ದೆಹಲಿಯಲ್ಲಿ ವಿಕೃತ ಶಿಶುಕಾಮಿಯೊಬ್ಬನ ಬಂಧನ

Posted By:
Subscribe to Oneindia Kannada

ನವದೆಹಲಿ, ಜನವರಿ 16: ಕಳೆದ 14 ವರ್ಷಗಳಿಂದ ಶಾಲಾ ಬಾಲಕಿಯರ ಮೇಲೆ ಲೈಂಗಿಕವಾಗಿ ಹಲ್ಲೆ ಮಾಡುತ್ತಿದ್ದ ವಿಕೃತ ಶಿಶುಕಾಮಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, ತನ್ನ ಅಪರಾಧಗಳನ್ನು ಈತ ಒಪ್ಪಿಕೊಂಡಿದ್ದಾನೆಂದ ಪೊಲೀಸರು ಹೇಳಿದ್ದಾರೆ.

ಅಂದಹಾಗೆ, ಈತನ ಹೆಸರು ಸುನಿಲ್ ರಸ್ತೋಗಿ. ವಯಸ್ಸು 38. ಸಂಸಾರಿಯಾದ ಈತನಿಗೂ ಐವರು ಮಕ್ಕಳಿದ್ದಾರೆ. ಆದರೆ, ಬೇರೆಯವರ ಮಕ್ಕಳ ಮೇಲೆ ಈತನ ಕಣ್ಣಿರುತ್ತಿತ್ತು.

ದೆಹಲಿಯ ಒಳ ಹಾಗೂ ಹೊರ ವಲಯಗಳಲ್ಲಿ ಈತನ ಕರಾಮತ್ತು ನಡೆಯುತ್ತಿದ್ದವು. ಸುಮಾರು 10ರಿಂದ 11 ವರ್ಷದ ಬಾಲಕಿಯರು ಈತನ ಸಾಮಾನ್ಯ ಟಾರ್ಗೆಟ್ ಆಗಿರುತ್ತಿದ್ದರು. ನಿಮ್ಮ ತಂದೆ, ತಾಯಿ ನಿಮಗೇನೋ ಕಳಿಸಿದ್ದಾರೆ. ಬನ್ನಿ ಕೊಡುತ್ತೇನೆ ಎಂದು ಕೊಂಚ ಜನಸಂದಣಿ ಕಡಿಮೆ ಇರುತ್ತಿದ್ದ ಕಡೆ ಕರೆದುಕೊಂಡು ಹೋಗಿ ಅವರನ್ನು ಅಪ್ಪಿಕೊಳ್ಳುವುದು, ಮುದ್ದಾಡುವುದು ಮುಂತಾದ ಕುಚೇಷ್ಟೆಗಳನ್ನು ಮಾಡುತ್ತಿದ್ದ.

Delhi Tailor who was Sexually Assaulting Hundreds Of Girls arrested

ಹಾಗೆ ಬಟ್ಟೆಗಳನ್ನು ಕೊಡಲು ನಿರ್ಜನ ಪ್ರದೇಶಗಳಿಗೆ ಕರೆದೊಯ್ಯುತ್ತಿದ್ದ ಆತ ಅಲ್ಲಿ ಅವರ ಮೇಲೆ ಲೈಂಗಿಕ ದಾಳಿ ಎಸಗುತ್ತಿದ್ದ. ಆದರೆ, ವಿಚಿತ್ರವೆಂದರು, ಕಳೆದ 14 ವರ್ಷಗಳಿಂದ ಈತನ ಕೃತ್ಯಗಳ ಮೇಲೆ ಹಲವಾರು ದೂರುಗಳು ದಾಖಲಾಗಿದ್ದರೂ, ಸರಿಯಾದ ಮಾಹಿತಿ ಸಿಗದೇ ಪೊಲೀಸರು ತನಿಖೆ ಕೈ ಚೆಲ್ಲುವಂತಾಗುತ್ತಿತ್ತು.

ಆದರೆ, ಕಳೆದ ತಿಂಗಳು ಸುಮಾರು ಮೂರ್ನಾಲ್ಕು ಬಾರಿ ಇಂಥ ದುಷ್ಕೃತ್ಯಗಳನ್ನು ಮಾಡಿದ ಈತನ ಬಗ್ಗೆ ದೂರುಗಳು ದಾಖಲಾಗಿ ಪೊಲೀಸರಿಗೆ ತಲೆನೋವು ಕಾಡಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡ ದೆಹಲಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿಕೊಂಡು ಗುಟ್ಟಾಗಿ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತ ಸಾಮಾನ್ಯವಾಗಿ ಸಂಜೆ 7 ರಿಂದ ರಾತ್ರಿ 10ವರೆಗೆ ತನ್ನ ಖರಾಮತ್ತು ತೋರುತ್ತಿದ್ದ. 2006ರಲ್ಲಿ ಈತನ ಮೂಲ ಸ್ಥಳವಾದ ಉತ್ತರಾಖಾಂಡ್ ನ ರುದ್ರಾಪುರದಲ್ಲಿ ಇಂಥದ್ದೇ ಕೃತ್ಯವೆಸಗಿ ಬಂಧನಕ್ಕೊಳಗಾಗಿ, ಆರು ತಿಂಗಳ ಜೈಲು ವಾಸವನ್ನನುಭವಿಸಿದ್ದ. ಆನಂತರವಷ್ಟೇ, ಈತ ದೆಹಲಿ ಕಡೆಗೆ ಮುಖ ಮಾಡಿದ್ದ.

ದೆಹಲಿಯಲ್ಲೂ ತನ್ನ ಖರಾಮತ್ತು ಮುಂದುವರಿಸಿದ್ದ ದೆಹಲಿಯಲ್ಲಿನ ತನ್ನ ಆರಂಭಿಕ ಜೀವನದಲ್ಲೇ ಪೂರ್ವವಲಯದಲ್ಲಿ ವಾಸಿಸುತ್ತಿದ್ದ. ಅಲ್ಲಿ, ನೆರೆ ಮನೆಯ ಬಾಲಕಿಯೊಬ್ಬಳ ಬಳಿ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಗೂಸಾ ತಿಂದು ಅಲ್ಲಿಂದಲೂ ಜಾಗ ಖಾಲಿ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A father of five in Delhi Sunil Rastogi arrested on Saturday after investigations into three sexual attacks on young girls since 14 years. ಕಳೆದ 14 ವರ್ಷಗಳಿಂದ ಶಾಲಾ ಬಾಲಕಿಯರ ಮೇಲೆ ಲೈಂಗಿಕವಾಗಿ ಹಲ್ಲೆ ಮಾಡುತ್ತಿದ್ದ ರಾಜು ರಸ್ತೋಗಿ ಎಂಬ ವಿಕೃತ ಶಿಶುಕಾಮಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
Please Wait while comments are loading...