್ಟು ಊರಾದ ಜನಕಪುರದಲ್ಲಿ ಸೂರ್ಯನನ್ನು ಪೂಜಿಸುತ್ತಾರೆ. ಅಲ್ಲಿಂದ ಆರಂಭವಾದ ಈ ಪೂಜೆಯು ಇಂದಿನವರೆಗೂ ನಡೆದುಕೊಂಡು ಬಂದಿದೆ. ಈ ಪೂಜೆಯ ಸಂದರ್ಭದಲ್ಲಿ ಕೋಸಿ, ಕರ್ನಾಲಿ ಹಾಗೂ ಗಂಗಾ ನದಿಯಿಂದ ಮನೆಗೆ ನೀರನ್ನು ತೆಗೆದುಕೊಂಡು ಬರುತ್ತಾರೆ.

ಛಾತಪೂಜೆಯನ್ನು ಯಾರು ಮಾಡುತ್ತಾರೆ?
ಛಾತಪೂಜೆಯನ್ನು ಮಹಿಳೆಯರು ಹೆಚ್ಚಾಗಿ ಕೈಗೊಳ್ಳುತ್ತಾರೆ. ಪೂಜೆ ಮಾಡುವ ಭಕ್ತರನ್ನು ಪರ್ವತಿನ್ ಎಂದು ಕರೆಯಲಾಗುತ್ತದೆ. ಮನೆಗೆ ಸುಖ ಶಾಂತಿ ನೆಮ್ಮದಿ ನೀಡಲೆಂದು ಸೂರ್ಯದೇವನಲ್ಲಿ ಬೇಡುತ್ತಾರೆ. ಇದನ್ನು ತಮ್ಮ ಕರ್ತವ್ಯವೆಂದು ಭಾವಿಸಲಾಗುತ್ತದೆ.












Click it and Unblock the Notifications