Delhi: ಎಎಪಿ, ಅರವಿಂದ್ ಕೇಜ್ರಿವಾಲ್‌ಗೆ ಹೊಸ ಸಂಕಷ್ಟ ಕೊಟ್ಟ ಬಿಜೆಪಿ!
Delhi: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಆಮ್ ಆದ್ಮಿ ಪಾರ್ಟಿಗೆ ಸಂಕಷ್ಟಗಳು ತಪ್ಪುತ್ತಿಲ್ಲ. ದೆಹಲಿ ವಿಧಾನಸಭೆಗೆ ಈಚೆಗೆ ನಡೆದ ಚುನಾವಣೆಯಲ್ಲಿ ಎಎಪಿ ಹೀನಾಯವಾಗಿ ಸೋತಿದೆ. ಇದರ ಬೆನ್ನಲ್ಲೇ ಇದೀಗ ಎಎಪಿ ಅಧಿಕಾರದಲ್ಲಿ ಇರುವ ಪಂಜಾಬ್‌ನಲ್ಲೂ ಬಣ ಬಡಿದಾಟ ಹಾಗೂ ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಇದರ ನಡುವೆ ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಪಕ್ಷಕ್ಕೆ ಮತ್ತೆ ಬಿಜೆಪಿ ಶಾಕ್ ನೀಡುವುದಕ್ಕೆ ಮುಂದಾಗಿದೆ. ದೆಹಲಿ ಎಎಪಿಗೆ ಭದ್ರಕೋಟೆಯಾಗಿತ್ತು. ಆದರೆ, ದೆಹಲಿಯಲ್ಲೇ ಎಎಪಿ ಸೋತಿದೆ. ಇದೀಗ ಎಎಪಿ ಕಾಲದ ಆಡಳಿತದಲ್ಲಿ ನಡೆದ ವಿಷಯಗಳನ್ನು ಕೆದಕಲು ಬಿಜೆಪಿ ಮುಂದಾಗಿದೆ. ಅರವಿಂದ್ ಕೇಜ್ರಿವಾಲ್ ಅವರು ಐಷಾರಾಮಿ ಜೀವನ ನಡೆಸಿದ್ದರು ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ ಬಿಜೆಪಿ ಬರೋಬ್ಬರಿ 27 ವರ್ಷಗಳ ನಂತರ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬರುತ್ತಿದ್ದಂತೆಯೇ ಎಎಪಿ ಅಧಿಕಾರದ ಅವಧಿಯಲ್ಲಿ ಆಗಿರುವ ತಪ್ಪುಗಳನ್ನು ಹಾಗೂ ಹಗರಣಗಳ ಬಗ್ಗೆ ತನಿಖೆ ನಡೆಸುವುದಾಗಿ ಬಿಜೆಪಿ ಹೇಳಿದೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಚರ್ಚೆಯಾಗಿದ್ದ ದೆಹಲಿಯ ಸರ್ಕಾರಿ ಬಂಗಲೆ ಶೀಶ್ ಮಹಲ್‌ನ ನವೀಕರಣ ವೆಚ್ಚ ಹಾಗೂ ಅಲ್ಲಿನ ಐಷಾರಾಮಿ ವಸ್ತುಗಳ ಬಗ್ಗೆ ತನಿಖೆ ಮಾಡುವುದಾಗಿ ಬಿಜೆಪಿ ಹೇಳಿದೆ. ಇದು ಎಎಪಿಯಲ್ಲಿ ನಡುಕವನ್ನುಂಟು ಮಾಡಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾದ ವಿಷಯಗಳಲ್ಲಿ ಶೀಶ್ ಮಹಲ್ ನವೀಕರಣವೂ ಒಂದಾಗಿದೆ. ಇದೀಗ ಇಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಿಜೆಪಿ ಉನ್ನತ ಮಟ್ಟದ ತನಿಖೆಯನ್ನು ನಡೆಸುವುದಕ್ಕೆ ಮುಂದಾಗಿದೆ. ಶೀಶ್ ಮಹಲ್ ಎನ್ನುವುದು ದೆಹಲಿಯ ಸರ್ಕಾರಿ ಬಂಗಲೆಯಾಗಿದೆ. ಇದನ್ನು ಅಲ್ಲಿನ ಮುಖ್ಯಮಂತ್ರಿ ಬಳಕೆಗೆ ನೀಡಲಾಗುತ್ತದೆ. ಇದೀಗ ಈ ಸರ್ಕಾರಿ ಬಂಗಲೆಯ ನವೀಕರಣದಲ್ಲಿ ಅವ್ಯವಹಾರವಾಗಿದೆ ಎಂದು ಬಿಜೆಪಿ ದೂರಿದ್ದು. ಅದರ ತನಿಖೆಯನ್ನು ಮಾಡುವುದಕ್ಕೆ ಕೇಂದ್ರ ವಿಚಕ್ಷಣ ದಳಕ್ಕೆ ಕೇಂದ್ರ ಲೋಕೋಪಯೋಗಿ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಕೋವಿಡ್ ಸಮಯದಲ್ಲೇ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಸರ್ಕಾರಿ ಬಂಗಲೆಯನ್ನು ನವೀಕರಣ ಮಾಡಿರುವ ಆರೋಪ ಎಎಪಿ ಹಾಗೂ ಅದರ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಮೇಲಿದೆ. ಸರ್ಕಾರಿ ಅಧಿಕೃತ ನಿವಾಸದ ನವೀಕರಣಕ್ಕಾಗಿ ಕೇಜ್ರಿವಾಲ್ ಅವರು 33 ಕೋಟಿ ರೂಪಾಯಿಗೂ ಹೆಚ್ಚು ದುಂದುವೆಚ್ಚ ಮಾಡಿದ್ದಾರೆ ಎನ್ನುವ ಆರೋಪ ಇದೆ.
ಇನ್ನು ಈ 6 ಫ್ಲ್ಯಾಗ್‌ಸ್ಟಾಫ್ ಬಂಗ್ಲೆಯ ನವೀಕರಣ ಮತ್ತೆ ಅದರಲ್ಲಿರುವ ಐಷಾರಾಮಿ ವಸ್ತುಗಳ ಬಗ್ಗೆ ವಿಸ್ತೃತ ತನಿಖೆ ಮಾಡುವುದಕ್ಕೆ ಆದೇಶ ಮಾಡಲಾಗಿದೆ. ಮದ್ಯನೀತಿ ಹಗರಣದಲ್ಲೂ ಎಎಪಿಗೆ ಪೂರ್ಣ ಪ್ರಮಾಣದ ಕ್ಲೀನ್ ಚೀಟ್ ಸಿಕ್ಕಿಲ್ಲ. ದೆಹಲಿಯಲ್ಲೂ ಅಧಿಕಾರ ಕಳೆದುಕೊಂಡಿದೆ. ಪಂಜಾಬ್‌ನಲ್ಲಿ ಬಿರುಕು ಮಾಡುತ್ತಿದೆ. ಇಷ್ಟೆಲ್ಲರ ನಡುವೆ ಇದೀಗ ಶೀಶ್ ಮಹಲ್ ಹಗರಣದ ತನಿಖೆಯನ್ನೂ ಬಿಜೆಪಿ ಪ್ರಾರಂಭಿಸಿದ್ದು, ಎಎಪಿಗೆ ತಲೆನೋವಾಗಿದೆ. ಎಲ್ಲಾ ವಿಷಯದಲ್ಲೂ ಸಂಕಷ್ಟ ಎದುರಾಗಿದೆ.












Click it and Unblock the Notifications