• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

70 ಜನರ ಸಾವಿಗೆ ಕಾರಣರಾದ ಮೋದಿಯನ್ನು ಬಂಧಿಸಿ : ಕಾಂಗ್ರೆಸ್ ಮುಖಂಡ

By Balaraj
|

ಮುಂಬೈ, ನ 22: ಸರಿಯಾಗಿ ಪೂರ್ವ ತಯಾರಿ ನಡೆಸದೇ ದೊಡ್ಡ ನೋಟನ್ನು ನಿಷೇಧಿಸಿ, ಎಪ್ಪತ್ತು ಅಮಾಯಕರ ಸಾವಿಗೆ ಪ್ರಧಾನಿ ಕಾರಣರಾಗಿದ್ದಾರೆ. ಅವರ ವಿರುದ್ದ ಕೇಸ್ ದಾಖಲಿಸಿ, ಬಂಧಿಸಬೇಕೆಂದು ಕಾಂಗ್ರೆಸ್ ಮುಖಂಡರೊಬ್ಬರು ಒತ್ತಾಯಿಸಿದ್ದಾರೆ.

ಸಾವಿರಾರು ಜನ ಮೋದಿಯ ತಪ್ಪು ನಿರ್ಧಾರದಿಂದ ತಮ್ಮದೇ ಹಣವನ್ನು ವಾಪಸ್ ಪಡೆಯಲಾಗದೇ ಮತ್ತು ಚಿಲ್ಲರೆ ಸಮಸ್ಯೆಯಿಂದ ಒಪ್ಪತ್ತಿನ ಊಟಕ್ಕೂ ಪರದಾಡುವಂತಾಗಿದೆ ಎಂದು ಮುಂಬೈ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಂಜನ್ ನಿರುಪಮ್ ಹೇಳಿದ್ದಾರೆ. (ನೋಟು ರದ್ದು ಬಗ್ಗೆ ಜನ ಏನಂತಾರೆ)

ನೋಟು ನಿಷೇಧಿಸಿ ಇಷ್ಟು ದಿನವಾದರೂ ಜನರು ದೊಡ್ಡ ಸರತಿಯಲ್ಲಿ ನಿಲ್ಲುವುದು ತಪ್ಪಲಿಲ್ಲ. ಕೇಂದ್ರದ ಮೋದಿ ಸರಕಾರದ ತಪ್ಪು ನಿರ್ಧಾರದಿಂದ ಇದುವರೆಗೆ ಎಪ್ಪತ್ತಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

ತಮ್ಮದೇ ದುಡ್ಡನ್ನು ತೆಗೆಯಲು ಜನ ಪರದಾಡುವಂತಾಗಿದೆ. ಅಮಾಯಕರ ಸಾವಿಗೆ ಪ್ರಧಾನಿ ನರೇಂದ್ರ ಮೋದಿಯವರೇ ನೇರ ಕಾರಣ. ಅವರ ವಿರುದ್ದ ಕೇಸ್ ದಾಖಲಿಸಿ, ಬಂಧಿಸಬೇಕೆಂದು ಸಂಜಯ್ ನಿರುಪಮ್ ಆಗ್ರಹಿಸಿದ್ದಾರೆ.

ಇತ್ತ, ಮಂಗಳವಾರ (ನ 22) ಬಿಜೆಪಿ ಸಂಸದೀಯ ಮಂಡಳಿಯ ಸಭೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ದದ ಹೋರಾಟ ಈಗ ಆರಂಭವಾಗಿದೆ ಎಂದಿದ್ದಾರೆ. ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಮೋದಿ, ಮುಂದೆ ಓದಿ..

ಸಂಜಯ್ ನಿರುಪಮ್

ಸಂಜಯ್ ನಿರುಪಮ್

70ಕ್ಕೂ ಹೆಚ್ಚು ಜನರ ಸಾವಿಗೆ ಕಾರಣರಾದ ಮೋದಿ ವಿರುದ್ದ ಐಪಿಸಿ ಸೆಕ್ಷನ್ 302ರ ಪ್ರಕಾರ ಕೇಸ್ ದಾಖಲಿಸಬೇಕು. ಇಷ್ಟೂ ಜನರ ಸಾವಿಗೆ ಮೋದಿ ಒಬ್ಬರೇ ನೇರ ಕಾರಣ - ಮುಂಬೈ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಂಜಯ್ ನಿರುಪಮ್.

ನೋಟ್ ಪೇ ಚರ್ಚಾ

ನೋಟ್ ಪೇ ಚರ್ಚಾ

ಜನರ ಸಮಸ್ಯೆಗಳನ್ನು ಆಲಿಸಲು 'ನೋಟ್ ಪೇ ಚರ್ಚಾ'ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಂಜಯ್, ಸುಮಾರು ಐದು ಲಕ್ಷ ಕೋಟಿ ರೂಪಾಯಿ ಬ್ಯಾಂಕಿಗೆ ಇದುವರೆಗೆ ಜಮೆಯಾಗಿದೆ. ಆದರೆ ಶೇ. 25ರಷ್ಟು ಜನ ಮಾತ್ರ ತಮ್ಮ ಹಣವನ್ನು ವಾಪಸ್ ಪಡೆಯಲು ಸಾಧ್ಯವಾಗಿದೆ ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ.

ರಿಸರ್ವ್ ಬ್ಯಾಂಕ್

ಕೇಂದ್ರ ಸರಕಾರ ಮತ್ತು ರಿಸರ್ವ್ ಬ್ಯಾಂಕ್ ಇನ್ನಾದರೂ ಸೂಕ್ತ ಕ್ರಮ ತೆಗೆದುಕೊಂಡು ಜನರ ಸಮಸ್ಯೆಗೆ ಸ್ಪಂದಿಸಲಿ. ಕರೆನ್ಸಿ ನೋಟನ್ನು ಸರಿಯಾದ ಸಮಯಕ್ಕೆ ಸಿಗುವಂತೆ ಮಾಡಿ ಜನರ ಬವಣೆಯನ್ನು ತಪ್ಪಿಸಲಿ - ಸಂಜಯ್ ನಿರುಪಮ್.

ಬಿಜೆಪಿ ಸಂಸದೀಯ ಮಂಡಳಿ ಸಭೆ

ಬಿಜೆಪಿ ಸಂಸದೀಯ ಮಂಡಳಿ ಸಭೆ

ಮಂಗಳವಾರ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ, ಕಪ್ಪುಹಣದ ವಿರುದ್ದ ಹೋರಾಟ ಈಗ ಆರಂಭವಾಗಿದೆ. ಇದು ಕಡೇ ಅಸ್ತ್ರವಲ್ಲ, ಆರಂಭ - ಮೋದಿ.

ಪ್ರತಿಪಕ್ಷಗಳ ವಿರುದ್ದ ಮೋದಿ ವಾಗ್ದಾಳಿ

ಪ್ರತಿಪಕ್ಷಗಳ ವಿರುದ್ದ ಮೋದಿ ವಾಗ್ದಾಳಿ

ವಿರೋಧ ಪಕ್ಷಗಳು ಕಪ್ಪುಹಣದ ಪರವಾಗಿ ನಿಂತಿದ್ದಾರೆ. ಇವರಿಗೆ ಜನರು ಮುಂದಿನ ದಿನದಲ್ಲಿ ಪಾಠ ಕಲಿಸಲಿದ್ದಾರೆ. ನೋಟು ನಿಷೇಧವನ್ನು ಭಾರತೀಯರು ಒಪ್ಪಿಕೊಂಡಿದ್ದಾರೆಂದು ಮೋದಿ ಸಭೆಯಲ್ಲಿ ಹೇಳಿದ್ದಾರೆ.

English summary
Blaming PM Narendra Modi for the deaths of over 70 people linked to demonetisation, Mumbai Congress President Sanjay Nirupam said on Tuesday (Nov 22) that the Prime Minister "should be booked for murder" under section IPC 302.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X