ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಹಿನೂರ್‌ ವಜ್ರ ಭಾರತಕ್ಕೆ ಹಿಂದಿರುಗಿಸಲು ಆಗ್ರಹ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 11: ಬ್ರಿಟನ್‌ನ ದೀರ್ಘಾವಧಿ ಆಡಳಿತ ನಡೆಸದ ​​ರಾಣಿ ಎಲಿಜಬೆತ್ 2ರ ಮರಣವು ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸುವ ಬೇಡಿಕೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

105.6 ಕ್ಯಾರೆಟ್‌ನ ಅದ್ಭುತವಾದ ನೀಲಿ ಬೆಳಕಿನ ವಜ್ರವು ಈಗ ಕಿರೀಟದಲ್ಲಿರುವ ವಜ್ರಗಳಲ್ಲಿ ಒಂದಾಗಿದೆ. ನೀಲಮಣಿಗಳು ಮತ್ತು ಇತರ ಬೆಲೆಬಾಳುವ ಕಲ್ಲುಗಳು 1937ರಲ್ಲಿ ವಿನ್ಯಾಸಗೊಳಿಸಲಾದ ಬ್ರಿಟಿಷ್ ರಾಣಿಯ ಕಿರೀಟದಲ್ಲಿ ಸೇರಿದೆ. ಸಾಂಪ್ರದಾಯಿಕ ಕಿರೀಟವು ಈಗ ರಾಣಿ ಕ್ಯಾಮಿಲ್ಲಾ ಅವರಿಗೆ ಸೇರುತ್ತದೆ ಎಂದು ವರದಿಯಾಗಿದೆ. ಮೂರನೇ ಕಿಂಗ್ ಚಾರ್ಲ್ಸ್ ಅವರ ಪಟ್ಟಾಭಿಷೇಕದ ಸಮಯದಲ್ಲಿ ಕಿರೀಟವನ್ನು ರಾಣಿ ಕ್ಯಾಮಿಲ್ಲಾ ಅವರಿಗೆ ಅಭಿಷೇಕಿಸಲಾಗುತ್ತದೆ.

ರಾಣಿ 2ನೇ ಎಲಿಜಬೆತ್ ಗೌರವಾರ್ಥ ದೇಶಾದ್ಯಂತ ಶೋಕಾಚರಣೆರಾಣಿ 2ನೇ ಎಲಿಜಬೆತ್ ಗೌರವಾರ್ಥ ದೇಶಾದ್ಯಂತ ಶೋಕಾಚರಣೆ

ಆದರೆ ಕೆಲವು ಟ್ವಿಟ್ಟರ್ ಬಳಕೆದಾರರು ಕೊಹಿನೂರ್ ವಜ್ರದ ವಾಪಸಾತಿಗೆ ಸಂಬಂಧಿಸಿದಂತೆ ಕೆಲವು ಗಂಭೀರವಾದ ಮನವಿಗಳನ್ನು ಈಗ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಕೆಲವರು ವ್ಯಂಗ್ಯವನ್ನು ಮಾಡಿದ್ದಾರೆ. ಹೃತಿಕ್ ರೋಷನ್ ಪಾತ್ರವು ಚಲಿಸುವ ರೈಲಿನಿಂದ ವಜ್ರವನ್ನು ಹಿಡಿಯುವ ಬಾಲಿವುಡ್ ಚಿತ್ರ 'ಧೂಮ್ 2' ನ ದೃಶ್ಯವನ್ನು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ.

ನಮ್ಮ ಹೀರಾ, ಮೋತಿ, ಕೊಹಿನೂರ್ ವಜ್ರವನ್ನು ಬ್ರಿಟಿಷ್ ಮ್ಯೂಸಿಯಂನಿಂದ ಭಾರತಕ್ಕೆ ಮರುಪಡೆಯಲು ಹೃತಿಕ್ ರೋಷನ್ ಹಿಂತಿರುಗಿದ್ದಾರೆ ಎಂದು ಬಳಕೆದಾರರು ಪೋಸ್ಟ್‌ನ ಭಾಗವಾಗಿ ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ರಾಣಿ ವಸಾಹತುಶಾಹಿಯಲ್ಲಿ ಸಕ್ರಿಯ ಪಾಲ್ಗೊಳ್ಳುವವರು. ಈಗ ನಾವು ನಮ್ಮ ಕೊಹಿನೂರ್ ಅನ್ನು ಮರಳಿ ಪಡೆಯಬಹುದೇ? ರಾಣಿ ಎಲಿಜಬೆತ್ ವಸಾಹತುಶಾಹಿ ಕಾಲದ ಭಾಗವಲ್ಲ ಎಂಬುದನ್ನು ನೆನಪಿಸಿ ಅವರು ವಜ್ರವನ್ನು ಮರಳಿ ಭಾರತಕ್ಕೆ ತರಬಹುದೇ ಎಂದು ಕೇಳಿದ್ದಾರೆ.

1947ರಲ್ಲಿ ವಜ್ರ ಹಿಂದುರಿಗಿಸಲು ಭಾರತ ಆಗ್ರಹ

1947ರಲ್ಲಿ ವಜ್ರ ಹಿಂದುರಿಗಿಸಲು ಭಾರತ ಆಗ್ರಹ

ವಜ್ರವನ್ನು 14 ನೇ ಶತಮಾನದಲ್ಲಿ ಭಾರತದ ಗೋಲ್ಕೊಂಡಾ ಗಣಿಗಳಲ್ಲಿ ಪತ್ತೆ ಹಚ್ಚಲಾಯಿತು. ಶತಮಾನಗಳ ಅವಧಿಯಲ್ಲಿ ವಿವಿಧ ಕೈಗಳ ಮೂಲಕ ಅದು ಸರಿದು ಹೋಯಿತು. ಭಾರತ ಸರ್ಕಾರವು 1947ರಲ್ಲಿ ಒಮ್ಮೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಕೊಹಿನೂರ್‌ನ ವಾಪಸಾತಿಗೆ ಒತ್ತಾಯಿಸಿದೆ. ಆದಾಗ್ಯೂ, ಬ್ರಿಟಿಷ್ ಸರ್ಕಾರವು ವಜ್ರವನ್ನು ಕೊಡಲು ನಿರಾಕರಿಸಿದೆ.

ಬ್ರಿಟನ್ ರಾಣಿಯ ಸಂಪತ್ತು, ಆಭರಣಗಳು, 105-ಕ್ಯಾರೆಟ್ ಕೊಹಿನೂರ್ ವಜ್ರ ಏನಾಗಲಿದೆ ?ಬ್ರಿಟನ್ ರಾಣಿಯ ಸಂಪತ್ತು, ಆಭರಣಗಳು, 105-ಕ್ಯಾರೆಟ್ ಕೊಹಿನೂರ್ ವಜ್ರ ಏನಾಗಲಿದೆ ?

ವಜ್ರ 186 ಕ್ಯಾರೆಟ್ ತೂಕವಿತ್ತು

ವಜ್ರ 186 ಕ್ಯಾರೆಟ್ ತೂಕವಿತ್ತು

ಆಂಗ್ಲೋ-ಸಿಖ್ ಯುದ್ಧದ ನಂತರ ಲಾಹೋರ್‌ನ ಮಹಾರಾಜರೊಂದಿಗೆ ಸಹಿ ಮಾಡಿದ ದಂಡನಾತ್ಮಕ ಒಪ್ಪಂದದ ಭಾಗವಾಗಿ 1849 ರಲ್ಲಿ ಕೊಹಿನೂರ್ ಅನ್ನು ಬ್ರಿಟಿಷರಿಗೆ ಹಸ್ತಾಂತರಿಸಲಾಯಿತು ಎಂದು ಇತಿಹಾಸ ಹೇಳುತ್ತದೆ. ಆ ಸಮಯದಲ್ಲಿ ವಜ್ರ 186 ಕ್ಯಾರೆಟ್ ತೂಕವಿತ್ತು. 1847ರಲ್ಲಿ ಮಹಾರಾಜ ದುಲೀಪ್ ಸಿಂಗ್ ಅವರನ್ನು ತನ್ನ ತಾಯಿಯಿಂದ ಬೇರ್ಪಡಿಸಿ ಬ್ರಿಟನ್‌ಗೆ ಕಳುಹಿಸಲಾಯಿತು. 10 ವರ್ಷ ವಯಸ್ಸಿನವನಾಗಿದ್ದಾಗ ಅವನು ಬ್ರಿಟನ್‌ಗೆ ವಜ್ರವನ್ನು ನೀಡಯವಂತೆ ಮಾಡಲಾಯಿತು.

ಕಿಂಗ್ ಪ್ರಿನ್ಸ್ ಚಾರ್ಲ್ಸ್ ನೂತನ ರಾಜ

ಕಿಂಗ್ ಪ್ರಿನ್ಸ್ ಚಾರ್ಲ್ಸ್ ನೂತನ ರಾಜ

ಅಂದಿನಿಂದ, ಇದು ಬ್ರಿಟಿಷ್ ಕಿರೀಟದ ಜ್ಯುವೆಲ್ಸ್‌ನ ಭಾಗವಾಗಿದೆ. ಆದರೂ ಇದು ಭಾರತ ಸೇರಿದಂತೆ ಕನಿಷ್ಠ ನಾಲ್ಕು ದೇಶಗಳ ನಡುವಿನ ಐತಿಹಾಸಿಕ ಮಾಲೀಕತ್ವದ ವಿವಾದದ ವಿಷಯವಾಗಿದೆ. ಬ್ರಿಟನ್‌ನ ರಾಣಿ ಎಲಿಜಬೆತ್ II ತಮ್ಮ 96ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ರಾಣಿ ಎಲಿಜಬೆತ್ ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಕ್ಯಾಸಲ್‌ನಲ್ಲಿ ಕೊನೆಯುಸಿರೆಳೆದ್ದಾರೆ. ಅವರ ನಂತರ ಅವರ ಸ್ಥಾನವನ್ನು ಅವರ ಹಿರಿಯ ಮಗ ಕಿಂಗ್ ಪ್ರಿನ್ಸ್ ಚಾರ್ಲ್ಸ್ ಮತ್ತು ಅವರ ಪತ್ನಿ ಕ್ಯಾಮಿಲ್ಲಾ ಪಾರ್ಕರ್ ಅಲಂಕರಿಸುತ್ತಾರೆ.

ಅರ್ಧಕ್ಕೆ ರಾಷ್ಟ್ರರ್ಧವಜವನ್ನು ಹಾರಿಸಲಾಗಿದೆ

ಅರ್ಧಕ್ಕೆ ರಾಷ್ಟ್ರರ್ಧವಜವನ್ನು ಹಾರಿಸಲಾಗಿದೆ

ರಾಣಿ ಎಲಿಜಬೆತ್‌ ಮರಣಕ್ಕೆ ಗೌರವ ಸೂಚಕದ ಭಾಗವಾಗಿ ಭಾರತದಲ್ಲೂ ಒಂದು ದಿನದ ಶೋಕಾಚರಣೆಯನ್ನು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅರ್ಧಕ್ಕೆ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಈ ವೇಳೆ ಯಾವುದೇ ಮನರಂಜನಾತ್ಮಕ ಕಾರ್ಯಕ್ರಮ ಇರುವುದಿಲ್ಲ ಎಂದು ಗೃಹ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

English summary
The death of Britain's long-reigning Queen Elizabeth II has brought back the demand for the return of the Kohinoor diamond to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X