Schools Holiday: ಮಹಾನಗರದಲ್ಲಿ ಹದಗೆಟ್ಟ ಗಾಳಿ ಗುಣಮಟ್ಟ: ಶಾಲೆಗಳ ಬಂದ್‌ಗೆ ಸರ್ಕಾರ ಆದೇಶ
Poor Air Quality in City: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಗಾಗ ಗಾಳಿ ಗುಣಮಟ್ಟ ತೀರಾ ಕಳಪೆ ಮಟ್ಟ ತಲುಪುತ್ತದೆ. ಕಳೆದ ಮೂರು ನಾಲ್ಕು ದಿನಗಳಿಂದ ಬೆಂಗಳೂರಿಗಿಂತಲೂ ಬಳ್ಳಾರಿಯಲ್ಲಿ ಗಾಳಿ ಕಲುಷಿತಗೊಂಡಿದ್ದು ವರದಿ ಆಗಿತ್ತು. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಸಿರಾಡಲು ಯೋಗ್ಯವಲ್ಲದ ಗಾಳಿ ದಾಖಲಾಗಿದೆ. ಹೀಗಾಗಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲೆಗಳ ಬಂದ್‌ಗೆ ದೆಹಲಿ ಸರ್ಕಾರ ನಿರ್ಧಾರ ಕೈಗೊಂಡಿದೆ.
ನಿರಂತರ ವಾಯು ಮಾಲಿನ್ಯದಿಂದ ಕಂಗೆಡುವ ದೆಹಲಿ, ಈ ಬಾರಿಯ ಚಳಿಗಾಲದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಲುಷಿತಗೊಂಡಿದೆ. ದೆಹಲಿ ವಾಯುಮಾಲಿನ್ಯ ತೀರಾ ಹದಗೆಟ್ಟಿದೆ. ಇದು ಸಂಚಾರ, ಜನರ ಜೀವನದ ಜೊತೆಗೆ ಮಕ್ಕಳ ಶಿಕ್ಷಣದ ಮೇಲೆ ತನ್ನ ಕರಿಛಾಯೆ ಮೂಡಿಸಿದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ 5ನೇ ತರಗತಿವರೆಗೆ ಶಾಲೆಗಳನ್ನು ಮುಚ್ಚಲು ಆದೇಶಿಸಿದೆ. ಮುಂದಿನ ಆದೇಶದವರೆಗೆ ಐದನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದಂತೆ ಆಡಳಿತ ಮಂಡಳಿ ಸೋಮವಾರ ಅವರ ಪೋಷಕರಿಗೆ ಸುಚಿಸಲಾಗಿದೆ.

ದೆಹಲಿ ಶಿಕ್ಷಣ ನಿರ್ದೇಶನಾಲಯ ಇಲ್ಲಿನ ಎಲ್ಲ ಸರ್ಕಾರ ಹಾಗೂ ಖಾಸಗಿ ಶಾಲೆಗಳಿಗೆ ಅನ್ವಯವಾಗುವಂತೆ ಈ ಶಾಲಾ ಬಂದ್ ಆದೇಶ ಹೊರಡಿಸಿದೆ. ಜೊತೆಗೆ ಮಕ್ಕಳ ಕಲಿಕೆ ಹಿಂದುಳಿಯದಂತೆ ಹಾಗೂ ಅವರ ವಿದ್ಯಾಭ್ಯಾಸಕ್ಕೆ, ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಆನ್‌ಲೈನ್ ಕ್ಲಾಸ್ ಆರಂಭಿಸುವಂತೆ ತಿಳಿಸಿದೆ. ಮಕ್ಕಳು ಶಾಲಾಗೆ ಬಾರದೇ ಮನೆಯಲ್ಲೇ ಆನ್‌ಲೈನ್ ತರಗತಿಗೆ ಹಾಜರಾಗಬೇಕಿದೆ. ಇನ್ನೂ 6ರಿಂದ ಉಳಿದ ತರಗತಿಗಳು ಶಾಲೆಗಳಲ್ಲೇ ನಡೆಯಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸೋಮವಾರ ದೆಹಲಿ ಸರಾಸರಿ AQI 471
ಇಂದು ಸೋಮವಾರ (ಡಿ.15) ಆರಂಭದಲ್ಲಿ ದೆಹಲಿಯಲ್ಲಿ ಸರಾಸರಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 471 ದಾಖಲಾಗಿದೆ. ಇದು ತೀರಾ ಕಳಪೆ ಪ್ರಮಾಣವಾಗಿದೆ. ಭಾರತದ ಮಾಲಿನ್ಯ ನಿಯಂತ್ರಣ ಸಂಸ್ಥೆ ಪ್ರಕಾರ, 101-200 AQI ಮಟ್ಟವನ್ನು ಮಧ್ಯಮ ಎಂದರೆ, 201-300 ಕಳಪೆ, 301-400 ತೀರಾ ಕಳಪೆ ಮತ್ತು 400 ಕ್ಕಿಂತ ಹೆಚ್ಚಿನದನ್ನು ಅತ್ಯಧಿಕ ತೀರಾ ಕಳಪೆ ಎಂದು ವರ್ಗೀಕರಿಸಲಾಗಿದೆ.
ದೆಹಲಿ ಜನರ ಆರೋಗ್ಯದ ಮೇಲೂ ಪ್ರಭಾವ
ಸೋಮವಾರ ದಾಖಲಾದ ಇಂತಹ ಗಾಳಿಯ ಅತ್ಯಂತ ವಿಷಯಕಾರಿ ಎನ್ನಲಾಗಿದೆ. ಕಳಪೆ ಗಾಳಿಯಿಂದ ಉಸಿರಾಟಕ್ಕೆ ತೊಂದರೆ ಉಂಟಾಗಲಿದೆ. ಕಣ್ಣಿಗೂ ಕಿರಿಕಿರಿ ಅನುಭವ ನೀಡಲಿದೆ. ಹೃದಯ ಮತ್ತು ಶ್ವಾಸಕೋಶ ಕಾಯಿಲೆಗಳು ಬೇಗನೆ ಉಲ್ಬಣಗೊಳ್ಳುತ್ತವೆ. ಆರೋಗ್ಯಯುತ ವ್ಯಕ್ತಿಗಳು ವಿವಿಧ ಅನಾರೋಗ್ಯ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆರೋಗ್ಯದ ಕಡೆಗೆ ಗಮನ ಹರಿಸುವಂತೆ ದಹಲಿ ಸರ್ಕಾರ ತಿಳಿಸಿದೆ.












Click it and Unblock the Notifications