Delhi hit-and-run case: 3 ಕಿಮೀ ಛಾವಣಿ ಮೇಲೆ ವ್ಯಕ್ತಿಯೊಂದಿಗೆ ಚಲಿಸಿದ ಕಾರು- ಓರ್ವ ಸಾವು
ದೆಹಲಿ ಮೇ 3: ದೆಹಲಿಯ ಹೈ ಸೆಕ್ಯುರಿಟಿ ವಿಐಪಿ ವಲಯದಲ್ಲಿ ಶನಿವಾರ ರಾತ್ರಿ ನಡೆದ ಹಿಟ್ ಅಂಡ್ ರನ್‌ನ ಆಘಾತಕಾರಿ ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಜೊತೆಗೆ ಘಟನೆಯಲ್ಲಿ ಮತ್ತೊಬ್ಬ ಸೋದರಸಂಬಂಧಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ 30 ವರ್ಷದ ದೀಪಾಂಶು ವರ್ಮಾ ಎಂಬುವವರು ಸಾವನ್ನಪ್ಪಿದ್ದು 20 ವರ್ಷದ ಸೋದರ ಸಂಬಂಧಿ ಮುಕುಲ್ ತೀವ್ರ ಗಾಯಗೊಂಡಿದ್ದಾರೆ.

ಘರ್ಷಣೆಯ ನಂತರ ಯುವಕರಲ್ಲಿ ಒಬ್ಬರು ಹಲವಾರು ಅಡಿಗಳಷ್ಟು ದೂರ ಬಿದ್ದಿದ್ದಾರೆ. ಮತ್ತೊಬ್ಬರು ಕಾರಿನ ಛಾವಣಿಯ ಮೇಲೆ ಬಿದ್ದಿದ್ದಾರೆ. ಆದರೆ ಕಾರು ಚಾಲಕ ಕಾರು ನಿಲ್ಲಿಸದೆ ಛಾವಣಿಯ ಮೇಲೆ ಗಾಯಗೊಂಡ ವ್ಯಕ್ತಿಯೊಂದಿಗೆ ವೇಗವಾಗಿ ಚಲಿಸಿದ್ದಾನೆ.
ವೀಡಿಯೋ ರೆಕಾರ್ಡ್ ಮಾಡಿದ ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಸ್ತೂರಬಾ ಗಾಂಧಿ ಮಾರ್ಗ ಮತ್ತು ಟಾಲ್‌ಸ್ಟಾಯ್ ಮಾರ್ಗದ ಛೇದಕದಲ್ಲಿ ಈ ಘಟನೆ ನಡೆದಿದ್ದು, ಕಾರು ಚಾಲಕನೊಬ್ಬ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯ ಪ್ರತ್ಯಕ್ಷದರ್ಶಿ ಮೊಹಮ್ಮದ್ ಬಿಲಾಲ್, ಘಟನೆಯನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡುವಾಗ ಪರಾರಿಯಾಗುತ್ತಿದ್ದ ವಾಹನವನ್ನು ತನ್ನ ಸ್ಕೂಟರ್‌ನಲ್ಲಿ ಹಿಂಬಾಲಿಸಿದ್ದಾರೆ. ಈ ವೇಳೆ ಕಾರ್ ಚಾಲಕನಿಗೆ ಹಾರ್ನ್ ಮಾಡಿ ಕೂಗಿ ಎಚ್ಚರಿಸಲು ಯತ್ನಿಸಿದರೂ ಕಾರು ನಿಲ್ಲಲಿಲ್ಲ.
ಘಟನೆಯ ವೀಡಿಯೊವನ್ನು ವೈರಲ್ ಆಗಿದ್ದು ಗಾಯಗೊಂಡ ಯುವಕ ವೇಗವಾಗಿ ಸಾಗುತ್ತಿದ್ದ ಕಾರಿನ ಛಾವಣಿಯ ಮೇಲೆ ಮಲಗಿರುವುದನ್ನು ತೋರಿಸುತ್ತದೆ.
ಸುಮಾರು 3 ಕಿಲೋಮೀಟರ್ ಓಡಿಸಿದ ನಂತರ ಶಂಕಿತರು ಗಾಯಗೊಂಡ ವ್ಯಕ್ತಿಯನ್ನು ದೆಹಲಿ ಗೇಟ್ ಬಳಿ ಕಾರಿನಿಂದ ಬೀಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇದರ ಪರಿಣಾಮ 30 ವರ್ಷದ ದೀಪಾಂಶು ವರ್ಮಾ ಗಾಯಗೊಂಡು ಸಾವನ್ನಪ್ಪಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಆತನ 20 ವರ್ಷದ ಸೋದರ ಸಂಬಂಧಿ ಮುಕುಲ್ ಸ್ಥಿತಿ ಚಿಂತಾಜನಕವಾಗಿದೆ. ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿದ್ದಾರೆ.
ಚಿನ್ನಾಭರಣ ಅಂಗಡಿ ನಡೆಸುತ್ತಿದ್ದ ದೀಪಾಂಶು ವರ್ಮಾ ಅವರು ತಂದೆ-ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಆತನ ಸಹೋದರಿ ಉನ್ನತಿ ವರ್ಮಾ ಸುದ್ದಿಗಾರರಿಗೆ ಮಾತನಾಡಿ, "ಘಟನೆಯನ್ನು ನೋಡಿದ ಇಬ್ಬರು ವ್ಯಕ್ತಿಗಳು ಕಾರನ್ನು ನಿಲ್ಲಿಸಲು ಪ್ರಯತ್ನಿಸಿದಾಗ, ಚಾಲಕ ವೇಗವನ್ನು ಹೆಚ್ಚಿಸಿದನು. ಅವನು (ದೀಪಾಂಶು) ಛಾವಣಿಯ ಮೇಲೆ ಇದ್ದಾಗ ಜೀವಂತವಾಗಿದ್ದನು. 4 ಕಿಲೋಮೀಟರ್ ದೂರ ಸಾಗಿ ಅವನನ್ನು ನೆಲಕ್ಕೆ ಬೀಳಿಸಿದಾಗ ತಲೆಗೆ ಪೆಟ್ಟಾಗಿದೆ. ಹೀಗಾಗಿ ಆತನ ಸಾವನ್ನಪ್ಪಿದ್ದಾನೆ. ಇದು ಉದ್ದೇಶಪೂರ್ವಕವಾಗಿದೆ" ಎಂದು ದೂರಿದ್ದಾರೆ.
"ಕಾರನ್ನು ಓಡಿಸುತ್ತಿದ್ದ ವ್ಯಕ್ತಿಯ ಹೆಸರು ಹರ್ನೀತ್ ಸ್ಂಗ್ ಚಾವ್ಲಾ ಎಂದು ಪೊಲೀಸರು ನಮಗೆ ತಿಳಿಸಿದ್ದಾರೆ. ಅವರು ಮಹೀಂದ್ರಾ ಎಕ್ಸ್‌ಯುವಿ ಓಡಿಸುತ್ತಿದ್ದರು. ಘಟನೆ ವೇಳೆ ಅವರು ಕುಡಿದಿದ್ದರು ಎಂದು ನಾನು ಭಾವಿಸುತ್ತೇನೆ. ಈ ರೀತಿಯ ಕೃತ್ಯವನ್ನು ಮಾಡಲು ಯಾರೂ ಯೋಚಿಸದಂತೆ ಕಠಿಣ ಶಿಕ್ಷೆ ವಿಧಿಸಬೇಕು" ಎಂದು ಉನ್ನತಿ ವರ್ಮಾ ಅವರು ಹೇಳಿದರು.
ದೆಹಲಿಯ ಕಂಝಾವಾಲಾದಲ್ಲಿ ಹೊಸ ವರ್ಷದ ದಿನದಂದು ಸುಮಾರು 12 ಕಿಲೋಮೀಟರ್ ದೂರದವರೆಗೆ ಕಾರಿನಲ್ಲಿ ಎಳೆದೊಯ್ದ 20 ವರ್ಷದ ಯುವತಿಯನ್ನು ಕೊಂದ ಭೀಕರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಈ ಘಟನೆಯು ಸಮಾನಾಂತರವಾಗಿದೆ.
ಮಹಿಳೆ ಅಂಜಲಿ ಸಿಂಗ್, ತನ್ನ ಸ್ಕೂಟರ್‌ನಲ್ಲಿ ಕೆಲಸದಿಂದ ಹಿಂತಿರುಗುತ್ತಿದ್ದಾಗ, ಐದು ಪುರುಷರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದರು. ಪೊಲೀಸರ ಪ್ರಕಾರ, ಅವರು ಕಾರಿನ ಕೆಳಗೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದಿದ್ದರೂ ಕಾರು ಚಾಲಕ ಕಾರು ನಿಲ್ಲಿಸದೇ ಹಾಗೇ ಕಾರು ಚಲಿಸಿದ್ದಾನೆ.












Click it and Unblock the Notifications