ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ ವಿರುದ್ಧ ಹೋರಾಡಿ, ಕೇಜ್ರಿಗೆ ಅಣ್ಣಾ ಕಿವಿಮಾತು

By Mahesh
|
Google Oneindia Kannada News

ನವದೆಹಲಿ,ಫೆ.10: ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಅಭೂತ ಪೂರ್ವ ಜಯದತ್ತ ದಾಪುಗಾಲಿರಿಸಿರುವ ಆಮ್ ಆದ್ಮಿ ಪಕ್ಷಕ್ಕೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅಭಿನಂದಿಸಿದ್ದಾರೆ. ದೆಹಲಿ ಸಿಎಂ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಅವರ ಸಾಧನೆಯನ್ನು ಮೆಚ್ಚಿದ್ದಲ್ಲದೆ ಅವರಿಗೆ ಕಿವಿಮಾತನ್ನು ಅಣ್ಣಾ ಹಜಾರೆ ನೀಡಿದ್ದಾರೆ.

ಅರವಿಂದ್ ಕೇಜ್ರಿವಾಲ್‌ರವರು ಮತ್ತೊಮ್ಮೆ ದೆಹಲಿ ಜನರ ವಿಶ್ವಾಸವನ್ನು ಗಳಿಸಿರುವುದು ಒಳ್ಳೆ ಬೆಳವಣಿಗೆ. ಅವರನ್ನು ನಾನು ಅಭಿನಂದಿಸುತ್ತೇನೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ನಾವೆಲ್ಲ ಒಟ್ಟಿಗೆ ಹೋರಾಟ ಮಾಡಿದ್ದೆವು. ಅರವಿಂದ್ ಕೇಜ್ರಿವಾಲ್ ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.[ನೆಲಕಚ್ಚಿದ ಕಮಲ, ಎಎಪಿಗೆ ಅಭೂತಪೂರ್ವ ಜಯ]

ಮಹಾರಾಷ್ಟ್ರದ ರಳೆಗಾಂವ್ ಸಿದ್ದಿ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿದ ಗಾಂಧಿವಾದಿ ಅಣ್ಣಾ ಹಜಾರೆ ಅವರು 2011ರಲ್ಲಿ ಆರಂಭಿಸಿದ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಸ್ಮರಿಸಿಕೊಂಡರು. ಕೇಜ್ರಿವಾಲ್ ಅವರು ತಮ್ಮ ಆಂದೋಲನವನ್ನು ಮುಂದುವರೆಸುತ್ತಾರೆ ಎಂಬ ನಂಬಿಕೆ ಇದೆ. ಭಷ್ಟ್ರಾಚಾರ ವಿರೋಧಿ ಎಂಬ ಕಾರಣಕ್ಕೆ ಜನ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಅಣ್ಣಾ ಕಿವಿಮಾತು ಹೇಳಿದ್ದಾರೆ.

Best wishes to you, Anna Hazare tells Arvind Kejriwal

ಬೇಡಿ ದೂಷಿಸಬೇಡಿ: ಬಿಜೆಪಿ ಸೋಲಿಗೆ ಕಿರಣ್ ಬೇಡಿ ಅವರನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದು ಅಣ್ಣಾ ಹಜಾರೆ ಹೇಳಿದ್ದಾರೆ. ಒಂದು ಕಾಲದಲ್ಲಿ ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಕಿರಣ್ ಬೇಡಿ, ಕೇಜ್ರಿವಾಲ್ ಭಾಗವಹಿಸಿದ್ದರು. ಲೋಕಪಾಲ್ ಮಸೂದೆಗಾಗಿ ಇವರು ಮಾಡಿದ ಹೋರಾಟ ದೇಶಾದ್ಯಂತ ಬೆಂಬಲ ವ್ಯಕ್ತವಾಗಿತ್ತು. ನಂತರದ ದಿನಗಳಲ್ಲಿ ಅರವಿಂದ್ ಕೇಜ್ರಿವಾಲ್ ರಾಜಕೀಯದತ್ತ ವಾಲಿದ್ದರು. ಆಮ್ ಆದ್ಮಿ ಪಕ್ಷ ರಚಿಸಿ ದೆಹಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. [ಚುನಾವಣೆ ಫಲಿತಾಂಶ ಅಪ್ಡೇಟ್ಸ್]

ಈ ಹಿಂದೆ ಪ್ರಥಮ ಬಾರಿ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್‌ನ ಎಂಟು ಅಭ್ಯರ್ಥಿಗಳ ಬಾಹ್ಯ ಬೆಂಬಲ ಪಡೆದು ಸರ್ಕಾರ ರಚಿಸಿದ್ದ ಅರವಿಂದ್ ಕೇಜ್ರಿವಾಲ್ ಅವರು ಜನಲೋಕಪಾಲ್ ಮಸೂದೆ ಅನುಷ್ಠಾನಕ್ಕೆ ತರಲು ಸಾಧ್ಯವಾಗದ ಕಾರಣ ನೀಡಿ 49 ದಿನಗಳಲ್ಲಿ ರಾಜೀನಾಮೆ ನೀಡಿದ್ದರು. ನಂತರ ನಡೆದ ಚುನಾವಣೆಯಲ್ಲಿ ಅಣ್ಣಾ ಹಜಾರೆಯವರ ಜೊತೆಯ ಹೋರಾಟಗಾರ್ತಿಯಾದ ಕಿರಣ್ ಬೇಡಿ ಕೂಡ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಅವರ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ತೊರೆದಿದ್ದ ಶಾಜಿಯಾ ಇಲ್ಮಿ ಅವರು ಬಿಜೆಪಿ ಸೇರಿದ್ದರು. ಈಗ ದೆಹಲಿಯಲ್ಲಿ ಮತ್ತೊಮ್ಮೆ ಎಎಪಿ ದರ್ಬಾರ್ ಆರಂಭಗೊಳ್ಳುತ್ತಿದೆ.

English summary
Gandhian activist Anna Hazare Tuesday extended his "best wishes" to his protege and AAP leader Arvind Kejriwal as his party headed for a landslide win in the Delhi assembly election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X