FAQ: ಆಭರಣ ಖರೀದಿ, ಹಣ ಜಮೆಗೆ ಆದಾಯ ತೆರಿಗೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ನವೆಂಬರ್ 11: 500, 1000 ರುಪಾಯಿಯ ನೋಟು ರದ್ದು ಮಾಡಿರುವುದು ಲೆಕ್ಕ ನೀಡದ ದೊಡ್ಡ ಮೊತ್ತ ಇಟ್ಟುಕೊಂಡವರಲ್ಲಿ ದೊಡ್ಡ ಮಟ್ಟದಲ್ಲಿ ಭಯ ಮೂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ 2.5 ಲಕ್ಷ ರುಪಾಯಿಗಿಂತ ಹೆಚ್ಚಿನ ಮೊತ್ತವನ್ನು ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡುವುದರ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿರಿಸಿದೆ.

2.5 ಲಕ್ಷ ರುಪಾಯಿಗಿಂತ ಕಡಿಮೆ ಮೊತ್ತ ಜಮೆ ಮಾಡುವವರು ಯಾವುದೇ ಯೋಚನೆ ಮಾಡುವ ಅಗತ್ಯ ಇಲ್ಲ. ಆಭರಣ ಖರೀದಿ ಮೇಲೆ ಸಹ ನಿಗಾ ಇಡಲು ಸರಕಾರ ನಿರ್ಧರಿಸಿದೆ. ಯಾರು ಚಿನ್ನಾಭರಣಗಳನ್ನು ಖರೀದಿಸುತ್ತಾರೋ ಅವರು ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಸಂಖ್ಯೆ ನೀಡಲೇಬೇಕು. ಹಣ ಜಮೆ ಹಾಗೂ ಚಿನ್ನಾಭರಣ ಖರೀದಿ ಬಗ್ಗೆ ಸಹಜವಾಗಿ ಉದ್ಭವಿಸುವ ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಲಾಗಿದೆ.[500, 1000 ನೋಟು ಬದಲಾವಣೆಗೆ ಹೊರಟ್ರಾ, ಈ ಅಂಶ ಗಮನಿಸಿ]

Jewellery

ನಾನು 2.5 ಲಕ್ಷ ರುಪಾಯಿಗಿಂತ ಕಡಿಮೆ ಮೊತ್ತ ನಗದು ಜಮೆ ಮಾಡಿದರೆ?
ಹಲವರು ಮನೆಯಲ್ಲಿ ಎರಡು ಲಕ್ಷ ರುಪಾಯಿವರೆಗೆ ನಗದು ಇಟ್ಟುಕೊಂಡಿರುತ್ತಾರೆ. ಈ ಬಗ್ಗೆ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅದಿಯಾ ಹೇಳಿದ್ದು, ನವೆಂಬರ್ 10ರಿಂದ ಡಿಸೆಂಬರ್ 30ರ ಮಧ್ಯೆ ಬ್ಯಾಂಕ್ ಗೆ ಕಟ್ಟುವ ಎಲ್ಲ ನಗದಿನ ಬಗ್ಗೆ ವರದಿ ತರಿಸಿಕೊಳ್ಳುತ್ತೇವೆ. 2.5 ಲಕ್ಷ ರುಪಾಯಿಗಿಂತ ಕಡಿಮೆ ಮೊತ್ತ ನಗದು ಜಮೆ ಆದಾಯ ತೆರಿಗೆ ವ್ಯಾಪ್ತಿಗೆ ಬರಲ್ಲ. ಆದ್ದರಿಂದ ಯಾವುದೇ ಸಮಸ್ಯೆ ಇಲ್ಲ.

ಆಭರಣ ಖರೀದಿಯನ್ನು ಸಹ ಅದಾಯ ತೆರಿಗೆ ಇಲಾಖೆ ಗಮನಿಸುತ್ತದಾ?
ಹೌದು. ಆಭರಣದಂಗಡಿಯಲ್ಲಿ ಮಾಡುವ ಎಲ್ಲ ಖರೀದಿಗಳನ್ನು ಗಮನಿಸುತ್ತಾರೆ. ಖರೀದಿದಾರರ ಪ್ಯಾನ್ ಕಾರ್ಡ್ ಸಂಖ್ಯೆ ಪಡೆಯುವಂತೆ ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ. ಆ ಸಂಖ್ಯೆಯನ್ನು ಆದಾಯ ತೆರಿಗೆ ಇಲಾಖೆ ಪರಿಶೀಲಿಸುತ್ತದೆ. ಯಾರು ಪ್ಯಾನ್ ಕಾರ್ಡ್ ಸಂಖ್ಯೆ ಪಡೆಯುವುದಿಲ್ಲವೋ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಯಾರೆಲ್ಲ ಈಗ ಆಭರಣ ಖರೀದಿಸುತ್ತಾರೋ ಎಲ್ಲರೂ ಈ ನಿಯಮ ಪಾಲಿಸಲೇಬೇಕು.[FAQ: 500, 1000 ನೋಟು ಬದಲಾವಣೆ ಬ್ಯಾಂಕ್ ನಿಯಮ]

ಹಣ ಕಟ್ಟುವುದು ಹಾಗೂ ಆದಾಯ ಘೋಷಿಸಿರುವುದರ ಮಧ್ಯೆ ವ್ಯತ್ಯಾಸ ಕಂಡುಬಂದರೆ?
2.5 ಲಕ್ಷ ರುಪಾಯಿಗಿಂತ ಹೆಚ್ಚಿನ ಮೊತ್ತವನ್ನು ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡುವುದರ ಮೇಲೆ ಆದಾಯ ತೆರಿಗೆ ಇಲಾಖೆ ಗಮನಿಸುತ್ತದೆ. 10 ಲಕ್ಷ ರುಪಾಯಿಗಿಂತ ಹೆಚ್ಚಿನ ಮೊತ್ತ ಕಟ್ಟಿದರೆ, ಆದಾಯ ಘೋಷಣೆಗೂ ಹಣ್ಣ ಕಟ್ಟಿರುವುದಕ್ಕೂ ವ್ಯತ್ಯಾಸ ಕಂಡುಬಂದರೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 270 (A) ಅಡಿಯಲ್ಲಿ ತೆರಿಗೆಯ ಶೇ 200ರಷ್ಟು ದಂಡ ವಿಧಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The abolishing of the Rs 500 and 1,000 note has created a lot of panic among those who have a large amount of unaccounted cash.Those making deposits of less than Rs 2.5 lakh have nothing to worry. The government has decided to track buying of jewellery. Here is an FAQ on depositing cash, buying jewellery.
Please Wait while comments are loading...