ದೆಹಲಿಯಲ್ಲಿ ದಟ್ಟ ಮಂಜು: 10 ವರ್ಷಗಳ ದಾಖಲೆ ಮುರಿದ ಶೀತ ಅಲೆ
ನವದೆಹಲಿ ಜನವರಿ 11: ದೆಹಲಿಯಲ್ಲಿ ಶೀತದ ಅಲೆ ಮುಂದುವರೆದಿದ್ದು 10 ವರ್ಷಗಳ ದಾಖಲೆಯನ್ನು ಮುರಿದಿದೆ. ಜನವರಿಯಲ್ಲಿ 5 ದಿನಗಳ ಕಾಲ ದಟ್ಟ ಮಂಜು ದಾಖಲಾಗಿದೆ. ದೆಹಲಿಯು 2019 ರಿಂದ ಜನವರಿಯಲ್ಲಿ ಸುಮಾರು 5 ದಿನಗಳ ಕಾಲ ದಟ್ಟವಾದ ಮಂಜುಗೆ ಸಾಕ್ಷಿಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಹಿರಿಯ ವಿಜ್ಞಾನಿ ಆರ್‌ಕೆ ಜೆನಮಣಿ ಮಂಗಳವಾರ ಹೇಳಿದ್ದಾರೆ. ಕಳೆದ 23 ವರ್ಷಗಳಲ್ಲಿ ದೆಹಲಿಯಲ್ಲಿ ಮೂರನೇ ಅತಿ ಹೆಚ್ಚು ಚಳಿಯ ಅನುಭವವಾಗಿದೆ. ದೆಹಲಿಯು ಜನವರಿ 3-9 ರಿಂದ ಸುಮಾರು 5 ದಿನಗಳ ಕಾಲ ದೆಹಲಿ ಅತಿ ಹೆಚ್ಚು ಶೀತ ಅಲೆಯನ್ನು ಅನುಭವಿಸಿದೆ.
ಈ ಐದು ದಿನಗಳಲ್ಲಿ ತಾಪಮಾನ ಸುಮಾರು ಎರಡರಿಂದ ನಾಲ್ಕು ಡಿಗ್ರಿಗಳಷ್ಟಿತ್ತು. ನಮ್ಮಲ್ಲಿ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಇದು 23 ವರ್ಷಗಳಲ್ಲಿ (2000 ರಿಂದ 2023) ಮೂರನೇ ಕೆಟ್ಟ ಚಳಿಯಾಗಿದೆ.

ದೆಹಲಿಯಲ್ಲಿ ದಾಖಲೆ ಬರೆದ ಶೀತ ಅಲೆ
ಈ ವರ್ಷದ ಜನವರಿಯಲ್ಲಿ ದೆಹಲಿಯಲ್ಲಿ ಶೀತ ಅಲೆಯು 10 ವರ್ಷಗಳಲ್ಲೇ ಅತಿ ಹೆಚ್ಚು ದಾಖಲಾಗಿದೆ ಎಂದು ಹೇಳಿದರು. 2013 ರಲ್ಲಿ ದೆಹಲಿಯು 7 ದಿನಗಳಲ್ಲಿ (ಜನವರಿ 3 ರಿಂದ ಜನವರಿ 9) 4 ಡಿಗ್ರಿ ಸೆಲ್ಸಿಯಸ್‌ಗೆ ಸಮಾನವಾದ ಅಥವಾ ಕಡಿಮೆ ತಾಪಮಾನವನ್ನು ದಾಖಲಿಸಿದೆ ಎಂದು ಅವರು ಹೇಳಿದರು. ಜನವರಿ 6 ರಂದು ಕನಿಷ್ಠ ತಾಪಮಾನ 1.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

5 ದಿನಗಳ ಕಾಲ ದಟ್ಟ ಮಂಜು ದಾಖಲು
IMD ಅಂಕಿಅಂಶಗಳ ಪ್ರಕಾರ, ಈ ವರ್ಷ ರಾಷ್ಟ್ರೀಯ ರಾಜಧಾನಿ ಜನವರಿ 5 ರಿಂದ 9 ರವರೆಗೆ ಅತೀ ಹೆಚ್ಚು ಶೀತ ಅಲೆಯನ್ನು ದಾಖಲಿಸಿದೆ. ಜನವರಿ 8 ರಂದು ಕನಿಷ್ಠ ತಾಪಮಾನ 1.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ತಿಂಗಳು ಇಲ್ಲಿಯವರೆಗೆ ದೆಹಲಿಯಲ್ಲಿ ಸುಮಾರು 50 ಗಂಟೆಗಳ ದಟ್ಟವಾದ ಮಂಜು ದಾಖಲಾಗಿದೆ. ಇದು 2019 ರಿಂದ ಅತಿ ಹೆಚ್ಚು ದಾಖಲಾದ ಶೀತದ ಅಲೆ ಎಂದು ಜೆನಮಣಿ ಹೇಳಿದರು.
ದಟ್ಟ ಮಂಜಿನಿಂದಾಗಿ ನಗರದಲ್ಲಿ ಈ ತಿಂಗಳ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. ಸಫ್ದರ್‌ಜಂಗ್ ವೀಕ್ಷಣಾಲಯದಲ್ಲಿ ಸೋಮವಾರ 3.8 ಡಿಗ್ರಿ ಸೆಲ್ಸಿಯಸ್ ತಾಪಮಾನ, ಭಾನುವಾರ 1.9 ಡಿಗ್ರಿ ಸೆಲ್ಸಿಯಸ್, ಶನಿವಾರ 2.2 ಡಿಗ್ರಿ ಸೆಲ್ಸಿಯಸ್, ಶುಕ್ರವಾರ 4 ಡಿಗ್ರಿ ಸೆಲ್ಸಿಯಸ್ ಮತ್ತು ಗುರುವಾರ 3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸೋಮವಾರ ಸತತ ಐದನೇ ದಿನ, ದೆಹಲಿಯಲ್ಲಿ ತಾಪಮಾನ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಹೆಚ್ಚಿನ ಗಿರಿಧಾಮಗಳಿಗಿಂತ ಕಡಿಮೆಯಾಗಿದೆ.

ಶಾಲೆಗಳಲ್ಲಿ ಚಳಿಗಾಲದ ರಜೆ
ಜನವರಿ ಆರಂಭದಿಂದಲೂ, ದೆಹಲಿಯಲ್ಲಿನ ಶೀತ ಹವಾಮಾನವು ವಿದ್ಯುತ್ ಬೇಡಿಕೆಯನ್ನು ಹೆಚ್ಚಿಸಿದೆ. ನಿರಾಶ್ರಿತರಿಗೆ ಸವಾಲುಗಳನ್ನು ನೀಡಿದೆ. ಹೆಚ್ಚುತ್ತಿರುವ ಚಳಿಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರವು ಎಲ್ಲಾ ಶಾಲೆಗಳಲ್ಲಿ ಚಳಿಗಾಲದ ರಜೆಯನ್ನು ಜನವರಿ 15 ರವರೆಗೆ ವಿಸ್ತರಿಸಿದೆ. ಮೆಟ್ ಆಫೀಸ್ ಪ್ರಕಾರ, ಗೋಚರತೆಯು 0 ಮತ್ತು 50 ಮೀಟರ್‌ಗಳ ನಡುವೆ ಇರುವಾಗ 'ಅತ್ಯಂತ ದಟ್ಟವಾದ ಮಂಜು' ಸಂಭವಿಸುತ್ತದೆ ಮತ್ತು 51 ಮತ್ತು 200 ಮೀಟರ್‌ಗಳ ನಡುವೆ ಅದು 'ದಟ್ಟ', 201 ಮತ್ತು 500 ಮೀಟರ್‌ಗಳ ನಡುವೆ 'ಮಧ್ಯಮ'ವಾಗಿರುತ್ತದೆ.

ಕೆಲವು ಪ್ರಮುಖ ನವೀಕರಣಗಳು ಇಲ್ಲಿವೆ
*IMD ಜನವರಿ 12 ರಂದು ದೆಹಲಿಯಲ್ಲಿ ಮಳೆ, ಹನಿ ಮತ್ತು ಹಿಮಪಾತವನ್ನು ಮುನ್ಸೂಚನೆ ನೀಡಿದೆ
*ರಾಷ್ಟ್ರ ರಾಜಧಾನಿಯಲ್ಲಿ ಎರಡನೇ ಚಳಿಯು ಜನವರಿ 14 ರಂದು ಪ್ರಾರಂಭವಾಗುತ್ತದೆ.
*IMD ಪ್ರಕಾರ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಪಶ್ಚಿಮ ಯುಪಿ ಮತ್ತು ಉತ್ತರ ರಾಜಸ್ಥಾನದಂತಹ ರಾಜ್ಯಗಳಲ್ಲಿ ಲಘು ಮಳೆ ಅಥವಾ ತುಂತುರು ಮಳೆಯಾಗಲಿದೆ.
*ಜಮ್ಮು ಮತ್ತು ಕಾಶ್ಮೀರಕ್ಕೆ IMD ಜನವರಿ 12 ರಂದು ಭಾರೀ ಮಳೆ ಅಥವಾ ಹಿಮದ ಮುನ್ಸೂಚನೆ ನೀಡಿದೆ.
*ಜನವರಿ 11-14 ರ ನಡುವೆ ಹಿಮಾಚಲ ಮತ್ತು ಉತ್ತರಾಖಂಡದಲ್ಲಿ ಮಳೆ ಅಥವಾ ಹಿಮಪಾತವನ್ನು ನಾವು ನಿರೀಕ್ಷಿಸುತ್ತೇವೆ
*ಜನವರಿ 14ರಿಂದ ಎರಡನೇ ಬಾರಿಗೆ ಚಳಿಗಾಲದ ಎಚ್ಚರಿಕೆಯನ್ನೂ ನೀಡುತ್ತಿದ್ದೇವೆ ಎಂದು ಐಎಂಡಿ ವಿಜ್ಞಾನಿ ಆರ್‌ಕೆ ಜೆನಮಣಿ ತಿಳಿಸಿದ್ದಾರೆ.












Click it and Unblock the Notifications